Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎತ್ತಿನಗಾಡಿ ಮೂಲಕ ಭರ್ಜರಿ ಪ್ರಚಾರಕ್ಕೆ ಧುಮುಕಿದ ಗವಿಯಪ್ಪ

ಸುದ್ದಿಮೂಲ ವಾರ್ತೆ .

ಹೊಸಪೇಟೆ ಏ.೦೯ : ನಗರದ 2ನೇ ವಾರ್ಡ್ 88 ಮುದ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಜನರ ಅಭಿಮಾನದ ಮೇರೆಗೆ ಎತ್ತಿನ ಗಾಡಿ ಮೂಲಕ ಭರ್ಜರಿ ಪ್ರಚಾರ ಪ್ರಾರಂಭಿಸಿದರು.


ವಿಜಯನಗರ ಕ್ಷೇತ್ರದ 2ನೇ ವಾರ್ಡ್ ಮುದ್ಲಾಪುರಕ್ಕೆ ಪ್ರ ಚಾರಕ್ಕೆ ಕಾಲಿಡುತ್ತಿದ್ದಂತೆ ವಾರ್ಡಿನ ಜನರು ಅದ್ದೂರಿಯಾ ಗಿ ಬರಮಾಡಿಕೊಂಡ  ಮತದಾರರನ್ನು ಉದ್ದೇ ಶಿಸಿ  ಮಾತ ನಾಡಿದ ಗವಿಯಪ್ಪ, ಕಾಂಗ್ರೆಸ್ ಪಕ್ಷ ಯಾವಾಗಲೂ ಬಡ ವರ, ರೈತರ, ಕಾರ್ಮಿಕರ, ಜನಸಾಮಾನ್ಯರ ಹಿತಕ್ಕಾಗಿ ಶ್ರಮಿಸುವ ಪಕ್ಷವಾಗಿದೆ. ಅದಕ್ಕಾಗಿ ಈ ಬಾರಿಯ ಪ್ರಣಾಳಿಕೆ ಯಲ್ಲಿ ಬಡವರಿಗೆ 10ಕೆ.ಜಿ.ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಡಿಯಲ್ಲಿ ಪ್ರತಿ ಮನೆಯ ಮಹಿಳೆಗೆ 2000 ರೂ. ಖಾತೆಗೆ ಜಮಾ ಮಾಡುವ ಜನಪ ರ ಯೋಜನೆಗಳನ್ನು ಜಾರಿಗೆ ತರಲು ಮುಂದಾ ಗಿದೆ. ಜನ ಪರವಾಗಿ ಹೋರಾಡುವ ಕಾಂಗ್ರೆಸ್ ಪಕ್ಷವನ್ನು ಪ್ರತಿಯೊಬ್ಬ  ಮತದಾರ ರು ಈ ಬಾರಿ  ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.


ಬಿಜೆಪಿ ಪಕ್ಷ ಪೆಟ್ರೋಲ್, ಡಿಸೇಲ್, ಗ್ಯಾಸ್, ಅಗತ್ಯ ವಸ್ತು ಗಳ ಬೆಲೆ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆ ಯುತ್ತಿದೆ. ಬಿಜೆಪಿ ಯಾವತ್ತೂ ಬಡವರ, ಸಾ ಮಾನ್ಯರ ಪರ ಇಲ್ಲ. ಅದಕ್ಕಾಗಿ ಜನ ಬದಲಾವಣೆ ಬಯಸಿದ್ದಾರೆ. ಈ ಬಾರಿ ಕಾಂ ಗ್ರೆಸ್ ಗೆಲುವು ಶತಸಿದ್ದ ಎಂದರು.


ನಂತರ ನಗರದ ಸಿದ್ದಲಿಂಗಪ್ಪ ಚೌಕಿ, ಅರವಿಂದನಗರ, ಡಿ ಪೋ ಏರಿಯ, 30ನೇ ವಾರ್ಡ , ಹಾಗು ಇಂಗಳಿಗಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ ರು. ಗವಿಯಪ್ಪನವರಿಗೆ ಪ್ರಚಾರದ ಸಂದರ್ಭದಲ್ಲಿ  ಅಭೂ ತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದೆ.




ಈ ಸಂಧರ್ಭದಲ್ಲಿಎಐಸಿಸಿ ಮಹಿಳಾ ಘಟಕದ ಚುನಾವ ಣಾ ಉಸ್ತುವಾರಿ ಶ್ರೀಮತಿ ಪ್ರತಿಭಾ, ಮುಖಂಡರಾದ ಸಿಎ ಸೈಯದ್ ಮಹಮ್ಮದ್, ನಗರಸಭೆ ಸದಸ್ಯ ಖಾರಪುಡಿ ಮಹೇಶ, ಮಾಜಿ‌ ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ ಕೆ.ರವಿಕುಮಾರ್, ಗೌರೀಶ ಬಣಕಾರ, ಎ.ಕೆ.ಉದೇದಪ್ಪ, ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಯೋಗಲಕ್ಷ್ಮಿ, ಸೇರಿದಂತೆ ಇತರರು ಇದ್ದರು.

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ