Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಕ್ಷಕ್ಕೆ ಅಲ್ಲ ಬೊಮ್ಮಾಯಿಯನ್ನು ಬೆಂಬಲಿಸುತ್ತೇನೆ: ಕಿಚ್ಚ ಸುದೀಪ್

ಸುದ್ದಿಮೂಲ ವಾರ್ತೆ

ಬೆಂಗಳೂರು,ಏ,೦5: ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇ‌ನೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು.

ಇಂದು ‌ಬೆಂಗಳೂರಿನ ಹೋಟೆಲ್‌ ಅಶೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುದ್ದೀಪ್, ಸಿ.ಎಂ ಅವರ ಪರವಾಗಿ ನಿಲ್ಲುತ್ತೇನೆ ನನ್ನ ಬೆಂಬಲ ಅವರಿಗೆ ಇದೆ. ನನ್ನ ಕಷ್ಟದ ಸಂದರ್ಭದಲ್ಲಿ ಬೊಮ್ಮಾಯಿ ಅವರು ಸ್ಪಂಧಿಸಿದ್ದರು ಅದರ ಪ್ರತಿಫಲವಾಗಿ ನಾನು ಕೂಡ ಅವರ ಬೆಂಬಲ್ಲಕ್ಕೆ ನಿಲ್ಲುತ್ತೇನೆ ಎಂದು ಮಾಹಿತಿ ನೀಡಿದರು.



ನಾನು ಸಿನಿಮಾಗೆ ಎಂಟ್ರಿ ಕೊಟ್ಟಾಗ ಬಸವರಾಜ್ ಬೊಮ್ಮಾಯಿ ಅವರು ಸಹಕರಿಸಿದ್ದರು. ನನ್ನ ಕಷ್ಟದ ಸಂದರ್ಭದಲ್ಲಿ ಸಹಕರಿಸಿದ್ದರಲ್ಲಿ ಬೊಮ್ಮಾಯಿ ಕೂಡ ಒಬ್ಬರು ಅದರಂತೆ ನಾನು ಕೂಡ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಪಕ್ಷಗಳಿಗೆ ಬೆಂಬಲಿಸುತ್ತಿಲ್ಲ, ಕೆಲವು ವ್ಯಕ್ತಿಗಳಿಗೆ ಮಾತ್ರ ಬೆಂಬಲ ನೀಡುತ್ತಿದೇನೆ. ಎಲ್ಲರನ್ನು ಮೆಚ್ಚಿಸುವ ಉದ್ದೇಶ ಇಲ್ಲ ಇದಿದ್ದರೇ ನಾನು ಇಲ್ಲಿಗೆ ಬರುತ್ತಿರಲಿಲ್ಲ, ಬೇರೆ ಪಕ್ಷದವರು ನನ್ನ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೆ, ನನ್ನು ಕೂಡ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದೆ ಎಂದು ಮಾಹಿತಿ ನೀಡಿದರು.

ನಾನು ವ್ಯಕ್ತಿಗೆ ಬೆಂಬಲ್ಲ ನೀಡುತ್ತಿದೇನೆ ಹೊರತು ಬಿಜೆಪಿಗಲ್ಲ, ಪ್ರೀತಿಯ ಕಾರಣಕ್ಕಾಗಿ ಬಂದಿದ್ದೇನೆ, ಒತ್ತಡದ ಮೇಲೆ ಬರುವ ವ್ಯಕ್ತಿ ಅಲ್ಲ, . ನನ್ನ ಬೆಂಬಲ ಬೊಮ್ಮಾಯಿ ಅವರಿಗೆ ಇದೆ. ಅದಲ್ಲದೇ ಪ್ರಚಾರಕ್ಕೆ ಎಲ್ಲ ಕಡೆ ಹೋಗಲು ಆಗುವುದಿಲ್ಲ, ಇಂತವರಿಗೆ ಬೆಂಬಲ ಕೊಡಿ ಎಂದು ಹೇಳಿದರೆ ನಾನು ಕೊಡುತ್ತೇನೆ ಎಂದು ಕಿಚ್ಚ ಸುದೀಪ್‌ ಹೇಳಿದರು.

ಪ್ರಕಾಶ್ ರಾಜ್ ಅವರ ಟ್ವಿಟರ್ ಹೇಳಿಕೆಗೂ ಕೂಡ ಕಿಚ್ಚ ಪ್ರತಿಕ್ರಿಯೇ ನೀಡಿದರು. ಪ್ರಕಾಶ್ ರಾಜ್ ಅವರು ಒಳ್ಳೆಯ ಕಲಾವಿದರು ಅವರೊಂದಿಗೆ ಇಗಾಗಲೇ ಅನೇಕ ಸಿನಿಮಾ ಮಾಡಿದ್ದೇನೆ. ಮುಂದೆನು ಇನ್ನೂ ಹೆಚ್ಚು ಸಿನಿಮಾ ಮಾಡುತ್ತೇನೆ ಎಂದಷ್ಟೇ ಹೇಳಿದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ