Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೇಕಾಯಿ ಪರಿಷೆ

ಸಜಾಗುತ್ತಿದೆ ನಗರದ ಬುಲ್‌ ಟೆಂಪಲ್‌ ರಸ್ತೆ
ಚಿತ್ರ, ವರದಿ : ಜಿ.ಮೋಹನ್
 ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ. 07 : ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರ ನಡೆಯುವ ವಿಶ್ವ ವಿಖ್ಯಾತ ಬಸವನಗುಡಿಯ ಕಡಲೆ ಕಾಯಿ ಪರಿಷೆಗೆ ನಗರದ ಬಸವನಗುಡಿ ಬುಲ್ ಟೆಂಪಲ್ ರಸ್ತೆ ಸಜ್ಜಾಗುತ್ತಿದೆ.


ಬಸವನಗುಡಿಯ ದೊಡ್ಡ  ಬಸವಣ್ಣ ಮತ್ತು ಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿರುವ  ಬೃಹದಾಕಾರದ ನಂದಿ ವಿಗ್ರಹ ಪುರಾಣ ಪ್ರಸಿದ್ಧವಾಗಿದೆ , ಜೊತೆಗೆ ಶಿವನ ನೆಚ್ಚಿನವಾರ ಸೋಮವಾರ ಹಾಗು ನಂದಿಯು ಶಿವನ ವಾಹನ ವಾಗಿರುವುದರಿಂದ ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರಗಳಿಂದ ವಿಶ್ವ ವಿಖ್ಯಾತ ಕಡಲೇಕಾಯಿ ಪರಿಷೆ ಉದ್ಘಾಟನೆಗೊಳ್ಳುತ್ತದೆ.


ಬಡವರ ಬಾದಾಮಿಯೆಂದೇ ಪ್ರಸಿದ್ದವಾಗಿರುವ ಈ ಪರಿಷೆಗೆ ಬಾರದ ಸಿದ್ದತೆಗಳು ನಡೆಯುತ್ತಿವೆ. ಇದರ ಪೂರ್ವಭಾವಿಯಾಗಿ ಇಂದು ವ್ಯಾಪಾರಸ್ಥರು ತಮ್ಮ ಕಡಲೇಕಾಯಿ ಅಂಗಡಿ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ , ಇದರ ಜೊತೆಗೆ ವಿವಿಧ ಬಗೆಯ ಬಣ್ಣದ ಆಟಿಕೆಗಳು  ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಬುಲಟೆಂಪಲ್ ರಸ್ತೆ ಕಂಗೊಳಿಸಲು ಸಜ್ಜಾಗುತ್ತಿದೆ.


ಪ್ರತೀ ವರ್ಷ ಇಲ್ಲಿ ಒಂದು ಸಾವಿರ ಮಳಿಗೆಗಳು ತೆರೆದುಕೊಳ್ಳುತ್ತವೆ , ಇದು ದೇವಸ್ಥಾನದ ಮುಖ್ಯ ರಸ್ತೆ ಅಷ್ಟೇ ಅಲ್ಲದೆ ಅದರ ಅಕ್ಕ ಪಕ್ಕದ ರಸ್ತೆಗಳಲ್ಲೂ  ಮಳಿಗೆ ಹಾಗು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತದೆ .


ಇಲ್ಲಿ ಪ್ರತಿ ಮಳಿಗೆ ಹಾಕಲು ಅದರ ಗುತ್ತಿಗೆ ಪಡೆದವರು 4 ರಿಂದ 5 ಸಾವಿರ ಪಡಿಯುತ್ತಾರೆ ಎನ್ನುವ ಮಳಿಗೆ ವ್ಯಾಪಾರಿಗಳು ಪಾಲಿಕೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಎರಡು ದಿನಕ್ಕೆ 5 ಸಾವಿರ ಹೆಚ್ಚೆನ್ನುವ ವ್ಯಾಪಾರಸ್ಥರು ಈ ವರ್ಷ ಮಳೆ ಬಾರದ ಕಾರಣ ಪಸಲು ಕಡಿಮೆಯಾಗಿ ನಾವೇ ದುಪ್ಪಟು ಕೊಟ್ಟು ಖರೀದಿಸಿದ್ದೀವಿ.  ಕಳೆದ ವರ್ಷ 30 ರಿಂದ 40 ರೂ ಲೀಟರಿಗೆ ಇದ್ದ ಕಡಲೆ ಕಾಯಿ ಈ ವರ್ಷ 50 ರಿಂದ 60 ರೂ.ಗೆ ಹೆಚ್ಚಿಸಬೇಕಾಗಿದೆ ಎನ್ನುತ್ತಾರೆ.


ಒಟ್ಟಾರೆ ವಿಶ್ವ ವಿಖ್ಯಾತ ಬಡವರ ಬಾದಾಮಿ ಕಡಲೇಕಾಯಿ ಪರಿಷೆಗೆ ಜನ ಜಾತ್ರೆ ಸೇರಿ ಸಂಭ್ರಮಿಸುವುದಂತೂ ಗ್ಯಾರಂಟಿ.

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ