Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾನಪದ ಹಾಡುಗಾರ ಲಕ್ಮೀರಾಮ್‌ ಗೆ ಕಲಾರತ್ನ ಪ್ರಶಸ್ತಿ

ಸುದ್ದಿಮೂಲ ವಾರ್ತೆ

ಮೈಸೂರು, ನ.24:ಮೈಸೂರಿನ ಪ್ರತಿಷ್ಠಿತ ನಾಟ್ಯ ಸಂಸ್ಥೆ ಪ್ರತಿವರ್ಷ ಕನ್ನಡ ರಾಜ್ಯೊತ್ಸವದ ಅಂಗವಾಗಿ ನೀಡುವ ಕನ್ನಡ ಕಲಾರತ್ನ ಪ್ರಶಸ್ತಿಗೆ ನಾಡಿನ ಖ್ಯಾತ ಜಾನಪದಗಾಯಕ ಲಕ್ಷ್ಮಿರಾಮ್ ಅವರನ್ನು ಸಂಗೀತ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ನ.26 ರಂದು ಮೈಸೂರಿನ ರೋಟರಿ ಸಭಾ೦ಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ನಾಟ್ಯ ಸಂಸ್ಥೆಯ ಸಂತೋಷ್ ಕಲಾವಿದ ತಿಳಿಸಿದ್ದಾರೆ.

ಲಕ್ಮೀರಾಮ್‌ ಮೂಲತ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ನಾಡಪ್ಪನಹಳ್ಳಿಯವರು.ಕಳೆದ 2 ದಶಕಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ .ಸಾವಿರಕ್ಕೂ ಹೆಚ್ಚು ಗಾಯನ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಅಲ್ಲದೆ, ಮಹಾರಾಷ್ಟ್ರ ದ ನಾಗಪುರ, ಉತ್ತರಪ್ರದೇಶದ ಕಾಶಿ, ತಿರುಪತಿ, ಛತ್ತಿಸ್ ಗಡದ ರಾಯ್ ಪುರ ಹೀಗೆ ಹಲವು ಕಡೆಗಳಲ್ಲಿ ನೀಡಿದ್ದಾರೆ. ಕರ್ನಾಟಕದ ಹಲವು ವಿಶ್ವ ವಿದ್ಯಾಲಯಗಳ ವಿವಿಧ ಕಾಲೇಜುಗಳ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಸಾಳೆ, ಜಾನಪದ ಗೀತೆ, ಭಾವ ಗೀತೆ, ದೇಶ ಭಕ್ತಿಗೀತೆಗಳ ತರಬೇತಿ ನೀಡಿದ್ದಾರೆ.

ಹಾಗೆಯೇ ಬುದ್ಧ, ಬಸವಣ್ಣ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ , ಕುವೆಂಪು ಕುರಿತ 300 ಕ್ಕೂ ಹೆಚ್ಚಿನ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ಕಲಾಸೇವೆ ಗುರುತಿಸಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಸೇರಿದಂತೆ ಮೈಸೂರು ರತ್ನ ಪ್ರಶಸ್ತಿ, ಕೆನರಾ ಬ್ಯಾಂಕ್ ವಿಶೇಷ ಕಲಾಕಾರ್ , ಧಮ್ಮ ಸೇವಾ ರತ್ನ ಪ್ರಶಸ್ತಿ, ಆದಿ ಜನ ರಾಯಬಾರಿ, ಕನ್ನಡ ವಿಕಾಸ ರತ್ನ, ಕರುನಾಡ ಭೂಷಣ, ಕರುನಾಡ ರತ್ನ ಮುಂತಾದ ಪ್ರಶಸ್ತಿ ಪುರಸ್ಕಾರ ಗಳು ಸಂದಿವೆ .
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ