Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಜನ್‌ ಗಳ ಸೇವೆ ಅಳತೆ ಮೀರಿದ್ದು :ಹೈಕೋರ್ಟ್‌ ನ್ಯಾಯಮೂರ್ತಿ

ಬೆಂಗಳೂರು, ಜೂ, 25; ಸರ್ಜನ್‌ ಗಳು ಅಳತೆ ಮೀರಿದ ಸೇವೆ ಸಲ್ಲಿಸುತ್ತಿದ್ದು, ಆಧುನಿಕ ಬದುಕಿನ ಜೀವ ರಕ್ಷಕರಾಗಿದ್ದಾರೆ ಎಂದು ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಜಸ್ಟಿಸ್‌ ದಿನೇಶ್‌ ಕುಮಾರ್‌ ಹೇಳಿದ್ದಾರೆ.

ಶಸ್ತ್ರಚಿಕಿತ್ಸಕರ ದಿನ [ಸರ್ಜನ್ಸ್‌ ಡೇ]ದ ಅಂಗವಾಗಿ ಕರ್ನಾಟಕ ಸ್ಟೇಟ್‌ ಚಾಪ್ಟರ್‌ ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಆಫ್‌ ಇಂಡಿಯಾ ಹಾಗೂ ಸಹಯೋಗದಲ್ಲಿ ಸರ್ಜಿಕಲ್‌ ಸೊಸೈಟಿ ಆಫ್‌ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸರ್ಜನ್‌ ಗಳಾದ ಪ್ರೊ.ಪಿ.ಎಸ್.‌ ಪಾರ್ಥಿಬನ್‌, ಪ್ರೊ.ಎನ್.‌ ನರಸಿಂಹನ್‌ ಅವರನ್ನು ಗೌರವಿಸಿ ಮಾತನಾಡಿದ ಅವರು, ಸರ್ಜನ್‌ ಗಳು ಶಸ್ತ್ರಚಿಕಿತ್ಸೆ ನಡೆಸುವಾಗ ಜೀವನದಲ್ಲಿ ಒಮ್ಮೆ ಮಾತ್ರ ನೋವು ನೀಡುತ್ತಾರೆ. ಆದರೆ ಜೀವನ ಪರ್ಯಂತ ನಗು ನಗುತಾ ಬದುಕು ಸಾಗಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಶಸ್ತ್ರಚಿಕಿತ್ಸಕರು ಮಾನವ ರೂಪದ ದೇವರು ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಸಣ್ಣ ಸಣ್ಣ ವಿಚಾರಗಳು ಸಹ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗುತ್ತಿವೆ. ಸಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್‌ ಆಗುತ್ತಿವೆ. ವೈದ್ಯಕೀಯ ಕಾನೂನು ರೂಪಿಸುವ ಮುನ್ನ ವೈದ್ಯಕೀಯ ಸಮೂಹದ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ನಿರುಪಯುಕ್ತವಾಗಿದೆ ಎಂದರು.

ಶಸ್ತ್ರಚಿಕಿತ್ಸೆಯ ಭವಿಷ್ಯ, ಆಧುನಿಕ ತಂತ್ರಜ್ಞಾನ ಕುರಿತು ಯೆನೆಪೊಯ ವೈದ್ಯಕೀಯ ಡಾ. ಎಂ. ವಿಜಯ ಕುಮಾರ್‌ ಉಪನ್ಯಾಸ ನೀಡಿದರು.

ಕರ್ನಾಟಕ ಸ್ಟೇಟ್‌ ಚಾಪ್ಟರ್‌ ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಆಫ್‌ ಇಂಡಿಯಾ ಅಧ್ಯಕ್ಷ ಡಾ. ಎಚ್.ವಿ. ಶಿವರಾಮ್‌ ಮಾತನಾಡಿದ ಅವರು, ಶಸ್ತ್ರಚಿಕಿತ್ಸಾ ತಜ್ಞರುಗಳು ಮತ್ತೊಬ್ಬರ ಜೀವ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದಾರೆ. ಸರ್ಕಾರಿ, ಸಣ್ಣ ಸಣ್ಣ ಆಸ್ಪತ್ರೆಗಳಲ್ಲೂ ಜೀವ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಗರ, ಅರೆ ನಗರ ಪ್ರದೇಶಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮತ್ತಿತರ ಆರೋಗ್ಯ ಸೇವಾ ಚಟುವಟಿಕೆಗಳಲ್ಲೂ ತೊಡಗಿದ್ದಾರೆ.

ನಮ್ಮ ಸರ್ಜಿಕಲ್ ಸೊಸೈಟಿ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ಖ್ಯಾತ ಸರ್ಜಿಕಲ್ ಡಾಕ್ಟರ್ ಗಳು ಇದ್ದಾರೆ ಎಂದು ಹೇಳಿದರು. ಬೆಂಗಳೂರು ಸರ್ಜಿಕಲ್‌ ಸೊಸೈಟಿ ಅಧ್ಯಕ್ಷರಾದ ಡಾ. ವೆಂಕಟೇಶ್‌ ರವರು ಮಾತನಾಡಿ ಶುಶ್ರತರವರು ವಿಶ್ವದ ಮೊದಲ ಆಪರೇಷನ್ ಮಾಡಿದ ಸರ್ಜಿಕಲ್ ವೈದ್ಯ . ಅದರಿಂದ ಅಂತಾರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನವನ್ನು ಅಚರಿಸಲಾಗುತ್ತಿದೆ. ಕ್ಯಾನ್ಸರ್ ಮತ್ತು ಹೃದಯ ಸಂಭಂದಿದ ಮತ್ತು ಹಲವಾರು ರೋಗಗಳ ನಿವಾರಣೆಗಾಗಿ ಶಸ್ತ್ರಚಿಕಿತ್ಯೆ ಮುಖ್ಯ. ಇಂದು ಮೆಡಿಕಲ್ ಟೂರಿಸಂನಲ್ಲಿ ಬೆಂಗಳೂರುನಗರ ವಿಶ್ವಮಟ್ಚದಲ್ಲಿ ಹೆಸರು ಪಡೆದಿದೆ.

ಕರ್ನಾಟಕ ಸ್ಟೇಟ್‌ ಚಾಪ್ಟರ್‌ ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಆಫ್‌ ಇಂಡಿಯಾ ಅಧ್ಯಕ್ಷ ಡಾ. ಎಚ್.ವಿ. ಶಿವರಾಮ್‌,, ಖಜಾಂಚಿ ಡಾ. ರಾಜಶೇಖರ್‌ ಸಿ ಜಕ್ಕಾ, ಡಾ.ಕೆ.ಎಲ್.‌ ವೆಂಕಟೇಶ್‌, ಡಾ. ಮನೀಶ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ