Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರಗದ ಸಂಭ್ರಮ ಮಧ್ಯೆ ಬೆಂಕಿ ಅನಾಹುತ

ಬೆಂಗಳೂರು, ಏ, 8: ಕರಗದ ಸಂಭ್ರಮದಲ್ಲಿರುವಾಗಲೇ ನಗರದಲ್ಲಿ ಭಾರೀ ಪ್ರಮಾಣದ ಬೆಂಕಿ ಅನಾಹುತ ಸ್ವಲ್ಪದರಲ್ಲಿ ಕೈ ತಪ್ಪಿದ್ದು, ಹಲವಾರು ಮಂದಿಯ ಜೀವ ರಕ್ಷಣೆಯಾಗಿದೆ.

ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದ್ರೌಪದ ದೇವಿ ಕರಗ ಶಕ್ತೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಮಧ್ಯಾಹ್ನ 2.30ರ ಸುಮಾರಿಗೆ ಕರ್ಪೂರದಾರತಿ ನಂತರ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದ ರಿವಾಜಿನಂತೆ ಜನ ರಾಶಿ ರಾಶಿಯಾಗಿ ಸಾಮೂಹಿಕವಾಗಿ ಕರ್ಪೂರ ಹಚ್ಚಿದರು. ಕರ್ಪೂರ ಗುಡ್ಡೆಗಳು ಆಸುಪಾಸಿನ ಪ್ರದೇಶಗಳಿಗೆ ವ್ಯಾಪಿಸಿತು.

ಈ ಸಂದರ್ಭದಲ್ಲಿ ಜನ ಎದ್ದುಬಿದ್ದು ಓಡಿದರು. ಸುಮಾರು 15 ಕ್ಕೂ ಹೆಚ್ಚು ವಾಹನಗಳು ಭಾಗಶಃ ಹಾನಿಗೊಳಗಾದವು. ಆದರೆ ಅದೃಷ್ಟವಶಾತ್ ಯಾವುದೇ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿಲ್ಲ. ವಾಹನಗಳ ಸೀಟು, ಟೈರ್ ಗಳು ಸುಟ್ಟು ಕರಕಲಾದವು.

ಸಮೀಪದಲ್ಲಿ ಕರಗ ಮಹೋತ್ಸವಕ್ಕಾಗಿ ತರಿಸಿದ್ದ ಟಾರ್ಪಲ್, ಪೆಂಡಾಲ್ ಗಳಿಗೆ ಬೆಂಕಿ ಆವರಿಸಲಿಲ್ಲ. ಅಷ್ಟರೊಳಗಾಗಿ ಜನ ಸಾಮಾನ್ಯರು, ಪೊಲೀಸರು ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು.

ಇಲ್ಲಿನ ದೇವಸ್ಥಾನದ ಹೊರಭಾಗದಲ್ಲಿ ಪ್ರತಿವರ್ಷ ಕರ್ಪೂರ ಉರಿಸುವ ಸಂಪ್ರದಾಯವಿದ್ದು, ವಾಹನಗಳನ್ನು ತೆರವುಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಪದೇ ಪದೇ ಧ್ವನಿವರ್ಧಕಗಳ ಮೂಲಕ ಮನವಿ ಮಾಡಿದರೂ ಸಾರ್ವಜನಿಕರು ಸ್ಪಂದಿಸಲಿಲ್ಲ.

ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಇಲ್ಲಿ ಒಂದೇ ಒಂದು ಅಗ್ನಶಾಮಕ ವಾಹನ ಇರಲಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಹಲವಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದರು.

 

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ