ಆ 1 ರಂದು ಕೊಪ್ಪಳದಲ್ಲಿ ರಾಜ್ಯ ನೌಕರರ ಮಹಾಸಭಾ- ಜುಮ್ಮಣ್ಣನವರ
ಸುದ್ದಿಮೂಲವಾರ್ತೆ
ಕೊಪ್ಪಳ, ಸೆ.28: ರಾಜ್ಯ ನೌಕರರ ಸಂಘದ ಬೈಲಾ ತಿದ್ದುಪಡಿ ಹಿನ್ನೆಲೆಯಲ್ಲಿ ನೌಕರರ ಸಂಘದ ವಿಶೇಶ ಮಹಾಸಭೆ ಕರೆಯಲಾಗಿದೆ ಎಂದು ಕೊಪ್ಪಳ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ತಿಳಿಸಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಮಹಾಸಭೆಯನ್ನು ಗವಿಮಠದ ಶ್ರೀಗಳ ಉದ್ಘಾಟಿಸಲಿದ್ದಾರೆ. ಈ ಮಹಾಸಭೆಯನ್ನು ರಾಜ್ಯಾಧ್ಯಕ್ಷ ಷಡಕ್ಷರಿ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಜೆ ಸೈಬರ್ ಹಾಸ್ಯ ಎಂಬ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಗಂಗಾವತಿ ಪ್ರಾಣೇಶ, ಸುಧಾ ಬರಗೂರು. ಎಮ್ ಎಸ್ ನರಸಿಂಹಮೂರ್ತಿ, ದುಂಡಿರಾಜರಿಂದ ನಡೆಯಲಿದೆ.
ಇದೇ ವೇಳೆ ಜಿಲ್ಲೆಯಲ್ಲಿ 182 ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.
ಇದೇ ವೇಳೆ ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೇಖರಗೌಡ ಪಾಟೀಲ. ಶಿವಪ್ಪ ಜೋಗಿ, ಗೋಪಾಲ, ಸುಧಾಕರ ಇದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.