Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೀರೋಸ್ ಆನ್ ದ ರೋಡ್ ಪ್ರಶಸ್ತಿ ಪಡೆದ ಸಾಧಕರು

ಸುದ್ದಿಮೂಲ ವಾರ್ತೆ

ಬೆಂಗಳೂರು,ಏ.24:ಇಂದು ಕೆ ಎಸ್ ಆರ್ ಟಿ ಸಿ ಕೇಂದ್ರ ಕಚೇರಿಯಲ್ಲಿ, 33 ವರ್ಷಗಳ ಸುದೀರ್ಘ ಕಾಲ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ಪ್ರಧಾನ ಮಾಡುವ ಹೀರೋಸ್ ಆನ್ ದ ರೋಡ್ ಪ್ರಶಸ್ತಿ ಪಡೆದ ಎಜಾಜ್ ಅಹಮ್ಮದ್ ಶರೀಫ್ ಬಿಲ್ಲೆ ಸಂಖ್ಯೆ 1904 ಹುಣಸೂರು ಘಟಕ ಹಾಗೂ ಇಶಾಕ್ ಶರೀಫ್ ಬಿಲ್ಲೆ ಸಂಖ್ಯೆ 2197 ಸಾತಗಳ್ಳಿ ಘಟಕ ರವರನ್ನು. ವಿ.ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು ತಲಾ ರೂ. 5000/-ನಗದು ಪುರಸ್ಕಾರ ನೀಡಿ, ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ‌ ನಿರ್ದೇಶಕರು, ಈ ಚಾಲಕರುಗಳು ಈಗಾಗಲೇ ನಿಗಮದಿಂದ ಬೆಳ್ಳಿ ಮತ್ತು ಚಿನ್ನದ ಪದಕ ಪಡೆದಿರುವುದನ್ನು ಸ್ಮರಿಸಿದರು. ಹಾಗೂ ಚಾಲನಾ ವೃತ್ತಿಯು ಅತ್ಯಂತ ಕಷ್ಟ ಮತ್ತು ಜವಾಬ್ದಾರಿಯಿಂದ ಕೂಡಿದ್ದು, ಅಪಘಾತಗಳನ್ನು ತಡೆಗಟ್ಟುವುದು ಸವಾಲೇ ಸರಿ ! ತಮ್ಮದಲ್ಲದ ತಪ್ಪಿನಿಂದಲೂ ಹಲವು ಬಾರಿ ಅಪಘಾತ ಉಂಟಾಗುತ್ತದೆ. ಚಾಲಕರು ಹೆಚ್ಚು ಸಂಯಮ ಮತ್ತು ತಾಳ್ಮೆಯನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿ, ಸದರಿ ಚಾಲಕರುಗಳ ಸೇವೆಯು ಅನನ್ಯ ಮತ್ತು ಅನುಕರಣೀಯ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ತೆಲಂಗಾಣ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 2023ನೇ ಸಾಲಿನ ಸೌತ್ ಇಂಡಿಯನ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನಗಳಿಸಿ, ಚಿನ್ನದ ಪದಕ ಗೆದ್ದಿರುವ *ಶ್ರೀಮತಿ ಖುದ್ಸಿಯ ನಜೀರ್ ಕಿರಿಯ ಸಹಾಯಕಿ, ಮುದ್ರಣಾಲಯ ರವರನ್ನು ವ್ಯವಸ್ಥಾಪಕ ನಿರ್ದೇಶಕರವರು ಅಭಿನಂದಿಸಿ ಗೌರವಿಸಿದರು. ಕಠಿಣವಾದ ಪರಿಶ್ರಮದ ಮೂಲಕ ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಈ ಸಾಧನೆ ಮಾಡಿರುವುದು‌‌ ನಿಜಕ್ಕೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ.ಪ್ರಶಾಂತ್ ಕುಮಾರ್ ಮಿಶ್ರ ಭಾಆಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಹಾಗೂ ಹಿರಿಯ ಅಧಿಕಾರಿಗಳು, ಚಾಲಕರ ಕುಟುಂಬದವರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ