Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಂಡ್ರಹಳ್ಳಿ ಎಂಪಿಸಿಎಸ್ ಸಂಘವು 3.36 ಲಕ್ಷ ರೂ. ನಿವ್ವಳ ಲಾಭ

ಸುದ್ದಿಮೂಲ ವಾರ್ತೆ




ಹೊಸಕೋಟೆ, ಜು 19  : ಕೃಷಿಕರು ಹೈನುಗಾರಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುತ್ತದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್. ಧರ್ಮೇಶ್ ತಿಳಿಸಿದರು.


ತಾಲೂಕಿನ ಕೊಂಡ್ರಹಳ್ಳಿಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಹಾಲು ಉತ್ಪಾದಕರಿಗೆ ಸರಕಾರ ಮತ್ತು ಬಮೂಲ್ ವತಿಯಿಂದ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಿ ಆರ್ಥಿಕ ಮಟ್ಟ ಉತ್ತಮ ಪಡಿಸುವ ದಿಸೆಯತ್ತ ಮುನ್ನಡೆಯುತ್ತಿದೆ. ಕೃಷಿಕರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಬೇಕು. ಸಂಘವು 2022-23 ನೇ ಸಾಲಿನಲ್ಲಿ ಒಟ್ಟು ಲಾಭ7.52 ಲಕ್ಷ ರೂ.ಗಳಲ್ಲಿ ನಿವ್ವಳ ಲಾಭ 3.36 ಲಕ್ಷ ರೂ. ಗಳಿಸಿದೆ ಎಂದರು.


ಹೊಸಕೋಟೆ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಕೆ.ಆರ್. ರಮೇಶ್ ಮಾತನಾಡಿ, ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಒಳ್ಳೆಯ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡುವುದಲ್ಲದೆ, ರೋಗಗಳು ಬಾರದಂತೆ ಅರ್ಯುವೇದ ಮೂಲಿಕೆ ಬಳಕೆ ಮಾಡಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬಳಕೆ, ಸ್ವಚ್ಛತೆಯಿಂದ ಕೆನೆಭರಿತ ಹಾಲು ಉತ್ಪಾದಿಸಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಸಂಘಕ್ಕೆ ಅತಿಹೆಚ್ಚು ಹಾಲು ಪೂರೈಕೆ ಮಾಡಿ ಹೈನುಗಾರ ಕೃಷ್ಣಮೂರ್ತಿರವರಿಗೆ 10578 ರೂ. ಬೋನಸ್ ನೀಡಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಹೊಸಕೋಟೆ ಶಿಬಿರದ ಮಾರ್ಗ ವಿಸ್ತಾರಣಾಧಿಕಾರಿ ಟಿ.ಎಂ. ಆನಂದ್, ಎಸ್‌ಎಫ್‌ಸಿಎಸ್ ನಿರ್ದೇಶಕ ರವಿಶಂಕರ್, ಗ್ರಾಪಂನ ಸದಸ್ಯರಾದ ಎನ್.ಎನ್.ಮಂಜುನಾಥ್, ಮುನಿವೆಂಕಟಪ್ಪ ಬಚ್ಚಪ್ಪ, ಎಂಪಿಸಿಎಸ್ ಉಪಾಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕರಾದ ಕೆ.ಮಂಜುನಾಥ್, ಎನ್.ಗಂಗಾಧರ್, ನಾಗರಾಜು ಕೆ.ಎಸ್, ಕೆ.ಸೋಮಣ್ಣ, ವೆಂಕಟಶಾಮಪ್ಪ, ಕೆ.ಎನ್.ಮಂಜುನಾಥ್, ಕೆ.ಎನ್.ರಮೇಶ್, ಬಿ.ನಾರಾಯಣಪ್ಪ, ಪಿ.ಮಂಜುಳ, ಸರಸ್ವತಮ್ಮ ಮುಖ್ಯ ಶಿಕ್ಷಕ ಬಾಲಾಜಿ, ಮುಖ್ಯ ಕಾರ್ಯನಿರ್ವಾಹಕ ಪುರುಷೋತ್ತಮ್, ಹಾಲು ಪರೀಕ್ಷಕ ಗಿಡ್ಡಪ್ಪ, ಸಹಾಯಕ ಚಂದ್ರಪ್ಪ ಹಾಗೂ ಹೈನುಗಾರರು ಹಾಜರಿದ್ದರು.







Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ