Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿತ್ತಾಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆೆ ಹೈಕೋರ್ಟ್ ಅನುಮತಿ

ಸುದ್ದಿಮೂಲ ವಾರ್ತೆ ಕಲಬುರಗಿ, ನ.13:
ಚಿತ್ತಾಾಪುರದಲ್ಲಿ ನ.16ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನಕ್ಕೆೆ ಕರ್ನಾಟಕ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ.
ಕಳೆದ ಅಕ್ಟೋೋಬರ್ 19ರಂದು ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆೆ ಚಿತ್ತಾಾಪುರ ತಹಶೀಲ್ದಾಾರ್ ಅವರು ಕಾನೂನು ಸುವ್ಯವಸ್ಥೆೆ ಕಾರಣ ನೀಡಿ ಅನುಮತಿ ನಿರಾಕರಿಸಿದ್ದರು. ಈ ಆದೇಶ ಕುರಿತು ಆರ್‌ಎಸ್‌ಎಸ್ ಪರ ಅರ್ಜಿದಾರ ಅಶೋಕ್ ಪಾಟೀಲ್ ಕಲಬುರಗಿ ಹೈಕೋರ್ಟ್ ಪೀಠದ ಮೆಟ್ಟಿಿಲೇರಿದ್ದರು.
ನ್ಯಾಾ.ಎಂ.ಜಿ.ಎಸ್ ಕಮಲ್ ಅವರಿದ್ದ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠವು ಗುರುವಾರ ಸದರಿ ಪ್ರಕರಣದ ವಿಚಾರಣೆಯನ್ನು ನಡೆಸಿ, ಆರ್‌ಎಸ್‌ಎಸ್ ಪಥ ಸಂಚಲನಕ್ಕೆೆ ಷರತ್ತು ಬದ್ಧವಾಗಿ ಅನುಮತಿ ನೀಡಿ ಆದೇಶ ಹೊರಡಿಸಿದ್ದು, 300 ಜನ ಗಣವೇಷಧಾರಿ ಸ್ವಯಂಸೇವಕರು ಹಾಗೂ 50 ಜನ ಘೋಷ ವಾದಕರು ಪಥಸಂಚಲನದಲ್ಲಿ ಭಾಗಿಯಾಗುವಂತೆ ಅವಕಾಶ ನೀಡಿ ಆದೇಶಿಸಿದೆ.
ಪಥಸಂಚಲನ ಕುರಿತು ನ್ಯಾಾಯಾಲಯಕ್ಕೆೆ ಮಾಹಿತಿ ನೀಡಿದ ಜಿಲ್ಲಾಡಳಿತ, 350 ಜನರ ಮಿತಿಯೊಂದಿಗೆ ನ.16ರ ಮಧ್ಯಾಾಹ್ನ 3.30 ರಿಂದ ಸಂಜೆ 5.30ರವರೆಗೆ (ಸೂರ್ಯಾಸ್ತದವರೆಗೆ) ಪಥಸಂಚಲನಕ್ಕೆೆ ಅವಕಾಶ ನೀಡಲಾಗಿದೆ. ಮಧ್ಯಾಾಹ್ನ 3:30ರಿಂದ ಸಂಜೆ 5:45ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಕಲಬುರಗಿ ಹೈಕೋರ್ಟ್ ಪೀಠ ತಿಳಿಸಿದೆ.
ಪಥಸಂಚಲನದ ಅನುಮತಿ ಕುರಿತು ಈ ಹಿಂದೆ ಕಲಬುರಗಿಯಲ್ಲಿ ನಡೆದಿದ್ದ ಶಾಂತಿ ಸಭೆ ಯಾವುದೇ ಒಮ್ಮತವಿಲ್ಲದೆ ಅಂತ್ಯಗೊಂಡಿತ್ತು. ನಂತರ, ಹೈಕೋರ್ಟ್ ಸೂಚನೆಯಂತೆ ಅಡ್ವೊೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಿ ಅವರ ಬೆಂಗಳೂರಿನ ಕಚೇರಿಯಲ್ಲಿ 2ನೇ ಸುತ್ತಿಿನ ಸಭೆ ನಡೆದಿತ್ತು. ಈ ಸಭೆಯು ಲಪ್ರದವಾಗಿದೆ ಎಂದು ಕಳೆದ ವಿಚಾರಣೆಯಲ್ಲಿ ನ್ಯಾಾಯಾಲಯಕ್ಕೆೆ ತಿಳಿಸಲಾಗಿತ್ತು.ಬೆಂಗಳೂರಿನ ಸಭೆಯಲ್ಲಿ ಆರ್‌ಎಸ್‌ಎಸ್‌ಮುಖಂಡರು ನವೆಂಬರ್ 13 ಅಥವಾ 16ರಂದು ಅವಕಾಶ ನೀಡುವಂತೆ ಪ್ರಸ್ತಾಾವನೆ ಸಲ್ಲಿಸಿದ್ದರು. ಇದರ ಹಿನ್ನೆೆಲೆಯಲ್ಲಿ ನ.16ಕ್ಕೆೆ ಅನುಮತಿ ನೀಡಿ ಹೈಕೋರ್ಟ್ ಅಂತಿಮ ಆದೇಶ ಪ್ರಕಟಿಸಿದೆ.
ಇನ್ನೂ, ಜಿಲ್ಲಾಡಳಿತದ ಆದೇಶದಂತೆ ಶಾಂತಿಯುತವಾಗಿ, ಸೌಹಾರ್ದಯುತವಾಗಿ ನಾವು ಪಥಸಂಚಲನ ನಡೆಸುತ್ತೇವೆ. ಪಥಸಂಚಲನದಲ್ಲಿ 300 ಜನ ಗಣವೇಷಧಾರಿ ಸ್ವಯಂಸೇವಕರು, 50 ಜನರ ಘೋಷವಾದ್ಯದ ತಂಡ ಭಾಗಿಯಾಗಲಿದೆ. ಪಥಸಂಚಲಕ್ಕೆೆ ಅನುವು ಮಾಡಿದ ಎಜೆ ಶಶಿಕಿರಣ ಶೆಟ್ಟಿಿ, ಜಿಲ್ಲಾಡಳಿತಕ್ಕೆೆ, ಪೋಲಿಸ್ ವರಿಷ್ಠಾಾಧಿಕಾರಿಗೆ, ತಹಶೀಲ್ದಾಾರರಿಗೆ ಹಾಗೂ ವಿಶೇಷವಾಗಿ ನ್ಯಾಾಯಾಲಯಕ್ಕೆೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಆರ್‌ಎಸ್‌ಎಸ್ ಪರ ವಕೀಲ ಅರುಣ ಶ್ಯಾಾಂ ತಿಳಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ