Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರಪನಹಳ್ಳಿ ಕ್ಷೇತ್ರ: ಎಂಪಿ ಪ್ರಕಾಶ್ ಪುತ್ರಿಯರಿಂದ ಕರುಣಾಕರ ರೆಡ್ಡಿಗೆ ಟಫ್​ ಫೈಟ್​!

ಸುದ್ದಿಮೂಲ ವಾರ್ತೆ,

ವಿಜಯನಗರ: ಹರಪನಹಳ್ಳಿ ವಿಧಾನಸಭಾ ಮತಕ್ಷೇತ್ರವು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದು ದಾವಣಗೆರೆ ಜಿಲ್ಲೆಗೆ ಒಳಪಟ್ಟಿತ್ತು. ಕೆಲವು ದಿನಗಳ ಬಳಿಕ ಬಳ್ಳಾರಿ ಜಿಲ್ಲೆಗೆ ಸ್ಥಳಾಂತರಗೊಂಡಿತು. ಇತ್ತೀಚಿಗೆ ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಸೇರಿತು. ಈ ಪ್ರಹಸನವೆಲ್ಲ ನಡೆದಿದ್ದು ಕೇವಲ ಒಂದೇ ವರ್ಷದಲ್ಲಿ ಅನ್ನೋದು ವಿಪರ್ಯಾಸ. ಇದರಿಂದ ಕ್ಷೇತ್ರದ ಜನರು ಹೈರಾಣಾಗಿದ್ದು ಯಾರೂ ಕೂಡ ತಳ್ಳಿಹಾಕುವಂತಿಲ್ಲ.

ಕ್ಷೇತ್ರದಲ್ಲಿ ಸ್ಥಳೀಯರಿಗಿಂತ ವಲಸಿಗರ ಪಾರುಪಾತ್ಯವೇ ಹೆಚ್ಚು. ಈ ಕ್ಷೇತ್ರಕ್ಕೆ ಬಳ್ಳಾರಿಯಿಂದ ಕರುಣಾಕರ ರೆಡ್ಡಿ ಹಾಗೂ ಎಂಪಿ ಪ್ರಕಾಶ್ ಪುತ್ರ ಎಂಪಿ ರವೀಂದ್ರ ವಲಸೆ ಬಂದು ಗೆದ್ದಿದ್ದು ಇತಿಹಾಸ. ಆದರೆ, ಸತತವಾಗಿ 2 ಬಾರಿ ಗೆಲುವು ಸಾಧಿಸಿರುವ ಕರುಣಾಕರ ರೆಡ್ಡಿಗೆ ಈ ಸಲ ಕಾಂಗ್ರೆಸ್​ನಿಂದ ಎಂಪಿ ಪ್ರಕಾಶ್ ಪುತ್ರಿಯರಿಬ್ಬರು ಟಫ್ ಫೈಟ್ ನೀಡಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿದೆ.



ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ವಿಜಯನಗರ ಜಿಲ್ಲೆಗೆ ಸೇರಿಕೊಂಡಿದ್ದರೂ ಸದ್ಯ ದಾವಣಗೆರೆ ಲೋಕಾಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೊದಲು ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ಎಂಪಿ ರವೀಂದ್ರ, ಸಿದ್ದರಾಮಯ್ಯ (ಮುಖ್ಯಮಂತ್ರಿಯಾಗಿದ್ದಾಗ) ಅವರ ಮೇಲೆ ಒತ್ತಡ ತಂದು ಬಳ್ಳಾರಿ ಜಿಲ್ಲೆಗೆ ಸೇರಿಸಿದ್ದರು. ಹಿಂದುಳಿದ ಕ್ಷೇತ್ರವಾಗಿದ್ದರಿಂದ ಜೊತೆಗೆ ಹೈದರಬಾದ್ ಕರ್ನಾಟಕ 371ಜೆ ಕಲಾಂಗೆ ಸೇರ್ಪಡೆಯಾಗಬೇಕು ಎಂಬ ಕಾರಣಕ್ಕೆ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು. ಆದರೆ, ಕೆಲವು ದಿನಗಳ ಬಳಿಕ ಮಧ್ಯೆ ಬಳ್ಳಾರಿ ಇಬ್ಭಾಗವಾಗುವ ಮೂಲಕ ಹರಪನಹಳ್ಳಿಯನ್ನು ಮತ್ತೆ ವಿಜಯನಗರ ಜಿಲ್ಲೆಗೆ ಸೇರಿಸಲಾಯಿತು. ಹೀಗೇ ಪದೆ ಪದೇ ಜಿಲ್ಲೆ ಬದಲಾವಣೆ ಆಗಿದ್ದರಿಂದ ಜನರು ಹೈರಾಣಾಗಿದ್ದು ಸದ್ಯದ ಮಾತು.

ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಣಾಹಣಿ ಇದೆ. ಜೆಡಿಎಸ್​ ಸೇರಿದಂತೆ ಇತರೆ ಪಕ್ಷಗಳು ಸಹ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಯತ್ನ ನಡೆಸಿವೆ. ಎಂಪಿ ಪ್ರಕಾಶ್ ಕುಟುಂಬ ಹಾಗೂ ರೆಡ್ಡಿ ಕುಟುಂಬ ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತ. ಅವರ ಮುಂದುವರೆದ ಭಾಗವಾಗಿ ಎಂಪಿ ಪ್ರಕಾಶ್ ಪುತ್ರಿಯರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.

ಚುನಾವಣೆಗಳ ಇತಿಹಾಸ:2008ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಎಂಪಿ ಪ್ರಕಾಶ್ ಸೋಲುಂಡಿದ್ದರು. ಆಗ ಈ ಕ್ಷೇತ್ರ ಬಿಜೆಪಿ ವಶವಾಗಿತ್ತು. ಬಿಜೆಪಿ ಅಭ್ಯರ್ಥಿ ಜಿ ಕರುಣಾಕರ ರೆಡ್ಡಿ 69235 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂಪಿ ಪ್ರಕಾಶ್ ವಿರುದ್ಧ ಜಯಗಳಿಸಿದ್ದರು. ಎಂಪಿ ಪ್ರಕಾಶ್ 44017 ಮತಗಳನ್ನು ಪಡೆದು ಸೋಲುಂಡಿದ್ದರು. ಜೆಡಿಎಸ್ ಹೀನಾಯ ಸೋಲು ಕಂಡಿತ್ತು.

2013 ರ ವಿಧಾನಸಭಾ ಚುನಾವಣೆಯಲ್ಲಿ ತಂದೆ ಸೋಲಿಗೆ ಮಗ ಎಂ.ಪಿ ರವೀಂದ್ರ ಗೆಲುವು ಸಾಧಿಸುವ ಮೂಲಕ ರೆಡ್ಡಿ ವಿರುದ್ಧ ಪ್ರತಿಕಾರ ತೀರಿಸಿಕೊಂಡಿದ್ದರು. ಎಂಪಿ ರವೀಂದ್ರ 56954 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ 48548 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕೆಜೆಪಿ ಹೀನಾಯ ಸೋಲುಕಂಡಿದ್ದವು.

2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ 67603 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂಪಿ ರವೀಂದ್ರ ವಿರುದ್ಧ ಮತ್ತೆ ಗೆಲುವುದು ಸಾಧಿಸಿದ್ದರು. 57956 ಮತಗಳನ್ನು ಪಡೆಯುವ ಮೂಲಕ ಎಂಪಿ ರವೀಂದ್ರ ಸೋಲುಂಡಿದ್ದರು. ಜೆಡಿಎಸ್ ಪಕ್ಷ ಈ ಚುನಾವಣೆಯಲ್ಲಿಯೂ ಕೂಡ ಹೀನಾಯ ಸೋಲು ಕಂಡಿತ್ತು.

 

ಟಿಕೆಟ್ ಆಕಾಂಕ್ಷಿಗಳು : ಆಪ್​ ಪಕ್ಷದಿಂದ ನಾಗರಾಜ್ ಹೆಚ್​ ಅವರು ಕಣಕ್ಕಿಳಿಯಳಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಈವರೆಗೂ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ, ಟಿಕೆಟ್​ ಆಕಾಂಕ್ಷಿತರ ಪೈಪೋಟಿ ಜೋರಾಗಿದೆ. ಕಾಂಗ್ರೆಸ್​ನಿಂದ ಅರಸಿಕೆರೆ ಕೊಟ್ರೇಶ್, ಎಂಪಿ ವೀಣಾ ಮಹಾಂತೇಶ್, ಎಂಪಿ ಲತಾ, ಉಮೇಶ್ ಬಾಬು, ಯಶವಂತ ಗೌಡ, ಸುಭಾಷ್ ಚಂದ್ರ, ಐಗೂಳು ಚಿದಾನಂದಪ್ಪ, ಹಾಲೇಶ್ ಗೌಡ, ಹೆಚ್ ಬಿ ಪರಶುರಾಮಪ್ಪ, ಅಂಬಾಡಿ ನಾಗರಾಜ್, ಬೇಲೂರು ಅಂಜಪ್ಪ, ಚಂದ್ರಶೇಖರ್, ಶ್ರೀಧರ್ ಪೂಜಾರ್ ಸೇರಿದಂತೆ ಒಟ್ಟು 13 ಜನ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯಲ್ಲಿ ಹಾಲಿ ಶಾಸಕ ಕರುಣಾಕರ ರೆಡ್ಡಿ, ಆರುಂಡಿ ನಾಗರಾಜ್, ಬಿ ನಂಜುನ ಗೌಡ್ರು, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಹೀಗೆ ಒಟ್ಟು ನಾಲ್ಕು ಜನ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಹಾಲಿ ಶಾಸಕ ಕರುಣಾಕರ ರೆಡ್ಡಿ ಟಿಕೆಟ್​ ಸಿಗುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್​ನಿಂದ ಮಾಜಿ ಮಂತ್ರಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶೀ ಎಂಎನ್ ನಬೀ ಅವರ ಪುತ್ರ ನೂರ್ ಅಹ್ಮದ್, ಬೇಲ್ದಾರ್ ಬಾಷ್, ಶೀರಾಹಟ್ಟಿ ದಂಡ್ಯಪ್ಪಾ ಸೇರಿದಂತೆ ಒಟ್ಟು ಮೂವರು ಟಿಕೆಟ್​ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ನೂರ್ ಅಹ್ಮದ್ ಟಿಕೆಟ್​ ಸಿಗುವ ವಿಶ್ವಾಸದಲ್ಲಿದ್ದಾರೆ.

ಮತದಾರರ ವಿವರ:ಕ್ಷೇತ್ರದಲ್ಲಿ2,19,828 ಒಟ್ಟು ಮತದಾರರಿದ್ದಾರೆ. 1,17,528 ಪುರುಷರು ಮತದಾರರು, 1,02,290 ಮಹಿಳಾ ಮತದಾರರು ಹಾಗೂ 10 ಇತರೆ ಮತದಾರರು ಇದ್ದಾರೆ. ಲಿಂಗಾಯತ ಸಮೂದಾಯ ಇಲ್ಲಿ ನಿರ್ಣಾಯಕ. ಎಸ್ಸಿ-ಎಸ್ಟಿ, ಕುರುಬ, ಮುಸ್ಲಿಂ ಮತದಾರರು ಕೂಡ ಪ್ರಬಲರಾಗಿದ್ದಾರೆ.

ಕ್ಷೇತ್ರದ ಹಿನ್ನೋಟ :

2008 ರಲ್ಲಿ
ಜಿ. ಕರುಣಾಕರ ರೆಡ್ಡಿ ಬಿಜೆಪಿ 69235
ಎಂ.ಪಿ. ಪ್ರಕಾಶ್ ಕಾಂಗ್ರೆಸ್ 44017
ಪಿ. ರಾಮನಗೌಡ ಜೆಡಿಎಸ್ 4479

2013 ರಲ್ಲಿ
ಎಂ.ಪಿ. ರವೀಂದ್ರ ಕಾಂಗ್ರೆಸ್ 56954
ಜಿ. ಕರುಣಾಕರ ರೆಡ್ಡಿ ಬಿಜೆಪಿ 48548
ಎನ್. ಕೊಟ್ರೇಶ್ ಕೆಜೆಪಿ 27997
ಶಿರಾಜ್ ಶೇಕ್ ಬಿಎಸ್ಆರ್ 9687
ಎ.ಜಿ. ವಿಶ್ವನಾಥ್ ಜೆಡಿಎಸ್ 2294

2018
ಜಿ. ಕರುಣಾಕರ ರೆಡ್ಡಿ ಬಿಜೆಪಿ 67603
ಎಂ.ಪಿ. ರವೀಂದ್ರ ಕಾಂಗ್ರೆಸ್ 57956
ಎನ್. ಕೊಟ್ರೇಶ್ ಜೆಡಿಎಸ್ 37685
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ