Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಲ್ಲೇಶ್ವರ: 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ

ಸುದ್ದಿಮೂಲ ವಾರ್ತೆ

ಬೆಂಗಳೂರು,ಮಾ.24: ಸಾರ್ವಜನಿಕರಿಗೆ ವೈಫೈ ಸೌಲಭ್ಯವು ಸುಗಮವಾಗಿ ಸಿಗಬೇಕು ಎನ್ನುವ ಸದುದ್ದೇಶದೊಂದಿಗೆ ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಿರುವ 100 ಹಾಟ್‌ಸ್ಪಾಟ್‌ ತಾಣಗಳಿಗೆ ಸ್ಥಳೀಯ ಶಾಸಕರಾದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ತಂತ್ರಜ್ಞಾನವು ನೀರಿಗಿಂತಲೂ ಹೆಚ್ಚಿನ ಮೂಲಭೂತ ಅಗತ್ಯವಾಗಿ ಪರಿಣಮಿಸಿದೆ. ಹೀಗಾಗಿ ಆಕ್ಟ್‌ ಫೈಬರ್‍‌ನೆಟ್‌ ಕಂಪನಿಯ ಸಹಯೋಗದಲ್ಲಿ ಉದ್ಯಾನ, ಮೆಟ್ರೋ ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಇತರ ಸಾರ್ವಜನಿಕ ತಾಣಗಳಲ್ಲಿ ಈ ಹಾಟ್‌ಸ್ಪಾಟ್‌ ಸೌಲಭ್ಯ ಕೊಡಲಾಗುತ್ತಿದೆ. ಇದರಡಿಯಲ್ಲಿ ಸಾರ್ವಜನಿಕರು 25 ಎಂಬಿಪಿಎಸ್‌ ವೇಗದಲ್ಲಿ ಕೆಲಸ ಮಾಡುವ ಇಂಟರ್‍‌ನೆಟ್ಟನ್ನು ಮುಕ್ಕಾಲು ಗಂಟೆ ಕಾಲ ಉಚಿತವಾಗಿ ಬಳಸಿಕೊಳ್ಳಬಹುದು" ಎಂದರು.


ಆಕ್ಟ್‌ ಫೈಬರ್‍‌ನೆಟ್‌ ಗಿಗಾಬೈಟ್‌ ಸಾಮರ್ಥ್ಯವುಳ್ಳ ಕಂಪನಿಯಾಗಿದೆ. ಸರಕಾರವು ಈ ಕಂಪನಿಯ ಸಹಯೋಗದಲ್ಲಿ ನೀಡುತ್ತಿರುವ ಸೌಲಭ್ಯದಿಂದ ವಿಡಿಯೋ ಕಾಲಿಂಗ್, ಸ್ಟ್ರೀಮಿಂಗ್, ತ್ವರಿತ ಗತಿಯಲ್ಲಿ ಕಡತಗಳ ರವಾನೆ ಎಲ್ಲವನ್ನೂ ತಾವಿದ್ದಲ್ಲಿಂದಲೇ ಮಾಡಬಹುದು. ಮುಖ್ಯವಾಗಿ ಇದು ಸಮಾಜದಲ್ಲಿರುವ ಡಿಜಿಟಲ್ ಕಂದಕವನ್ನು ಮುಚ್ಚಲಿದೆ. ಜತೆಗೆ ಮೂಲಸೌಲಭ್ಯಗಳನ್ನು ಒದಗಿಸಲು ಪದೇಪದೇ ರಸ್ತೆ ಅಗೆಯುವ ಪ್ರಮೇಯ ತಪ್ಪಲಿದೆ. ಕಂಪನಿಯು ಒಟ್ಟು ಆರು ಕೇಬಲ್‌ ಇರುವ ಡಕ್ಟ್‌ ಅಳವಡಿಸಿದ್ದು, ಈ ಪೈಕಿ ಮೂರು ಕೇಬಲ್‌ಗಳನ್ನು ಮುಕ್ತವಾಗಿಟ್ಟಿದೆ ಎಂದು ಅವರು ಮಾಹಿತಿ ನೀಡಿದರು.


ಆಕ್ಟ್ ಫೈಬರ್‍‌ನೆಟ್‌ ಕಂಪನಿಯವರು ಹಿಂದೆ ಕೋವಿಡ್‌ ನಿರ್ವಹಣೆ ಮತ್ತು ಲಸಿಕೆ ನೀಡುವ ಸಂದರ್ಭದಲ್ಲೂ ಸರಕಾರದೊಂದಿಗೆ ಕೈ ಜೋಡಿಸಿದ್ದರು. ಈಗ ಮಲ್ಲೇಶ್ವರ ವ್ಯಾಪ್ತಿಯಲ್ಲಿ ಎರಡು ಉದ್ಯಾನಗಳನ್ನು ಕಂಪನಿಯು ಅಭಿವೃದ್ಧಿ ಪಡಿಸಿದ್ದು, ಅವುಗಳನ್ನು ದತ್ತು ತೆಗೆದುಕೊಂಡಿದೆ. ಉದ್ಯಮಗಳಿಗೆ ಇಂತಹ ಸಮಾಜಮುಖಿ ಚಿಂತನೆಗಳು ಇರಬೇಕು ಎಂದು ಅವರು ಆಶಿಸಿದರು.


ಕಾರ್ಯಕ್ರಮದಲ್ಲಿ ಕಂಪನಿಯ ಸಿಇಒ ಬಾಲ ಮಲ್ಲಾಡಿ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಡಾ.ಆರ್ ಎಲ್‌ ದೀಪಕ್‌, ಡಿಸಿಪಿ ಡಿ.ದೇವರಾಜ್‌, ಬಿಬಿಎಂಪಿ ಜಂಟಿ ಆಯುಕ್ತ ಲೋಕನಾಥ ಮುಂತಾದವರು ಉಪಸ್ಥಿತರಿದ್ದರು.

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ