Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಖಂಡ್ರೆೆ ಕೊಟ್ಟ ಮಾತು ಉಳಿಸಿಕೊಳ್ಳಲಿ ಬೆಳೆ ಹಾನಿ ಪರಿಹಾರ ವಿಳಂಬವೇಕೆ?: ಶಾಸಕ ಬೆಲ್ದಾಾಳೆ

ಸುದ್ದಿಮೂಲ ವಾರ್ತೆ ಬೀದರ್, ನ.22:
ಬೀರ್ದ ದಕ್ಷಿಣ ಕ್ಷೇತ್ರ ಸೇರಿದಂತೆ ಬೀದರ್, ಬಸವಕಲ್ಯಾಾಣ, ಹುಲಸೂರು, ಹುಮನಾಬಾದ್ ತಾಲ್ಲೂಕಿನ ರೈತರಿಗೆ ತಕ್ಷಣ ಅತಿವೃಷ್ಟಿಿ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ಕ್ಷೇತ್ರದ ಶಾಸಕ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಾಳೆ ಒತ್ತಾಾಯಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿಿ ಬೆಳೆ ಹಾನಿ ಪರಿಹಾರ ಸಮರ್ಪಕವಾಗಿ ವಿತರಣೆ ಆಗುತ್ತಿಿಲ್ಲ. ಬೀದರ್, ಹುಮನಾಬಾದ್, ಬಸವಕಲ್ಯಾಾಣ, ಹುಲಸೂರು ತಾಲ್ಲೂಕಿನ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಈ ಬಗ್ಗೆೆ ಅನೇಕ ರೈತರು ಖುದ್ದು ಭೇಟಿಯಾಗಿ, ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ಜಿಲ್ಲಾಡಳಿತ ತಕ್ಷಣ ಈ ಕುರಿತು ಗಮನಹರಿಸಿ ಸಂತ್ರಸ್ತ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಬೇಕೆಂದು ಶನಿವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯ ಸುಮಾರು 1.80 ಲಕ್ಷ ರೈತರ ಖಾತೆಗೆ ಶೀಘ್ರವೇ ಮೊದಲ ಹಂತದ 140 ಕೋಟಿ ರೂ. ಬೆಳೆ ಹಾನಿ ಪರಿಹಾರ ಜಮೆಯಾಗಲಿದೆ. ಜಿಲ್ಲಾಡಳಿತ ಪರಿಹಾರ ವಿತರಣೆ ಪ್ರಕ್ರಿಿಯೆ ಆರಂಭಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅವರು ಕಳೆದ ದಿ.29ರಂದು ಹೇಳಿದ್ದರು. ಆದರೆ ಈವರೆಗೆ ಅನೇಕ ರೈತರಿಗೆ ಪರಿಹಾರ ಬಂದಿಲ್ಲ. ಹೆಚ್ಚು ರೈತರು ಪರಿಹಾರಕ್ಕಾಾಗಿ ಕಾಯುತ್ತಿಿದ್ದಾರೆ. ಸಮಸ್ಯೆೆಯಲ್ಲಿರುವ ರೈತರಿಗೆ ಬೇಗ ನೆರವಾಗುವ ಕಾರ್ಯಕ್ಕೂ ಇಷ್ಟೊೊಂದು ವಿಳಂಬ, ನಿರ್ಲಕ್ಷ್ಯತೆ ವಹಿಸುತ್ತಿಿರುವುದು ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಘೋಷಿಸಿದಂತೆ ಹೆಕ್ಟೇರ್‌ಗೆ ಹೆಚ್ಚುವರಿ 8500 ರೂ. ಪರಿಹಾರ ಇನ್ನೂ ನೀಡುತ್ತಿಿಲ್ಲ. ಈಗ ನೀಡುತ್ತಿಿರುವ ಪರಿಹಾರ ಕೇಂದ್ರ ಸರ್ಕಾರದ ಎನ್‌ಡಿಆರ್‌ಎ್ ನಿಧಿಯ ಪರಿಹಾರವಾಗಿದೆ. ರಾಜ್ಯ ಸರ್ಕಾರ ಏನೂ ಕೊಟ್ಟಿಿಲ್ಲ. ಬೆಳೆ ನಷ್ಟದಿಂದ ರೈತ ಸಮೂಹ ಸಾಕಷ್ಟು ಸಂಕಷ್ಟದಲ್ಲಿ ಕಾಲ ಕಳೆಯುತ್ತಿಿದೆ. ಇಂಥ ಸ್ಥಿಿತಿಯಲ್ಲೂ ಸರ್ಕಾರದ ಹೆಚ್ಚುವರಿ ಪರಿಹಾರ ಘೋಷಣೆಗಷ್ಟೇ ಸೀಮಿತಗೊಳಿಸಿರುವ ನೀತಿ ರೈತ ವಿರೋಧಿಯಾಗಿದೆ. ಪರಿಹಾರ ನೀಡಿಕೆಯಲ್ಲಿ ಆಗುತ್ತಿಿರುವ ವಿಳಂಬವನ್ನು ಗಮನಿಸಿದರೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿಿತಿ ಸರಿಯಿಲ್ಲ. ಗ್ಯಾಾರಂಟಿ ಅಬ್ಬರದಲ್ಲಿ ಖಜಾನೆ ಝಳಝಳವಾದಂತೆ ಕಾಣುತ್ತಿಿದೆ ಎಂದು ಶಾಸಕ ಡಾ. ಬೆಲ್ದಾಾಳೆ ಟೀಕಿಸಿದ್ದಾರೆ.
ಕೊಟ್ಟ ಮಾತಿನಂತೆ ಸಚಿವರು ರೈತರಿಗೆ ಬರಬೇಕಾದ ಸುಮಾರು 280 ಕೋಟಿ ರೂ. ಬೆಳೆ ನಷ್ಟ ಪರಿಹಾರ ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಂಡು ನೊಂದ ರೈತರ ನೆರವಿಗೆ ಬರಬೇಕು. ಹೆಚ್ಚುವರಿ 8500 ರೂ. ಪರಿಹಾರ ಸಹ ತಕ್ಷಣ ರೈತರಿಗೆ ವಿತರಿಸಬೇಕು. ನಮ್ಮಲ್ಲಿ ಈಗ ಡಿಬಿಟಿ ವ್ಯವಸ್ಥೆೆ ಇರುವ ಕಾರಣ ಎಲ್ಲ ರೈತರ ಖಾತೆಗೆ ಏಕಕಾಲಕ್ಕೆೆ ಪರಿಹಾರ ಹಣ ಜಮೆ ಮಾಡಬೇಕು. ತಾಲ್ಲೂಕು ನಡುವೆ ತಾರತಮ್ಯ ಮಾಡಬಾರದು. ಜಿಲ್ಲಾಡಳಿತ ಸಹ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಬೇಗ ಹಣ ಜಮಾ ಆಗದಿದ್ದರೆ ರೈತರೊಂದಿಗೆ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ