Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮ ಸಮಾಜ ನಿರ್ಮಾಣದತ್ತ ಎಲ್ಲರೂ ದಾಪುಗಾಲು ಹಾಕಿ : ಎಂ.ಎಂ.ಶ್ರೀನಿವಾಸ್‌‌‌

ಸುದ್ದಿಮೂಲ ವಾರ್ತೆ

ದೇವನಹಳ್ಳಿ, ಆ. 9 : ಶೋಷಿತ ಸಮುದಾಯಕ್ಕೆ ರಾಜಕೀಯ ಬಲ‌ನೀಡುವಲ್ಲಿ ಮೀಸಲಾತಿಯೂ ಮಹತ್ವದ ಪಾತ್ರ‌ ಹೊಂದಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದಿಂದ ಸಮ ಸಮಾಜ ನಿರ್ಮಾಣದತ್ತ ಎಲ್ಲರೂ ದಾಪುಗಾಲು ಇಡುತ್ತಿದ್ದೇವೆ ಎಂದು ಆದಿ ಜಾಂಭವ ಟ್ರಸ್ಟ್ ನ ಗೌರವಾಧ್ಯಕ್ಷ ಎಂ.ಎಂ.ಶ್ರೀನಿವಾಸ್‌‌‌ ಅಭಿಪ್ರಾಯಪಟ್ಟರು.

'ಹಳ್ಳಿಗಳು ಪೂರ್ಣ‌‌ ಪ್ರಮಾಣದಲ್ಲಿ‌ ಅಭಿವೃದ್ಧಿಯಾದರೇ ಇಡೀ ದೇಶವೇ ಅಭಿವೃದ್ಧಿ ಹೊಂದಿದಂತೆ. ಗ್ರಾಮ‌ಪಂಚಾಯಿತಿಗಳ ಮುಖ್ಯಸ್ಥರಾಗಿ ನೀವುಗಳು ಮಾಡುವ ಕೆಲಸ ಶಾಶ್ವತವಾಗಿ‌ ಜನರು ನೆನಪಿನಲ್ಲಿಟ್ಟಿಕೊಳ್ಳಬೇಕು. ದಲಿತ ನಾಯಕತ್ವದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿನ್ನು ಅಪ್ಪುಕೊಳ್ಳುವಂತಹ ಆಡಳಿತ ವೈಖರಿ ನಿಮ್ಮದಾಗಲಿ' ಪ್ರಭ ಆರ್ಥಿಕವಾಗಿ ಹಿಂದುಳಿತ ಕುಟುಂಬ ನವ ಯುವಕರಿಗೆ ಸಂವಿಧಾನದ ಆಶಯ ತಿಳಿಸಿ, ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿ, ನಿಮ್ಮ‌ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬೋಬ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ತಯಾರು ಮಾಡಿ, ದೇಶ ಸೇವೆಗೆ ಅಣಿಯಾಗುವಂತಹ ವಾತಾವರಣ ನಿರ್ಮಿಸಿ' ಎಂದರು.

ಮಾಜಿ ಪುರಸಭಾ ಅಧ್ಯಕ್ಷ‌ ಎಂ.ಮೂರ್ತಿ ಮಾತನಾಡಿ, 'ರಾಜಕೀಯ ರಂಗದಲ್ಲಿಯೂ ಸೇವೆ ಮಾಡಲು ಸಾಕಷ್ಟು ವಿಫುಲ ಅವಕಾಶಗಳಿದ್ದು, ಯುವಕರು ಅದನ್ನು ಸದ್ಬಳಕೆ‌ ಮಾಡಿಕೊಳ್ಳಬೇಕು. ವಿದ್ಯಾವಂತರು ಸ್ಥಳೀಯ ಸರ್ಕಾರದ‌ ಚುಕ್ಕಾಣಿ ಹಿಡಿದಾಗ ಭ್ರಷ್ಟಾಚಾರರಹಿತವಾಗಿ ಹಳ್ಳಿಗಳಲ್ಲಿ ಪ್ರಗತಿಯ ಶಕೆ ಪ್ರಾರಂಭವಾಗುತ್ತದೆ' ಎಂದರು.

ಜಾಲಿಗೆ ಪಂಚಾಯಿತಿ ಅಧ್ಯಕ್ಷ ಎಸ್.ಎಂ.ಆನಂದ್ ಕುಮಾರ್ , ಯಲಿಯೂರು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಕನ್ನಮಂಗಲ ಪಂಚಾಯಿತಿಯ ಅಧ್ಯಕ್ಷೆ ಗೌರಮ್ಮ, ಅಣ್ಣೇಶ್ವರ ಗ್ರಾಪಂ ಉಪಾಧ್ಯಕ್ಷ ಮುನಿರಾಜಪ್ಪ, ಅಲೂರು ದುದ್ದನಹಳ್ಳು ಉಪಾಧ್ಯಕ್ಷ ಮುನಿರಾಜು, ಗೊಡ್ಲು ಮುದ್ದೇನಹಳ್ಳಿ ಅಧ್ಯಕ್ಷ ಜಗದೀಶ್ ರನ್ನು ಸಮುದಾಯದ ಮುಖಂಡರು ಅಭಿನಂದಿಸಿದರು.

ಇದೇ ವೇಳೆ ಹಿರಿಯ ಮುಖಂಡರಾದ ಗುರಪ್ಪ, ಕುಂದಾಣ ಮುನಿರಾಜು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂದ್ರು, ಉಪಾಧ್ಯಕ್ಷ ಎಲ್ ಮುನಿರಾಜು, ಸಂಘಟನಾ ಕಾರ್ಯದರ್ಶಿ ರಾಘವ, ನಿರ್ದೇಶಕರಾದ ಯಲ್ಲಪ್ಪ, ಮೂರ್ತಿ , ಚಿಕ್ಕತತ್ತಮಂಗಳ ನರಸಿಂಹಯ್ಯ, ಹೇಮಂತ್, ವೆಂಕಟಗಿರಿ‌ಕೋಟೆ‌ ಹರೀಶ್ ಸೇರಿದಂತೆ‌ ಇತರರು‌ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ