Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಶಿಕ್ಷಣ ನಿರಂತರ ಯಾತ್ರೆಯ ಅಮೂಲ್ಯ ಸಂಪತ್ತು : ರಾಜ್ಯಪಾಲ ಗೆಹ್ಲೋಟ್

ಸುದ್ದಿಮೂಲ ವಾರ್ತೆ ಬಳ್ಳಾರಿ, (ಸಿರುಗುಪ್ಪ), ಡಿ.24:
ಶಿಕ್ಷಣವು ನಿರಂತರ ಯಾತ್ರೆಯ ಅಮೂಲ್ಯ ಸಂಪತ್ತಾಾಗಿದ್ದು ದೇಶದ ಅಭಿವೃದ್ಧಿಿಗಾಗಿ ಸದ್ಭಳಗೆ ಆಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಕರೆ ನೀಡಿದ್ದಾಾರೆ.
ಬಳ್ಳಾಾರಿ-ಸಿರುಗುಪ್ಪ ರಸ್ತೆೆಯ ಮೌಂಟ್ ವ್ಯೂೆನಲ್ಲಿ ಇರುವ ಕಿಷ್ಕಿಿಂದ ವಿಶ್ವವಿದ್ಯಾಾಲಯದ ಆವರಣದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಾಲಯದ ಪ್ರಥಮ ಘಟಿಕೋತ್ಸವಕ್ಕೆೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾಾರ್ಥಿಗಳು ಜ್ಞಾಾನವಂತರಾಗಿ, ಉತ್ತಮ ಪ್ರಜೆಗಳಾಗಿ ರಾಷ್ಟ್ರಕ್ಕಾಾಗಿ ದುಡಿಯುವಂತೆ ಶಿಕ್ಷಣ ಉಪಯೋಗಕ್ಕೆೆ ಬರಬೇಕು ಎಂದರು.
ಶಿಕ್ಷಣ ಕೇವಲ ಪದವಿಗಾಗಿ ಸೀಮಿತ ಆಗಬಾರದು. ಶಿಕ್ಷಣ ಜ್ಞಾಾನ ಸಂಪಾದನೆಗೆ ಅವಕಾಶ ನೀಡುವಂತೆ ಇರಬೇಕು.
ಶಿಕ್ಷಣದ ಸಾಧನೆ ಜ್ಞಾಾನಮಾರ್ಗ ಆಗಿರಬೇಕು. ವಿದ್ಯಾಾರ್ಥಿಗಳು ಕಲಿತ ವಿದ್ಯೆಯನ್ನು ದೇಶದ ಏಳಿಗೆಗಾಗಿ ಧಾರೆ ಎರೆದು, ಅಭಿವೃದ್ಧಿ ಸಾಧಿಸುವಂತೆ ಇರಬೇಕು ಎಂದರು.
ನಮ್ ಯುವ ಸಮೂಹವು ಕೇವಲ ಬೌದ್ಧಿಕವಾಗಿ ಬೆಳೆಯದೇ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಪ್ರಾಾಚೀನ ಭಾರತೀಯ ಪರಂಪರೆ, ಸಂಸ್ಕಾಾರ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವಂತೆ ಬೆಳೆಯಬೇಕು. ಯುವಶಕ್ತಿಿಯು ನಮ್ಮ ಭಾರತದ ಸಮಗ್ರವಾದ ಮೂಲವನ್ನು ಭವಿಷ್ಯದ ಪರಂಪರೆಗೆ ಕೊಂಡೊಯ್ಯುವಂತೆ ಇರಬೇಕು. ಇಲ್ಲಿಯ ಪವಿತ್ರವಾದ ಮಣ್ಣಿಿನಲ್ಲಿ ಸ್ಥಾಾಪನೆ ಆಗಿರುವ ಕಿಷ್ಕಿಿಂದ ಖಾಸಗಿ ವಿಶ್ವವಿದ್ಯಾಾಲಯವು ಯುವಶಕ್ತಿಗೆ ಉತ್ತಮವಾದ ದಿಕ್ಸೂಚಿ ಆಗಿ ದೇಶಕ್ಕೆೆ ಕೊಡುಗೆ ನೀಡುವಂತೆ ಆಗಲಿ ಎಂದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, ಕಲ್ಯಾಾಣ ಕರ್ನಾಟಕದ ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆೆಗಳನ್ನು ಕಟ್ಟಿ - ಬೆಳೆಸುವುದು ಸವಾಲಿನ ಕೆಲಸ. ಅಂಥಹದ್ದರಲ್ಲಿ ಕೇವಲ 2 ವರ್ಷದಲ್ಲಿ ಕಿಷ್ಕಿಿಂದ ವಿಶ್ವವಿದ್ಯಾಾಲಯವು ಸರ್ವಾಂಗೀಣವಾಗಿ ಬೆಳೆದು ನಿಂತಿರುವುದು ಶ್ಲಾಾಘನೀಯ.
ಕರ್ನಾಟಕದಲ್ಲಿ ಪ್ರಸ್ತುತ 29 ಖಾಸಗಿ ವಿಶ್ವವಿದ್ಯಾಾಲಯಗಳಿವೆ. ಅಂತಾರಾಷ್ಟ್ರೀಯ ವಿಶ್ವವಿದ್ಯಾಾಲಯಗಳು ರಾಜ್ಯಕ್ಕೆೆ ಬರುತ್ತಿಿದ್ದು, ಗುಣಮಟ್ಟದ ಶಿಕ್ಷಣ, ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒಲವು ನೀಡಬೇಕಾಗಿದೆ.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಸೃಜನಶೀಲ - ಕ್ರಿಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಸಂಸದರಾದ ಜಗದೀಶ್ ಶೆಟ್ಟರ್ ಅವರು, ಹಿಂದುಳಿದ ತಾಲ್ಲೂಕುಗಳಲ್ಲಿ ವಿಶ್ವವಿದ್ಯಾಾಲಯಗಳನ್ನು ಸ್ಥಾಪಿಸಿರುವ ಸರ್ಕಾರದ ನಿರ್ಧಾರವು ಅತ್ಯಂತ ಪ್ರಶಂಸನೀಯ. ಕಿಷ್ಕಿಿಂದ ವಿಶ್ವವಿದ್ಯಾಲಯವು ಈ ಭಾಗದ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂದರು.
ವಳ ಬಳ್ಳಾಾರಿಯ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ಅಭಿನಂದಿಸಲಾಯಿತು.
ಎಂಬಿಎ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುವ ಶಬಾನಾ (9.33 ಸಿಜಿಪಿಎ) ಮತ್ತು ಬೆಳ್ಳಿಿ ಪದಕ ಪಡೆದಿರುವ ಸೌಗಂಧಿಕಾ ಲಕ್ಷ್ಮಿಿ (9.27 ಸಿಜಿಪಿಎ) ಅವರಿಗೆ ಹಾಗೂ ಎಂಸಿಎ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುವ ಸಜ್ಜ ಜಗತಿ ಅವರಿಗೆ (9.82 ಸಿಜಿಪಿಎ) ಮತ್ತು ಬೆಳ್ಳಿಿ ಪದಕ ಪಡೆದಿರುವ ಸಂಧ್ಯಾಾ ಜಿ (9.66 ಸಿಜಿಪಿಎ) ಅವರಿಗೆ ರ್ಯಾಾಂಕ್ ಮತ್ತು ಪದಕವನ್ನು ಪ್ರದಾನ ಮಾಡಿ, ಶುಭ ಕೋರಲಾಯಿತು. ಅಲ್ಲದೇ, 80 ವಿದ್ಯಾಾರ್ಥಿಗಳಿಗೆ ಘಟಿಕೋತ್ಸವದ ಪದವಿಯನ್ನು ಘೋಷಣೆ ಮಾಡಿ, ಪ್ರಮಾಣವಚನ ಬೋಧಿಸಲಾಯಿತು.
ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ, ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ, ಟಿ.ಇ.ಎಚ್.ಆರ್.ಡಿ ಟ್ರಸ್‌ಟ್‌ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್, ಕಿಷ್ಕಿಿಂದ ವಿಶ್ವವಿದ್ಯಾಾಲಯದ ಕುಲಾಧಿಪತಿ ಡಾ. ಯಶವಂತ್ ಭೂಪಲ್, ಕುಲಸಚಿವ ಡಾ. ಯು. ಈರಣ್ಣ, ಕುಲಪತಿ (ಮೌಲ್ಯಮಾಪನ) ಡಾ. ರಾಜು ಜಾಡರ್, ಹಣಕಾಸು ಅಧಿಕಾರಿ ವೈ. ನಮ್ರತಾ ಸೇರಿದಂತೆ ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾಾರ್ಥಿಗಳು ಹಾಗೂ ಪೋಷಕರು ಉಪಸ್ಥಿಿತರಿದ್ದರು.
ಕಿಷ್ಕಿಿಂದ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊ.ಟಿ.ಎನ್. ನಾಗಭೂಷಣ ಅವರು ಸ್ವಾಾಗತ ಕೋರಿದರು. ಸಹಕುಲಾಧಿಪತಿ ವೈ.ಜೆ. ಪೃಥ್ವಿಿರಾಜ್ ಅವರು ವಂದನಾರ್ಪಣೆ ಸಲ್ಲಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ