ಹಾಡುಹಗಲೇ ಮನೆ ಕಳ್ಳತನ
ಸುದ್ದಿಮೂಲ ವಾರ್ತೆ
ಕೊಪ್ಪಳ ಆ 27: ನಗರದಲ್ಲಿ ನಡೆಯುವ ಮನೆ ಕಳ್ಳತನ ಮುಂದುವರೆದಿವೆ. ಈವರೆಗೆ ರಾತ್ರಿ ಹೊತ್ತು ನಡೆಯುತ್ತಿದ್ದ ಕಳ್ಳತನ ಈಗ ರವಿವಾರ ಹಾಡಹಗಲು ಜರುಗಿದ್ದು ಜನ ಭಯಭೀತರಾಗಿದ್ದಾರೆ.
ಪೊಲೀಸ್ ಠಾಣೆಗೆ ಕೆಲವೇ ನೂರು ಮೀಟರ್ ದೂರದ ಪಲ್ಲೇದವರ ಓಣಿಯಲ್ಲಿರುವ ನಿವಾಸಿ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಮಲ್ಲಿಕಾರ್ಜುನ ಸಿದ್ನೆಕೊಪ್ಪರವರ ಮನೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ.
ಮನೆಯಲ್ಲಿದ್ದ ಚಿನ್ನ ಹಾಗು ನಗದು ಕಳವು ಆಗಿದ್ದು ಸುಮಾರು 20 ಸಾವಿರದಷ್ಟು ನಗದು ಮತ್ತು ಬಂಗಾರ ಸೇರಿ ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ವಸ್ತು ಕಳ್ಳತನವಾಗಿವೆ.
ಇಂದು ನಗರದ ಶ್ರೀ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಅರ್ಬನ್ ಬ್ಯಾಂಕ್ ನ 90 ನೇ ವರ್ಷದ ಸಾಮಾನ್ಯ ಸಭೆ ನಡೆದಿತ್ತು ಅಲ್ಲಿಗೆ ಮ್ಯಾನೇಜರ್ ಮಲ್ಲಿಕಾರ್ಜುನ ಸಿದ್ನೆಕೊಪ್ಪ ಕುಟುಂಬ ಸಮೇತ ಹೋಗಿದ್ದಾಗ ಈ ಕಳ್ಳತನ ಜರುಗಿದೆ.
ಸ್ಥಳಕ್ಕೆ ಶ್ವಾನ ದಳದವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.