Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶಿ ಹಸುವಿನ ಹಾಲು ಬಳಕೆಯಿಂದ ಆರೋಗ್ಯ ವೃದ್ಧಿ

ಸುದ್ದಿಮೂಲ ವಾರ್ತೆ

ತಿಪಟೂರು, ಜೂ.25: ದೇಶಿಯ ಹಸುಗಳ ಪಾಲನೆ ಪೋಷಣೆಯಿಂದ ಮನುಷ್ಯನ ಆರೋಗ್ಯವು ವೃದ್ಧಿಸುತ್ತದೆ ಹಾಗೂ ಪ್ರಕೃತಿಯ ಸಮತೋಲನಕ್ಕೆ ಹಾಗೂ ಪ್ರಾಕೃತಿಕ ಬೆಳವಣಿಗೆಗೆ ದೇಶಿಯ ಹಸುಗಳು ಸಹಕಾರಿಯಾಗಿರುತ್ತವೆ ಎಂದು ಶ್ರೀ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಜಿಯವರು ತಿಳಿಸಿದರು.

ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ದೇಶಿಯ ಗೋ ಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ, ದೇಶಿ ಗವ್ಯೋತ್ಪನ್ನ ಪರಿವಾರ ತಿಪಟೂರು ಇವರುಗಳ ಸಹಯೋಗದೊಂದಿಗೆ ಆಯೋಜನೆ ಮಾಡಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಇತ್ತೀಚಿನ ಆರ್ಥಿಕ ಅಭಿವೃದ್ಧಿಗಾಗಿ ಮಾನವನು ಸೀಮೆ ಹಸುಗಳನ್ನು ಸಾಕುತ್ತಿದ್ದು ಇದರಿಂದ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಆದರೆ ಮನುಷ್ಯನ ಆರೋಗ್ಯವು ಕ್ಷೀಣಿಸುತ್ತಿದೆ ಮನುಷ್ಯನ ಆರೋಗ್ಯಕ್ಕೆ ಹಾಗೂ ಪ್ರಕೃತಿಯಲ್ಲಿ ಮರಗಿಡಗಳು ಬೆಳವಣಿಗೆಗೆ ದೇಶಿಯ ಹಸುವಿನ ಹಾಲು ಹಾಗೂ ಸಗಣಿ ಮತ್ತು ಬೆರಣಿಯಿಂದ

ತಯಾರಿಸಿದ ಉಪ ಉತ್ಪನ್ನಗಳಿಂದ ಸಮೃದ್ಧಿ ಕಾಣಲು ಸಹಕಾರಿಯಾಗುತ್ತದೆ ಎಂದರು.

ಕೊನೆಹಳ್ಳಿ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಸುಮನಾ ಮಾತನಾಡಿ, ಇಂದು

ಮನುಷ್ಯನ ಆರೋಗ್ಯವು ಆಧುನಿಕತೆಗೆ ಒಳಕೊಂಡು ಸ್ವತಃ ತನ್ನಿಂದಲೇ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಆದ್ದರಿಂದ ಮನುಷ್ಯನ ಉತ್ತಮವಾದ ಆರೋಗ್ಯಕ್ಕೆ ದೇಶಿ ಹಸುವಿನ ಹಾಲು ಸಹಕಾರಿಯಾಗಿದೆ ಎಂದು ಹೇಳಿದರು.

ಚಿಕ್ಕನಾಯಕನಹಳ್ಳಿ ಗೋಶಾಲೆಯ ಶ್ರೀ ಗುರು ಮಾತನಾಡಿ, ದೇಶಿಯ ಹಸುವಿನ ಸಗಣಿಯಿಂದ ಹಾಗೂ ಮಲಮೂತ್ರಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗಿದ್ದು ಅದರಿಂದ ಪಂಚಗವ್ಯ ವಸ್ತುಗಳು ತಯಾರಿಸಲಾಗಿದೆ ಇದರ ಬಳಕೆಯಿಂದ ತಮ್ಮ ಜೀವನ ಶೈಲಿಯನ್ನು ಉತ್ತಮವಾಗಿಡಬಹುದೆಂದು ತಿಳಿಸಿದರು.

ಕ್ಯಾನ್ಸರ್ ತಜ್ಞ ಡಾ ಡಿ.ಪಿ ರಮೇಶ್ ಮಾತನಾಡಿ ಮನುಷ್ಯನಿಗೆ ಯಾವುದೇ ಕಾಯಿಲೆಗಳು ಬಂದರೂ ಹೆದರದೆ ಜಗ್ಗದೆ ಧೈರ್ಯವಾಗಿ ಅದನ್ನು ಎದುರಿಸುವ ಶಕ್ತಿಯನ್ನು ಪಡೆಯಬೇಕು, ಕ್ಲಿಷ್ಟಕರವಾದ ರೋಗಗಳಿಗೆ ದೇಶಿಯ ಗೋವಿನ ಪಂಚಗವ್ಯ ಸಹ ಒಂದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವರ್ಣ ಗೌರಮ್ಮ, ಸಂಸ್ಕಾರ ಭಾರತೀಯ ಶ್ರೀಧರ್ ಲಕ್ಕುವಳ್ಳಿ, ಆರ್ಥಿಕ ಸಮಾಲೋಚಕಿ ಶ್ರೀಮತಿ ರೇಖಾ ಮಂಜುನಾಥ್, ಭಾರತೀಯ ಕಿಸಾನ್ ಸಂಘದ ಗೌರವಾಧ್ಯಕ್ಷ ಶಂಕರಮೂರ್ತಿ ರಂಗಾಪುರ, ನಾಗರಿಕ ಹಿತರಕ್ಷಣಾ ವೇದಿಕೆ ರೇಣುಕಾರಾಧ್ಯ, ಯೋಗನಂದ ತಡಸೂರು, ರಾಜಶೇಖರ್, ಬಿಳೆಗೆರೆ ಪ್ರತಾಪ್, ವಿಧ್ಯಾರ್ಥಿ ಭಂಡಾರ ಲತಾಸುಂದರ್, ಕರ‍್ಯಕ್ರಮದಲ್ಲಿ ನವೀನ್ ನಿರೂಪಿಸಿ, ರೇಖಾ ವಂದಿಸಿದರು. ಕದಳಿ

ಬಳಗ, ಆರೋಗ್ಯ ಭಾರತಿ , ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ನಾಟಿ ಹಸುವಿಗೆ ಪಾದಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಕಾರ್ಯಕ್ರಮದಲ್ಲಿ ಅಗ್ನಿಹೋತ್ರ ದೇಶಿವಿನಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಎಲ್ಲರಿಗೂ ಉಚಿತ ಆರೋಗ್ಯತಪಾಸಣೆ ಮಾಡಿಸಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ