Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಟವಾಡುವ ಮಗುವಿನ ಮೇಲೆ ಇರಲಿ ನಿಗಾ

ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.22:
ಆಟವಾಡುತ್ತಿಿರುವ ಮಗುವಿನ ಮೇಲೆ ಪಾಲಕರು ನಿಗಾ ವಹಿಸಬೇಕು. ಮಗು ಆಟವಾಡುವಾಗ ಸಹಜವಾಗಿ ಏನಾದರೂ ಹಿಡಿಯಲು ಹೋಗುತ್ತದೆ. ಈ ರೀತಿಯಾಗಿ ಪಾರಿವಾಳ ಹಿಡಿಯಲು ಹೋದ ಮಗುವೊಂದು ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದೆ.
ಇತ್ತೀಚಿಗೆ ಮಹಡಿ ಮನೆ, ಆಪಾರ್ಟಮೆಂಟ್‌ಗಳು ತಲೆ ಎತ್ತಿಿವೆ. ಮಹಡಿ ಮನೆಯ ಮೇಲೆ ಇರುವವರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಗು ಆಟವಾಡುತ್ತದೆ ಎಂದು ಸ್ವಲ್ಪ ನಿರ್ಲಕ್ಷ್ಯವಹಿಸಿದರೆ ಹೆಚ್ಚು ಕಡಿಮೆಯಾಗುತ್ತಿಿದೆ. ಅಂಥದೆ ಘಟನೆಯೊಂದು ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಕೊಪ್ಪಳ ನಗರದ ಮಹ್ಮದ್ ಹ್ಯಾಾರಿಸ್ ಎಂಬ 6 ವರ್ಷದ ಬಾಲಕ ತನ್ನ ಮನೆಯ ಮುಂದೆ ಆಟವಾಡುತ್ತಿಿದ್ದ. ಈ ಸಂದರ್ಭದಲ್ಲಿ ಮನೆಯ ಮುಂದೆ ಬಂದಿರುವ ಪಾರಿವಾಳ ಹಿಡಿಯಲು ಹ್ಯಾಾರಿಸ್ ಹೋಗಿದ್ದಾಾನೆ. ಈ ಸಂದರ್ಭದಲ್ಲಿ ಮೊದಲನೆ ಮಹಡಿಯಿಂದ ಜಾರಿ ಕೆಳಗಡೆ ಬಿದ್ದಿದ್ದಾಾನೆ. ಮೊದಲ ಮಹಡಿಯಿಂದ ಬಿದ್ದು ಗಾಯವಾಗಿ ಈಗ ಆಸ್ಪತ್ರೆೆಗೆ ದಾಖಲಾಗಿಡಿದ್ದಾಾನೆ. ಮಗು ಮೇಲಿಂದ ಬೀಳುವ ದೃಶ್ಯ ಸಿಸಿ ಕ್ಯಾಾಮರಾದಲ್ಲಿ ಸೆರೆಯಾಗಿದೆ.
ಮೇಲಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಾಗಿದೆ. ಆದರೆ ಬಾಲಕ ಪ್ರಾಾಣಾಪಾಯದಿಂದ ಪಾರಾಗಿದ್ದಾಾನೆ. ನಗರದ ಖಾಸಗಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ನೀಡಲಾಗುತ್ತಿಿದೆ. ವೈದ್ಯರು ಹೇಳುವ ಪ್ರಕಾರ ಮಗುವಿಗೆ ಪ್ರಾಾಣಾಪಾಯವಿಲ್ಲ ಎನ್ನಲಾಗಿದೆ. ಕೊಪ್ಪಳದ ನಗರ ಠಾಣೆ ವ್ಯಾಾಪ್ತಿಿಯಲ್ಲಿ ಘಟನೆ ನಡೆದಿದೆ. ಪಾಲಕರು ಚಿಕ್ಕ ಮಕ್ಕಳ ಮೇಲೆ ನಿಗಾವಹಿಸುವುದು ತೀರಾ ಅವಶ್ಯವಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ