Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಂಎಸ್‌ಪಿ ಕಾನೂನು ಬದ್ದವಾಗಿ ಜಾರಿಯಾಗಲಿ - ಕೋಡಿಹಳ್ಳಿ ಚಂದ್ರಶೇಖರ

 ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.23:
ರೈತ ಬೆಳೆದ ಬೆಳೆಗಳಿಗೆ ವೈಜ್ಞಾಾನಿಕ ಬೆಲೆ ಸಿಗಬೇಕಾದರೆ ಕನಿಷ್ಟ ಬೆಂಬಲ ಬೆಲೆ ಕಾನೂನು ಬದ್ದವಾಗಿ ಜಾರಿಯಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಾಧ್ಯಕ್ಷ ಕೋಡಿಹಳ್ಳಿಿ ಚಂದ್ರಶೇಖರ ಆಗ್ರಹಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ, ಜೈ ಜವಾನ ಜೈ ಕಿಸಾನ ಸೇವಾ ಸಂಘದ ನೇತೃತ್ವದಲ್ಲಿ ಹಮ್ಮಿಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಂಎಸ್‌ಪಿ ಜಾರಿಯಾದರೆ ಮಾರುಕಟ್ಟೆೆಯಲ್ಲಿ ಬೆಲೆ ಕುಸಿತ ಸಂದರ್ಭದಲ್ಲಿ ಸರಕಾರವೇ ರೈತರ ಉತ್ಪನ್ನಗಳನ್ನು ಖರೀದಿ ಮಾಡುತ್ತದೆ. ಇದರಿಂದ ರೈತರಿಗೆ ಕನಿಷ್ಟ ಬೆಲೆಯಾದರೂ ಸಿಗಲಿದೆ. ಈ ಬಗ್ಗೆೆ ಜಾಗೃತಿ ಮೂಡಿಸುವ ಮೂಲಕ ಸರಕಾರದ ವಿರುದ್ದ ಜನಾಂದೋಲನ ರೂಪಿಸಬೇಕು ಎಂದರು.
ತುಂಗಭದ್ರಾಾ ಈ ಭಾಗದ ಜೀವನಾಡಿ. ಸುಮಾರು 32 ಟಿಎಂಸಿಯಷ್ಟು ಹೂಳು ತುಂಬಿದ್ದರಿಂದ ನೀರಿನ ಸಮಸ್ಯೆೆ ಎದುರಾಗುತ್ತದೆ. ಸರಕಾರ ಈ ಬಗ್ಗೆೆ ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಹೂಳು ತೆಗೆಸಬೇಕು. ಇಲ್ಲದಿದ್ದರೆ ನವಲಿ ಸಮನಾಂತರ ಜಲಾಶಯ ನಿರ್ಮಿಸಬೇಕು ಎಂದು ಒತ್ತಾಾಯಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಎಲ್ಲಾಾ ವಸ್ತುಗಳ ಬೆಲೆಯನ್ನು ಉತ್ಪಾಾದಕರು ನಿರ್ಧರಿಸುತ್ತಾಾರೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ವರ್ತಕರು ನಿರ್ಧರಿಸುತ್ತಾಾರೆ. ಬೆಲೆಯಿಲ್ಲದೇ ಅನ್ನದಾತನ ಬದುಕು ದುಸ್ತರವಾಗಿದೆ. ಯಾವುದೇ ಸರಕಾರಗಳು ಬಂದರೂ ರೈತರಿಗೆ ನ್ಯಾಾಯ ಕೊಡಿಸಲು ಸಾಧ್ಯವಾಗಿಲ್ಲ. ರೈತಪರ ಸಂಘಟನೆಗಳು ಹೆಚ್ಚು ಬಲಗೊಳ್ಳಬೇಕಿದೆ ಎಂದರು.
ರಂಭಾಪುರಿ ಕಾಸಾಶಾಖಾಮಠದ ಸೋಮನಾಥ ಶಿವಾಚಾರ್ಯರು, ತುರ್ವಿಹಾಳ ಅಮೋಘ ಸಿದ್ದೇಶ್ವರಮಠದ ಮಾದಯ್ಯ ಗುರುವಿನ್, ಬಂಗಾರಿ ಕ್ಯಾಾಂಪಿನ ಶರಣರು ಸಾನಿಧ್ಯವಹಿಸಿದ್ದರು. ಬಸವರಾಜ ಗೋಡಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್‌ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ಮುಖಂಡ ರಾಜೇಶ ಹಿರೇಮಠ, ತಿಮ್ಮಣ್ಣ ಸಾಹುಕಾರ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗವೇಣಿ ಪಾಟೀಲ್, ಮಹಾದೇವಮ್ಮ, ಸುವರ್ಣ ಹಿರೇಮಠ, ಸಿಪಿಐಎಂನ ಎಂ.ಗಂಗಾಧರ, ಬಸವರಾಜ ಗೊರೇಬಾಳ, ಪರಶುರಾಮ, ರವಿಕುಮಾರ, ವೀರೇಶ ದಿದ್ದಿಗಿ, ನಾರಾಯಣ ಬೆಳಗುರ್ಕಿ, ಸಿದ್ದನಗೌಡ ಗೋನವಾರ, ಮಾಳಪ್ಪ ಪೂಜಾರಿ, ದೊಡ್ಡನಗೌಡ ಕಲ್ಲೂರು, ಹನುಮಂತಪ್ಪ ಗೋಡಿಹಾಳ ಸೇರಿದಂತೆ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ