Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಬ್ಬೆರಗಾಗಿಸಿದ ಮಲ್ಲಗಂಭ ಸಾಹಸ ಪ್ರದರ್ಶನಗಳು

ಸುದ್ದಿಮೂಲ ವಾರ್ತೆ

ಸಿರುಗುಪ್ಪ,ಸೆ.29: ಅತ್ಯಂತ ಲೀಲಾಜಾಲವಾಗಿ ಕಂಬವನ್ನೇರುತ್ತಾ ಅದ್ಭುತ ಸಾಹಸಗಳನ್ನು ಹುಡುಗರು ಪ್ರದರ್ಶಿಸುತ್ತಿದ್ದರೆ, ಕಾಲು ಬೆರಳುಗಳ ಸಂದಿಯಲ್ಲಿ ಹಗ್ಗವನ್ನು ಬಳಸಿ ಜೋತು ಬೀಳುತ್ತಾ ಆಸನಗಳನ್ನು ಪ್ರದರ್ಶಿಸಿದ ಹುಡುಗಿಯರ ಸಾಹಸ ಪ್ರದರ್ಶನ ನೋಡಗರ ಕಣ್ಮನಗಳನ್ನು ನಿಬ್ಬೆರಗಾಗಿಸಿತ್ತು.

[video width="848" height="480" mp4="https://suddimoola.in/wp-content/uploads/2023/09/VID-20230929-WA0011.mp4"][/video]

ವಿಶ್ವ ಹಿಂದೂ ಪರಿಷತ್, ಹಿಂದೂ ಮಹಾಸಭಾ, ಬಜರಂಗದಳ ಹಾಗೂ ಗಣೇಶ ಉತ್ಸವ ಸಮಿತಿ ಇವರುಗಳಿಂದ ನಗರದ ಬಳ್ಳಾರಿ ರಸ್ತೆಯ ಬಯಲು ಜಾಗದಲ್ಲಿ ಪ್ರತಿಷ್ಠಾಪಿಸಿರುವ 6ನೇ ವರ್ಷದ ಶ್ರೀ ಗಣೇಶೋತ್ಸವದ ವೇದಿಕೆ ಪ್ರದರ್ಶನಗಳ ಅಂತಿಮ ದಿನದಂದು ಈ ಸಾಹಸ ಪ್ರದರ್ಶನಗಳನ್ನು ವೇದಿಕೆಯ ಮೇಲೆ ಆಯೋಜನೆ ಮಾಡಲಾಗಿತ್ತ.

ವೇದಿಕೆ ಕಾರ್ಯಕ್ರಮಗಳ ಅಂತಿಮ ದಿನದಂದು ಸಿರುಗುಪ್ಪಾದ ರಾಜ ಎಂದು ಪ್ರಖ್ಯಾತಿ ಪಡೆದ ಶ್ರೀ ಗಣೇಶನ ಲಡ್ಡು ಪ್ರಸಾದ ಹಾಗೂ ಬೆಳ್ಳಿಯ ನಾಣ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಹರಾಜು ಪ್ರಕ್ರಿಯೆ ಮೂಲಕ ಲಿಲಾವು ಮಾಡಲಾಯಿತು. ವೇದಿಕೆಯ ಮುಂದಿನ ಆಸನಗಳಲ್ಲಿ ಆಸೀನರಾಗಿದ್ದ ನಗರದ ಅನೇಕ ವ್ಯಾಪಾರಸ್ಥರು ಗಣೇಶನ ಭಕ್ತರು ಹಾಗೂ ಅನೇಕರು ದೂರವಾಣಿಯ ಮೂಲಕವೇ ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡರು ಲಕ್ಷಾಂತರ ರೂಪಾಯಿಗಳಿಗೆ ಈ ವಸ್ತುಗಳು ಹರಾಜುಗೊಂಡವು.

ಇದೇ ಸಂದರ್ಭದಲ್ಲಿ ವಿಶ್ವದಾದ್ಯಂತ ಮಲ್ಲಗಂಬ ಮತ್ತು ಹಗ್ಗದ ಮಲ್ಲಕಂಬ ಪ್ರದರ್ಶನಗಳಿಗೆ ಹೆಸರುವಾಸಿಯಾದ ಮತ್ತು ಅನ್ಯ ದೇಶದವರಿಗೂ ಸಹ ಮಲ್ಲಗಂಬ ಸಾಹಸಕಲೆಯನ್ನು ಕಲಿಸಿಕೊಟ್ಟಿರುವ ಸಿದ್ಧಾರೂಢ ಹೂಗಾರ್ ಇವರ ತಂಡದಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿತು ಕಿರಣ್ ಹೂಗಾರ್ ಸಾಹಸ ಕಲೆಗಳ ಮತ್ತು ಆಸನಗಳ ಬಗ್ಗೆ ನಿರೂಪಣೆ ನೀಡಿದರು ಅಲ್ಲದೆ ಶುಕ್ರವಾರದ ಗಣೇಶ ವಿಸರ್ಜನ ಮೆರವಣಿಗೆಯಲ್ಲಿಯೂ ಸಹ ಆಕರ್ಷಕ ಪ್ರದರ್ಶನ ನೀಡಲಾಗುವುದೆಂದು ತಿಳಿಸಿದರು.

ಈ ವೇಳೆ ಗಣೇಶೋತ್ಸವ ನಡೆಸಲು ತನು ಮನ ಧನ ಮತ್ತು ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತಾ ಗಣೇಶನ ಆಶೀರ್ವಾದ ಎಲ್ಲರಿಗೂ ಇರಲಿ ಎಂದು ಹಾಸ್ಯ ಕಲಾವಿದ ಮತ್ತು ಶಿಕ್ಷಕರು ಆದ ಜೆ ನರಸಿಂಹಮೂರ್ತಿ ತಮ್ಮ ನಿರೂಪಣೆಯಲ್ಲಿ ತಿಳಿಸಿದರು.

ಈ ವೇಳೆ ಎಲ್ಲರಿಗೂ ಸತ್ಕರಿಸಿ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಸಂಘದ ಎಲ್ಲಾ ಸದಸ್ಯರುಗಳಿಗೂ ಫೋಟೋ ಶೂಟ್ ಕಾರ್ಯಕ್ರಮ ನಡೆಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ