ಮಾನ್ವಿ : ಸಾಲಬಾಧೆ ರೈತ ಆತ್ಮಹತ್ಯೆ
ಸುದ್ದಿಮೂಲವಾರ್ತೆ ಮಾನ್ವಿ ಏ-3
ಸಾಲಬಾಧೆ ತಾಳಲಾರದೆ ಮಾನ್ವಿ ತಾಲೂಕಿನ ಜೀನೂರು ಗ್ರಾಮದ ರೈತ ಸಿದ್ದರಾಮೇಶ (30) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಮೃತ ಸಿದ್ದರಾಮೇಶನ ತಂದೆ ದ್ಯಾವಪ್ಪ ತನ್ನ ಎಂಟು ಎಕರೆ ಜಮೀನಿಗೆ ಸಂಬಂಧಿಸಿದಂತೆ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಕೆಲ ವರ್ಷಗಳ ಹಿಂದೆ ಸಾಲ ಪಡೆದಿದ್ದ. ಆದರೆ ಮಳೆ ಕೊರತೆಯಿಂದಾಗಿ ಬೆಳೆ ಇಳುವರಿ ಕಡಿಮೆಯಾದ ಪರಿಣಾಮ ದ್ಯಾವಪ್ಪ ಹಾಗೂ ಈತನ ಪತ್ನಿ ಕುಟುಂಬ ಸಮೇತ ಬೆಂಗಳೂರಿಗೆ ದುಡಿಯಲು ಹೋಗಿದ್ದರು. ಕಿರಿಯ ಮಗ ಸಿದ್ದರಾಮೇಶ ಹೊಲವನ್ನು ನೋಡಿಕೊಂಡು ಹೋಗುತ್ತಿದ್ದ.
ಆದರೆ ಬ್ಯಾಂಕಿನವರು ಮನೆಗೆ ಬಂದು ನಿಮ್ಮ ತಂದೆ ನಮ್ಮ ಬ್ಯಾಂಕಿನಲ್ಲಿ ಮಾಡಿದ ಸಾಲ ಮತ್ತು ಬಡ್ಡಿ 25 ಲಕ್ಷ ರೂ.ಅಧಿಕ ಆಗಿದೆ. ಕಾರಣ ಮರುಪಾವತಿ ಮಾಡಬೇಕೆಂದು ನೋಟಿಸ್ ನೀಡಿ ಹೋಗಿದ್ದರು. ಇದರಿಂದ ಮನನೊಂದ ರೈತ ಸಿದ್ದರಾಮೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.