Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜ್ಯೋತಿ ಗೊಂಡಬಾಳಗೆ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸುದ್ದಿಮೂಲವಾರ್ತೆ

ಕೊಪ್ಪಳ ಆ 13: ಜಿಲ್ಲೆಯ ಮಹಿಳಾ ಸಂಘಟಕಿ, ಹೋರಾಟಗಾರ್ತಿ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳರಿಗೆ ಬೆಂಗಳೂರಿನ ಮಾತೃಭೂಮಿ ಯುವಕರ ಸಂಘದ ಬೆಳ್ಳಿ ಮಹೋತ್ಸವ ನಿಮಿತ್ಯ ಕೊಡಮಾಡಿದ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯವನಿಕ ಸಭಾಂಗಣದಲ್ಲಿ ನಡೆದ ಸಂಘದ ಬೆಳ್ಳಿ ಮಹೋತ್ಸವ ನಿಮಿತ್ಯ ನಡೆದ ಕಾರ್ಯಕ್ರಮ ಸಂದರ್ಭದಲ್ಲಿ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ ಮತ್ತು ಹಿರಿಯ ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಪ್ರದಾನ ಮಾಡಿದರು.

ಪ್ರಶಸ್ತಿಯು ಬೆಳ್ಳಿ ಪದಕ, ಪ್ರಶಸ್ತಿ ಫಲಕ, ಪ್ರಶಸ್ತಿ ಗೌರವ ಮತ್ತು ಪರಿಚಯ ಕೃತಿ ಒಳಗೊಂಡಿದೆ.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಹೊಸಮನಿ, ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಮತ್ತು ಮಾತೃಭೂಮಿ ಯುವಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್. ಬಾಲಾಜಿ, ಸಹಕಾರ ಸಂಘದ ರಾಜ್ಯ ಜಂಟಿ ನಿರ್ದೇಶಕ ಲಕ್ಷ್ಮೀಪತಯ್ಯ, ಬೆಂಗಳೂರಿನ ಸಂಸ್ಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಎಂ.ಎ. ರಾಮಚಂದ್ರ, ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಪ್ರತಾಪ್ ಲಿಂಗಯ್ಯ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಒಕ್ಕೂಟ ಅಧ್ಯಕ್ಷ ಡಾ. ಜಾವೇದ ಜಮಾದಾರ ಇತರರು ಇದ್ದರು.

ಇದೇ ವೇಳೆ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇತರ ೨೪ ಜನ ಪ್ರಮುಖ ಸಾಧಕರಿಗೂ ಸಹ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆದ ಇತರ ಸಾಧಕರು : ಡಾ. ಸತೀಶಕುಮಾರ ಎಸ್. ಹೊಸಮನಿ (ಗ್ರಂಥಾಲಯ), ಪ್ರಕಾಶ್ ಮೂರ್ತಿ ಎಂ. (ಕನ್ನಡ ಪರಿಚಾರಕ), ಡಾ. ಕೆ. ಎನ್ ವಿಜಯ್ ಕೊಪ್ಪ (ಕಾನೂನು), ಅರವಿಂದ ಮಂಜುನಾಥ್ (ಧಾರ್ಮಿಕ), ಮುನಿಕೃಷ್ಣ ಎನ್. ಪಿ. (ಸಮಾಜ ಸೇವೆ), ಸೂರಿ ಶ್ರೀನಿವಾಸ್ (ಕನ್ನಡ ಸೇವೆ), ವಿನಯ್ ಕನಕನಾಲ್ ಎ. (ಕಾನೂನು), ಗಾಯತ್ರಿ ರಡ್ಡಿ (ಶಿಕ್ಷಣ), ಬಾಲನಗೌಡ ಎಸ್. ಪಾಟೀಲ್ (ಜಾನಪದ), ಡಿ.ಎಮ್. ಸಾಹುಕಾರ್ (ಪತ್ರಿಕೋದ್ಯಮ), ಗಿರೀಶ್ ಲಕ್ಷ್ಮಿನಾರಾಯಣ (ಉದ್ಯಮ), ವಿಠಲ್ ಬಂಟನೂರು (ಕ್ರೀಡೆ), ರವೀಂದ್ರನಾಥ ಸಿರಿವರ (ರಂಗಭೂಮಿ), ಡಾ. ಅಶ್ವಿನಿ ನರಸಣ್ಣನವರ್ (ರಾಷ್ಟ್ರೀಯ ಸೇವಾ ಯೋಜನೆ), ನಾಗೇಶ್ವರ ರಾವ್ ವಿ. (ಕ್ರೀಡೆ), ಬಸವಲಿಂಗಪ್ಪ ನೀಲಕಂಠಪ್ಪ ಹೂಗಾರ (ಕಾನೂನು), ಭಾಗ್ಯ (ರಾಷ್ಟ್ರೀಯ ಸೇವಾ ಯೋಜನೆ), ಹರೀಶ್ ಪಿ. ವಿ. (ಶಿಕ್ಷಣ), ಮಹೇಶ್ ಎ. (ಕೃಷಿ), ಜ್ಯೋತಿ ಎಂ. ಗೊಂಡಬಾಳ (ಮಹಿಳಾ ಸಬಲೀಕರಣ), ಲೋಕೇಶ್ ನಾಯಕ್ (ರಾಷ್ಟ್ರೀಯ ಸೇವಾ ಯೋಜನೆ), ಕರಿಬಸವ ತಡಕಲ್ (ಚಲನಚಿತ್ರ), ಹರೀಶ್ ಗುಂಗೆ (ರಂಗಭೂಮಿ), ವೆಂಕಟೇಶ್ ಚೌದರಿ (ಉದ್ಯಮ), ಡಾ.ಚಂದ್ರ ಎಂ. (ಸಮಾಜ ಸೇವೆ) ರವರು ಪ್ರಶಸ್ತಿಗೆ ಭಾಜನರಾದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ