Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಕೆಶಿ ಅವರ ಗಂಜಿ ಗಿರಾಕಿ ಹೇಳಿಕೆಗೆ ಜೆಡಿಎಸ್ ತಿರುಗೇಟು

ಸುದ್ದಿಮೂಲ ವಾರ್ತೆ ಬೆಂಗಳೂರು, ನ.23:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಾಮಿ ಅವರ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಬದುಕುತ್ತಿಿರುವ ಗಂಜಿ ಗಿರಾಕಿ ಎಂದು ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಜೆಡಿಎಸ್ ತಿರುಗೇಟು ನೀಡಿದೆ.
ಈ ಸಂಬಂಧ ತನ್ನ ಎಕ್‌ಸ್‌ ಖಾತೆಯಲ್ಲಿ ಪೋಸ್‌ಟ್‌ ಮಾಡಿರುವ ಜೆಡಿಎಸ್ ನಿಮ್ಮ(ಡಿ.ಕೆ.ಶಿವಕುಮಾರ್) ಧಮ್ಕಿಿಗೆ ಇಲ್ಲಿ ಯಾರೂ ಜಗ್ಗುವುದಿಲ್ಲ. ನಿಮ್ಮ ಹಳೇ ಚಾಳಿಗೆ, ರೌಡಿಸಂಗೆ ಯಾರೂ ಬೆದರಲ್ಲ ಎಂದು ಮೂದಲಿಸಿದೆ.
ಮಾಧ್ಯಮದವರು ಕೇಳುವ ಪ್ರಶ್ನೆೆಗಳಿಗೆ ಮೂರ್ಖರಂತೆ ಉತ್ತರ ಕೊಡುವ ನಿಮಗೆ ಅವರ ಪೂರ್ವಾಪರ ತಿಳಿದುಕೊಳ್ಳದೆ ಮಾತನಾಡುವ ಚಟ. ಕುಮಾರಸ್ವಾಾಮಿ ಅವರ ವಿಚಾರದಲ್ಲಿ ನೀವು ನಾಲಿಗೆ ಜಾರುತ್ತಿಿರುವುದು ಇದೇ ಮೊದಲಲ್ಲ. ತೀರಾ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆೆ ಜತೆ ಕುಮಾರಸ್ವಾಾಮಿಯವರ ಬಗ್ಗೆೆ ನಾಲಿಗೆ ಜಾರಿ ಪೆದ್ದರಾಗಿದ್ದೀರಿ ಎಂದು ವಾಗ್ದಾಾಳಿ ನಡೆಸಿದೆ.
ಅಧಿಕಾರದ ಲಾಲಸೆಗೆ ಯಾರು ಏನು ಹೇಳಿದ್ದಾರೆ, ಇಲ್ಲವೋ ಎಂಬುದನ್ನು ತಿಳಿಯದೇ ಅವಿವೇಕಿಯಂತೆ ವರ್ತಿಸುತ್ತಿಿದ್ದೀರಿ. ನಿಮ್ಮ ಶೈಲಿಯಲ್ಲಿ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಲು ನಮಗೆ ಬರುವುದಿಲ್ಲ ಎಂಬ ಭಂಡತನವೇ ನಿಮಗೆ. ನಿಮ್ಮ ಮಾತು, ಪದ ಬಳಕೆ ನೋಡಿದರೆ ನಿಮ್ಮ ಮಾನಸಿಕ ಸ್ವಾಾಸ್ಥ್ಯ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಬಗ್ಗೆೆ ಕರ್ನಾಟಕದ ಜನರು ಭೀತಿಗೊಂಡಿರುವುದಕ್ಕೆೆ ಇದೂ ಒಂದು ಕಾರಣ ಎಂದು ಆರೋಪಿಸಿದೆ.
ಬ್ಲಾಾಕ್ ಮೇಲ್ ಗಿರಾಕಿ, ಮತಿಗೇಡಿ ಡಿಕೆಶಿ, ಮೊದಲು ಎಚ್ .ಡಿ. ಕುಮಾರಸ್ವಾಾಮಿ ಅವರು ನಿಮ ಬಗ್ಗೆೆ ಆ ಹೇಳಿಕೆ ನೀಡಿದ್ದಾರೆಯೇ ಅದನ್ನು ಸಾಬೀತುಪಡಿಸಿ. ನೀವು ಮಾನನಷ್ಟ ಮೊಕದ್ದಮೆ ಹೂಡುವುದು ನಂತರದ ಮಾತು. ಅದಕ್ಕೂ ಮೊದಲು ಮಾನವೂ ಇರಬೇಕು, ಮತಿಯೂ ಇರಬೇಕು. ಇವೆರಡೂ ನಿಮಗೆ ಇದ್ದಿದ್ದರೆ ನಾಲಿಗೆಯಿಂದ ಇಂಥ ಅಣಿಮುತ್ತು ಉದುರುತ್ತಿಿರಲಿಲ್ಲ ಎಂದು ಜೆಡಿಎಸ್ ಜರಿದಿದೆ.
ಮಾತೆತ್ತಿಿದ್ದರೆ ಶ್ಲೋೋಕ ,ಇನ್ನೊೊಂದು ಹೇಳುವುದಲ್ಲ, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಿಯ ಬಿಡು ನಾಲಿಗೆ. ಮೊದಲು ದಾಸರು ಹೇಳಿರುವ ಈ ಸರಳ ಪದವನ್ನು ಓದಿ ಅರ್ಥ ಮಾಡಿಕೊಳ್ಳಿಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ