Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸಕೋಟೆ ಕಾಂಗ್ರೆಸ್ ಜಯಬೇರಿ, ವಿಜಯೋತ್ಸವ ಬಡವರ ಪರ ಸರ್ಕಾರ ರಚನೆ: ಶರತ್ ಬಚ್ಚೇಗೌಡ

ಸುದ್ದಿಮೂಲ ವಾರ್ತೆ

ಸೂಲಿಬೆಲೆ, ಮೇ 14: ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿದೆ. ನೆಮ್ಮದಿ ಶಾಂತಿ ಸಮೃದ್ದಿಯ ನವ

ಕರ್ನಾಟಕ ನಿರ್ಮಾಣದ ಜಾತ್ಯತೀತ ಹಾಗೂ ಬಡವರ ಪರ ಸರ್ಕಾರ ಕಾಂಗ್ರೇಸ್ ಸರ್ಕಾರ ರಚನೆಯಾಗಲಿದೆ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಿಂದ ವಿಜಯಿಯಾದ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆಯಲ್ಲಿ ಶನಿವಾರ ಸಂಜೆ ಗೆಲುವಿನ ಸಂಭ್ರಮದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಅದು ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯ ಯಾವುದೇ

ಕೋಮುವಾದ ದ್ವೇಷವಿಲ್ಲದೇ ಸದಾ ಜನಪರ ಯೋಜನೆಗಳನ್ನು ನೀಡುವ ಬಡವರ ಸರ್ಕಾರ. ನುಡಿದಂತೆ

ನೆಡೆಯುವ ಸರ್ಕಾರ. ಸಿದ್ದರಾಮಯ್ಯನವರು ನೀಡಿದ 160 ವಾಗ್ದಾನಗಳಲ್ಲಿ 155 ವಾಗ್ದಾನಗಳನ್ನು ಈಡೇರಿಸಿದ ಸರ್ಕಾರ ಈಗ ನಾವು ನೀಡಿರುವ ವಾಗ್ದಾನಗಳನ್ನು ಸಹ ಈಡೇರಿಸುತ್ತೇವೆ ಎಂದರು.

ಸಂವಿಧಾನವನ್ನು ತಿರುಚುವ ಷಡ್ಯಂತ್ರ ಮಾಡಿದ ಸರ್ಕಾರಕ್ಕೆ ಜನ ತಕ್ಕ ಬುದ್ದಿ ಕಲಿಸಿದ್ದಾರೆ ಜಾತ್ಯತೀತ ಸಿದ್ದಾಂತಗಳಿಗೆ ಮನ್ನಣೆ ಸಿಕ್ಕಿದೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಲಿದೆ ಎಂದು ಶರತ್ ಬಚ್ಚೇಗೌಡ ಹೇಳಿದರು.

ಯುವ ಮುಖಂಡರಾದ ಜಿ.ನಾರಾಯಣಗೌಡ, ಬಿ.ಎನ್.ಗೋಪಾಲಗೌಡ, ಮಾಜಿ ಅಧ್ಯಕ್ಷ ಜನಾರ್ಧನರೆಡ್ಡಿ, ಉಪಾಧ್ಯಕ್ಷ ಶಿವರುದ್ರಪ್ಪ, ಅಲ್ತಾಪ್‌ಪಾಷ, ಸೈಯದ್ ಮಹಬೂಬ್,ಆನಂದ್, ಮುನೀರ್,ಖಾಜಾ,ಮಾರಪ್ಪ, ಇಸಾಕ್, ಅಕ್ಬರ್ ಅಲಿಖಾನ್, ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ