Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಖಂಡ್ರೆ ಸಲ್ ಬಿಮಾ ಅಪಪ್ರಚಾರ ನಿಲ್ಲಿಸಲಿ : ಖುಬಾ ಆಗ್ರಹ

ಸುದ್ದಿಮೂಲ ವಾರ್ತೆ ಬೀದರ್, ಡಿ.24:
ಪ್ರಧಾನಿ ನರೇಂದ್ರ ಮೋದಿಜಿ ಜಾರಿಗೆ ತಂದಿರುವ ಪ್ರಧಾನಮಂತ್ರಿಿ ಸಲ್ ಬಿಮಾ ಯೋಜನೆಯನ್ನು ಗೊಲ್ಮಾಾಲ್ ಯೋಜನೆ ಎಂದು ಕಳೆದ 10 ವರ್ಷಗಳಿಂದ ಬೊಬ್ಬೆೆ ಹೊಡೆಯುತ್ತಿಿರುವ ಈಶ್ವರ ಖಂಡ್ರೆೆ ತಲೆ ಮತ್ತು ಮನಸ್ಥಿಿತಿ ಎರಡು ಸರಿಯಿಲ್ಲ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.
ದಶಕಗಳಿಂದ ರೈತರನ್ನು ಶೋಷಣೆ ಮಾಡುತ್ತಾಾ ಬಂದಿರುವ ಈಶ್ವರ ಖಂಡ್ರೆೆ ಪರಿವಾರ, ಸಲ್ ಬಿಮಾ ಯೋಜನೆಯಂತಹ ಒಳ್ಳೆೆಯ ಯೋಜನೆ ಬಗ್ಗೆೆ ಅಪ್ರಪಚಾರ ಮಾಡುತ್ತಿಿರುವುದು ನಾಚಿಕೆಗೇಡು. ಇದಕ್ಕೆೆ ಈ ವರ್ಷ ಬೆಳೆ ಹಾಳಾದಾಗ ಬಂದಿರುವ ಪರಿಹಾರವೇ ದೊಡ್ಡ ಸಾಕ್ಷಿಯಾಗಿದೆ. ಇದನ್ನು ನೋಡಿಯಾದರೂ ಬಾಯಿ ಬಡೆದುಕೊಳ್ಳೊೊದು ನಿಲ್ಲಿಸಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿಿ ಸಲ್ ಬಿಮಾ ಯೋಜನೆಯಡಿ ಒಟ್ಟು 2,04,019 ರೈತರು, 1,22,061 ಹೇಕ್ಟರ ಪ್ರದೇಶಕ್ಕೆೆ ನೊಂದಣಿ ಮಾಡಿಸಿಕೊಂಡಿರುತ್ತಾಾರೆ, ಇದರಲ್ಲಿ ರೈತರು 9 ಕೋಟಿ 98 ಲಕ್ಷ, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 17.96 ಕೋಟಿ ಪ್ರೀೀಮಿಯಮ್ ಭರಿಸಿವೆ. ಪ್ರಸಕ್ತ ಸಾಲಿನಲ್ಲಿ ಇನ್ಸುರೇನ್ಸ್ ಕಂಪನಿಗೆ ಒಟ್ಟು 45.91 ಕೋಟಿ ಮೊತ್ತದ ಪ್ರಿಿಮಿಯಮ್ ಹೋಗಿರುತ್ತದೆ.
ಅದಕ್ಕೆೆ ಎದುರಾಗಿ ಸಲ್ ಬಿಮಾ ಯೋಜನೆ ನಿಯಮದಂತೆ ಈ ವರ್ಷ ಅತಿವೃಷ್ಠಿಿಯಿಂದ ಹಾಳಾಗಿರುವ ಬೆಳೆಗೆ ಈಗಾಗಲೆ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿಿತಿ ಅಡಿ 78,274 ರೈತರಿಗೆ 36.74 ಕೋಟಿ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ, ಮುಂದಿನ ತಿಂಗಳು ಸ್ಥಳಿಯ ಪೃಕೃತಿ ವಿಕೋಪದಡಿ ದೂರು ದಾಖಲಿಸಿದ 88,886 ರೈತರಿಗೆ ರೂ. 42 ಕೋಟಿ ಪರಿಹಾರ ಖಂಡಿತವಾಗಿ ಜಮೆಯಾಗುತ್ತದೆ, ಒಟ್ಟು ಈ ವರ್ಷ 78.74 ಕೋಟಿ ಪರಿಹಾರ ಬರಲಿದೆ, ಇನ್ನು ಕ್ರಾಾಪ್ ಕಟಿಂಗ್ ಎಕ್ಸಪರಿಮೆಂಟ ಅಡಿಯಲ್ಲಿ ಪರಿಹಾರ ಮುಂದಿನ ದಿನಗಳಲ್ಲಿ ಬರುತ್ತದೆ ಎಂದು ಖೂಬಾ ಮಾಹಿತಿ ನೀಡಿದ್ದಾರೆ.
ಈ ವರ್ಷ ರೈತರು ಮತ್ತು ಸರ್ಕಾರ ಕಟ್ಟಿಿದ 45.91 ಕೋಟಿ ಪ್ರೀೀಮಿಯಮ್‌ಗೆ ಎದುರಾಗಿ ಮೊದಲ ಹಂತದಲ್ಲಿ ನಮ್ಮ ರೈತರು 78.74 ಕೋಟಿ ಪರಿಹಾರ ಬಂದಿರುತ್ತದೆ, ಕಟ್ಟಿಿದ ಪ್ರಿಿಮಿಯಮ್‌ಗಿಂತ ಹೆಚ್ಚಾಾಗಿ ಪರಿಹಾರ ಬಂದಿರುತ್ತದೆ. ಆದರೂ ಈಶ್ವರ ಖಂಡ್ರೆೆ ಸುಮ್ನೆೆ ಪುಂಗಿ ಊದುತ್ತಾಾ ಇದ್ದಾರೆ, ರೈತರು ಜಾಣರಾಗಿದ್ದಾರೆ, ಖಂಡ್ರೆೆ ಎಷ್ಟು ಅಪಪ್ರಚಾರ ಮಾಡಿದರೂ ಪ್ರತಿವರ್ಷ 2 ಲಕ್ಷಕ್ಕಿಿಂತ ಹೆಚ್ಚಿಿನ ರೈತರು ತಮ್ಮ ಬೇಳೆಗಳನ್ನು ನೊಂದಣಿ ಮಾಡಿಸುತ್ತಿಿದ್ದಾರೆ, ಇದನ್ನು ಅರ್ಥ ಮಾಡಿಕೊಂಡಾದರೂ ಈಶ್ವರ ಖಂಡ್ರೆೆ ಅಪಪ್ರಚಾರ ನಿಲ್ಲಿಸಬೇಕೆಂದು ಭಗವಂತ ಖೂಬಾ ಪತ್ರಿಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ