Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಔಷಧಿ ಸಸ್ಯಗಳನ್ನು ಹೆಚ್ಚಾಗಿ ಬೆಳೆಯಲಿ: ಡಾ. ಲೀಲಾ

ಸುದ್ದಿಮೂಲ ವಾರ್ತೆ

ಬೆಂಗಳೂರು,ಆ.29: ಔಷಧಿ ಸಸ್ಯಗಳನ್ನು ಹೆಚ್ಚಿನ ವಲಯಗಳಲ್ಲಿ ಬೆಳೆಸುವುದರಿಂದ ಅದರ ಸಂರಕ್ಷಣೆ ಮಾಡಬಹುದು. ರೈತರು ವ್ಯವಸಾಯದಲ್ಲಿ ಅಳವಡಿಸಿ, ನಂತರ ಮಾರುಕಟ್ಟೆ ಹಾಗೂ ಬೆಲೆಯನ್ನು ನಿಗದಿಗೊಳಿಸಬೇಕು. ಇದರಿಂದ ರೈತರು ಉತ್ಸಾಹದಿಂದ ಔಷಧಿ ಬೆಳೆಗಳನ್ನು ಬೆಳೆಯುತ್ತಾರೆ ಎಂದು ಆಯುಷ್ ಇಲಾಖೆಯ ಆಯುಕ್ತರಾದ ಡಾ. ಲೀಲಾ ಅವರು ತಿಳಿಸಿದರು.

ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಸಹಯೋಗದೊಂದಿಗೆ ಔಷಧಿ ಸಸ್ಯವಲಯದ ಕ್ರಿಯಾ ಯೋಜನೆ ರಚಿಸಲು ರಾಜ್ಯಮಟ್ಟದ ಪಾಲುದಾರರ ಸಮಾಲೋಚನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಥರ್ವಣ ವೇದದಲ್ಲಿ ಕಾಯಿಲೆ, ಗುಣಲಕ್ಷಣ, ಗುಣಪಡಿಸಬಹುದುದಾದ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಕಾಲನಂತರ ಆಯುರ್ವೇದದ ಬಗ್ಗೆ ಪ್ರಾಶಸ್ತ್ಯ ನೀಡದ ಕಾರಣ ಕೆಲವು ಔಷಧಿ ಸಸ್ಯಗಳು ನಶಿಸಿ ಹೋಗಿವೆ ಎಂದು ತಿಳಿಸಿದರು.

2014-15 ರಲ್ಲಿ 17000 ಕೋಟಿ ವಹಿವಾಟು ಹಾಗೂ 2022ರಲ್ಲಿ 169 ದಶಲಕ್ಷ ಡಾಲರ್ ಲಾಭವನ್ನು ಕೈಗಾರಿಕೆಗಳು ಪಡೆದಿವೆ. ಔಷಧಿ ಸಸ್ಯಗಳ ಬೇಡಿಕೆ ಹಾಗೂ ಪೂರೈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು. ಜನಸಾಮಾನ್ಯರಿಗೆ ಗಿಡಮೂಲಿಕೆಗಳ ಅರಿವು ಮೂಡಿಸಬೇಕು. ಗಿಡಮೂಲಿಕೆಗಳ ಗಾರ್ಡನ್ ಬೆಳೆಯಲು ಆಯುಷ್ ಇಲಾಖೆಯಲ್ಲಿ ಅನುದಾನ ನೀಡಲಾಗುತ್ತಿದೆ. ಆಯುಷ್ ಇಲಾಖೆಯು ಕಿಚನ್ ಗಾರ್ಡನ್ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತಿದೆ. ಕಿಚನ್ ಗಾರ್ಡನ್ ಉಪಯೋಗಿಸಿ ಆರೋಗ್ಯ ಸಮಸ್ಯೆಗಳನ್ನು ಹೇಗೆ ಗುಣಪಡಿಸಬಹುದು ಎಂಬ ಜ್ಞಾನ ನೀಡಲಾಗುತ್ತಿದೆ. ಡಿಜಿಟಲೈಸೇಷನ್ ಮೂಲಕ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ರಾಜೀವ್ ರಂಜನ್ ಮಾತನಾಡಿ ಕಾರ್ಯಾಗಾರವು ಔಷಧೀಯ ಸಸ್ಯಗಳ ಪರಿಚಯ, ಸಂರಕ್ಷಣೆ, ಉಪಯೋಗ ಬಗ್ಗೆ ಮತ್ತು ಕಾಡುಗಳಲ್ಲಿ ಇತರೆ ಸ್ಥಳಗಳಲ್ಲಿ ಹೇಗೆ ಬೆಳೆಯಬಹುದು ಎಂಬ ಉದ್ದೇಶವನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿಯಾದ ಸುದರ್ಶನ್ ಜಿ.ಎ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಆಯುರ್ವೇದ ಔಷಧ ತಯಾರಕರ ಸಂಘದ ಅಧ್ಯಕ್ಷರಾದ ಡಾ. ನಿರಂಜನ್ ಮೂರ್ತಿ, ಟಟ್ವ ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ್ ವರ್ಚಸ್ವಿ ಇತರೆ ಗಣ್ಯರು ಉಪಸ್ಥಿತರಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ