Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗುಲಬರ್ಗಾ ವಿವಿ 43ನೇ ಘಟಿಕೋತ್ಸವ ಸವಾಲು ಎದುರಿಸಲು ಜ್ಞಾನ ಅವಶ್ಯಕ - ಗೆಹ್ಲೋಟ್

ಸುದ್ದಿಮೂಲ ವಾರ್ತೆ ಕಲಬುರಗಿ, ೆ.24:
ಜೀವನದಲ್ಲಿ ಯಶಸ್ಸಿಿನ ಹಾದಿ ಯಾವಾಗಲೂ ಸುಲಭವಲ್ಲ. ಸವಾಲುಗಳು ಎದುರಾಗುತ್ತವೆ, ಸಂದರ್ಭಗಳು ಬದಲಾಗುತ್ತವೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಾಸ, ನೈತಿಕ ಮೌಲ್ಯಗಳು ಮತ್ತು ಕಠಿಣ ಪರಿಶ್ರಮದ ಮನೋಭಾವವಿದ್ದರೆ, ನೀವು ಪ್ರತಿಯೊಂದು ಅಡೆತಡೆಯನ್ನೂ ನಿವಾರಿಸಿ ಜೀವನದಲ್ಲಿ ಗೆಲ್ಲಬಹುದು ಎಂದು ರಾಜ್ಯಪಾಲ ಥಾವರ ಚಂದ್ ಗೆಹ್ಲೋೋಟ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಾಲಯದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿದ ಗುಲಬರ್ಗಾ ವಿಶ್ವವಿದ್ಯಾಾಲಯದ 43ನೇ ಘಟಿಕೋತ್ಸವದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಿ ಮತ್ತು ವಿದ್ಯಾಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ನೀವು ಪಡೆಯುವ ಶಿಕ್ಷಣವು ನಿಮ್ಮ ವೃತ್ತಿಿಜೀವನವನ್ನು ಯಶಸ್ವಿಿಯಾಗಿ ಸಾಧಿಸಲು ಸಹಾಯ ಮಾಡುವುದಲ್ಲದೆ, ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ ಎಂಬುದು ನನ್ನ ದೃಢವಿಶ್ವಾಾಸ. ಜೀವನದ ಯಶಸ್ಸಿಿನಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಕಲಿತ ಶಿಕ್ಷಣ ವ್ಯರ್ಥವಾಗುವುದಿಲ್ಲ ಎಂದರು.
ಕಲ್ಯಾಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆೆ ಒತ್ತು : ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಾಲಯಗಳ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ ಮಾತನಾಡಿ, ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ನಮ್ಮ ಸರ್ಕಾರ ಕಟಿಬದ್ದವಾಗಿದ್ದು, ಕೆ.ಕೆ.ಅರ್.ಡಿ.ಬಿ. ಅನುದಾನದಿಂದ ಗ್ರಾಾಮೀಣ ಭಾಗದಲ್ಲಿ ಕರ್ನಾಟಕ ಪಬ್ಲಿಿಕ್ ಶಾಲೆ ತೆರೆಯಲಾಗುತ್ತಿಿದೆ ಎಂದರು.
ಬುನಾದಿ ಭದ್ರವಾದರೆ ಮಾತ್ರ ಮುಂದೆ ಬೆಳೆಯಲು ಸಾಧ್ಯ. ಹೀಗಾಗಿ ನರ್ಸರಿಯಿಂದ ಪಿ.ಯು.ಸಿ ವರೆಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಕನ್ನಡ-ಆಂಗ್ಲ ಬೋಧನೆಯ ಪಬ್ಲಿಿಕ್ ಶಾಲೆ ಪ್ರಾಾರಂಭಿಸಲಾಗುತ್ತಿಿದೆ. ಅಂಗನವಾಡಿ ಶಿಕ್ಷಣದಲ್ಕೂ ಗಮನಾರ್ಹ ಬದಲಾವಣೆ ತರುತ್ತಿಿದ್ದೇವೆ ಎಂದ ಅವರು, ಮಾತೃ ಭಾಷೆ ಜೊತೆಗೆ ಜಾಗತಿಕವಾಗಿ ಉದ್ಯೋೋಗ ಪಡೆಯಲು, ಉತ್ತಮ ಸಂವಹನಕ್ಕೆೆ ಇಂಗ್ಲೀಷ್ ಕಲಿಯುವುದು ಅವಶ್ಯಕ ಎಂದು ಪ್ರತಿಪಾದಿಸಿದರು.
ಪಥ ಇಲ್ಲದೆ ಕಡೆ ಹೊಸ ಹಾದಿ ನಿರ್ಮಿಸಿ : ಇದಕ್ಕು ಮುನ್ನ ಪುಣೆಯ ಉನ್ನತ ರಕ್ಷಣಾ ತಂತ್ರಜ್ಞಾನ ಸಂಸ್ಥೆೆ (ಡೀಮ್ಡ್ ವಿಶ್ವವಿದ್ಯಾಾಲಯ)ಯ ವಿಶ್ರಾಾಂತ ಕುಲಪತಿ ಪ್ರೊೊ. ಎಲ್.ಎಂ. ಪಟ್ನಾಾಯಕ್ ಅವರು ಘಟಿಕೋತ್ಸವ ಭಾಷಣ ಉದ್ದೇಶಿ ಮಾತನಾಡಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲ್ಯಾಾಭಿವೃದ್ಧಿಿಯ ಮೂಲಕ ಸಮ ಸಮಾಜದ ಪರಿವರ್ತನೆ ಸಾಧ್ಯ. ಎ.ಐ. ತಂತ್ರಜ್ಞಾನ ಎಲ್ಲೆಡೆ ವ್ಯಾಾಪಿಸುತ್ತಿಿದೆ. ಇದನ್ನು ಸಮರ್ಥವಾಗಿ ಬಳಕೆ ಮಾಡಬೇಕಿದ್ದು, ಹೀಗಾಗಿ ಪಥ ಇರುವ ಕಡೆ ಹೋಗದೆ ಪಥ ಇಲ್ಲದೆ ಕಡೆ ಹೋಗಿ ಹೊಸ ಹಾದಿ ನಿರ್ಮಿಸಬೇಕು ಎಂದರು.
77 ವಿದ್ಯಾಾರ್ಥಿಗಳಿಗೆ 172 ಚಿನ್ನದ ಪದಕ : ವಿವಿಧ ಸ್ನಾಾತಕ ಪದವಿ ಕೋರ್ಸುಗಳಿಗೆ 24 ಹಾಗೂ ವಿವಿಧ ಸ್ನಾಾತಕೋತ್ತರ ಕೋರ್ಸುಗಳಿಗೆ 148 ಸೇರಿ ಒಟ್ಟಾಾರೆ 172 ಚಿನ್ನದ ಪದಕಗಳನ್ನು 58 ಮಹಿಳಾ ವಿದ್ಯಾಾರ್ಥಿಗಳು ಹಾಗೂ 19 ಪುರುಷ ವಿದ್ಯಾಾರ್ಥಿಗಳು ಸೇರಿದಂತೆ 77 ವಿದ್ಯಾಾರ್ಥಿಗಳಿಗೆ ವಿತರಿಸಲಾಯಿತು. ಇನ್ನುಳಿದಂತೆ 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ಮಹಿಳಾ ವಿದ್ಯಾಾರ್ಥಿಗಳು ಮತ್ತು 5 ಪುರುಷ ವಿದ್ಯಾಾರ್ಥಿಗಳು ಸೇರಿ 19 ವಿದ್ಯಾಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.
19,133 ಅಭ್ಯರ್ಥಿಗಳಿಗೆ ಪದವಿ ಪ್ರದಾನ : ಪದವಿ ಕೋರ್ಸಿನಲ್ಲಿ 15,504, ಸ್ನಾಾತಕೋತ್ತರ ಕೋರ್ಸ್‌ನಲ್ಲಿ 3,462, ಪಿ.ಜಿ. ಡಿಪ್ಲೊೊಮಾ ಕೋರ್ಸಿನಲ್ಲಿ 44 ಹಾಗೂ ಪಿ.ಎಚ್.ಡಿ. ಪದವಿ 123 ಸೇರಿದಂತೆ ಒಟ್ಟಾಾರೆ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ 19,133 ವಿದ್ಯಾಾರ್ಥಿಗಳು ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 10,463 ಪುರುಷ ಹಾಗೂ 8,670 ಮಹಿಳಾ ವಿದ್ಯಾಾರ್ಥಿಗಳು ಸೇರಿದ್ದಾರೆ.
ಗುಲಬರ್ಗಾ ವಿವಿ ಕುಲಪತಿ ಪ್ರೊೊ. ಶಶಿಕಾಂತ್ ಉಡಿಕೇರಿ, ಕುಲಸಚಿವ ಪ್ರೊೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಾಧಿಕಾರಿ ಜಯಾಂಬಿಕ ಸೇರಿದಂತೆ ವಿದ್ಯಾಾ ವಿಷಯಕ್, ಸಿಂಡಿಕೇಟ್ ಸಮಿತಿ ಸದಸ್ಯರು, ವಿವಿ ಬೋಧಕ-ಬೋಧಕೇತರ ವೃಂದ, ವಿದ್ಯಾಾರ್ಥಿಗಳು, ಪಾಲಕರು ಭಾಗವಹಿಸಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ