Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಮಂಗಲ ಗ್ರಾಪಂ ಎರಡನೇ ಅವಧಿಗೂ ಕಾಂಗ್ರೆಸ್ ತೆಕ್ಕೆಗೆ

ಸುದ್ದಿಮೂಲ ವಾರ್ತೆ

ದೇವನಹಳ್ಳಿ, ಆ.4 : ತಾಲೂಕಿನ ಕನ್ನಮಂಗಲ ಗ್ರಾ.ಪಂಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರ ಸ್ಥಾನಕ್ಕೆ ಗೌರಮ್ಮ ಮತ್ತು ಮೇಘಶ್ರೀ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಸ್ವಾಮಿ ಮತ್ತು ಸೋಮಶೇಖರ್ ನಾಮಪತ್ರವನ್ನು ಸಲ್ಲಿಸಿದ್ದರು. ಒಟ್ಟು 26 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನದ ಗೌರಮ್ಮ ಅವರಿಗೆ 18 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನದ ವೆಂಕಟಸ್ವಾಮಿ ಅವರಿಗೆ 19 ಮತಗಳು ಬಂದಿರುತ್ತದೆ. ಮುಂದಿನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಧಿಗೆ ನೂತನ ಅಧ್ಯಕ್ಷರಾಗಿ ಗೌರಮ್ಮ ಮತ್ತು ಉಪಾಧ್ಯಕ್ಷರಾಗಿ ವೆಂಕಟಸ್ವಾಮಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಶ್ರೀನಾಥ್‌ಗೌಡ ಘೋಷಿಸಿದರು.

ನೂತನ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಗ್ರಾ.ಪಂಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಮುಖ್ಯವಾಗಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗುತ್ತದೆ ಎಂದರು.

ನೂತನ ಉಪಾಧ್ಯಕ್ಷ ವೆಂಕಟಸ್ವಾಮಿ(ಅಪ್ಪು) ಮಾತನಾಡಿ, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮದೇ ರಾಜ್ಯ ಸರಕಾರ ಇರುವುದರಿಂದ ಹೆಚ್ಚಿನ ಅನುದಾನವನ್ನು ತರುವುದರ ಮೂಲಕ ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ಸದಸ್ಯರನ್ನು ಮುಖಂಡರನ್ನು ಒಳಗೊಂಡು ಗ್ರಾ.ಪಂಯನ್ನು ಮಾದರಿಯನ್ನಾಗಿಸಲಾಗುತ್ತದೆ ಎಂದರು.

ಜಿ.ಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಕನ್ನಮಂಗಲ ಗ್ರಾ.ಪಂಯು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೆಚ್ಚು ಒಳಗೊಂಡಿರುವುದರಿಂದ ಸತತವಾಗಿ ಗ್ರಾ.ಪಂ ಕಾಂಗ್ರೆಸ್ ವಶದಲ್ಲಿಯೇ ಇರುತ್ತದೆ. ಈಗಾಗಲೇ ಉತ್ತಮ ಗ್ರಂಥಾಲಯ, ಸುಸ್ಸಜ್ಜಿತವಾದ ಮೈದಾನ, ಸೋಲಾರ್ ದೀಪ ಅಳವಡಿಕೆ, ಹೈಟೆಕ್ ಮಾದರಿಯ ಗ್ರಾ.ಪಂಯನ್ನಾಗಿಸಲಾಗಿದೆ. ಮುಂದೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಗ್ರಾಮಗಳಿಗೆ ನೀಡಿ, ಗ್ರಾಮಗಳನ್ನು ಸಹ ಮಾದರಿಯನ್ನಾಗಿಸಲು ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಸದಸ್ಯರಾದ ಕೆ.ಆರ್.ನಾಗೇಶ್, ಲಕ್ಷ್ಮೀಕಾಂತ, ಕೃಷ್ಣಯ್ಯ, ನರಸಿಂಹಮೂರ್ತಿ, ಎಸ್.ಜಿ.ಮಂಜುನಾಥ್, ಎನ್.ಮಂಜುನಾಥ್, ನಿವಿತ.ಆರ್, ನಂದಿನಿ.ಎಸ್.ಜಿ, ಪವಿತ್ರ.ಎಸ್, ರಶ್ಮಿ.ಎಂ, ವನಜಾಕ್ಷಮ್ಮ, ಆಶಾ.ಎಸ್, ಆಶಾ.ಕೆ.ಬಿ, ಮೇಘಶ್ರೀ, ಮೋಸಿನ್‌ತಾಜ್, ಶಾಲಿನಿ, ಶಿಲ್ಪ.ಕೆ.ಎಂ, ನೇತ್ರಾವತಿ.ಜಿ, ಅಂಬುಜಾ, ಅಂಬರೀಶ್, ಮುಖಂಡರಾದ ಸಿ.ಜಗನ್ನಾಥ್, ಅರುಣ್, ಪಟಾಲಪ್ಪ, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ಸೀನಪ್ಪ, ಮತ್ತಿತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ