ಜಾಲಹಳ್ಳಿ ಬಸ್ ನಿಲ್ದಾಣಕ್ಕೆ ಎಇಇ ಅಣ್ಣಪ್ಪ ಭೇಟಿ
ಸುದ್ದಿಮೂಲ ವಾರ್ತೆ ಜಾಲಹಳ್ಳಿ ೩೧
ಗ್ರಾಮದ ನೂತನ ಬಸ್ ನಿಲ್ದಾಣಕ್ಕೆ ಇಂದು ಸಾರಿಗೆ ಇಲಾಖೆಯ ಎಇಇ ಅಣ್ಣಪ್ಪ ಭೇಟಿ ನೀಡಿದರು.
ಈ ತಿಂಗಳು ಗಬ್ಬೂರಿನ ಸರಕಾರಿ ವಿವಿಧ ಕಾಮಗಾರಿಗೆ ಚಾಲನೆ ಮತ್ತು ಕೆಲವು ಇಲಾಖೆಯ ನೂತನ ಕಟ್ಟಡಗಳ ಉದ್ಘಾಟನೆ ಜರುಗಿತು ಅಲ್ಲದೇ ಜಾಲಹಳ್ಳಿ ಬಸ್ ನಿಲ್ದಾಣವನ್ನು ಕೂಡ ಉದ್ಘಾಟನೆ ಮಾಡಲಾಯಿತು ಎಂದು ಅವರು ಸುದ್ದಿಮೂಲ ಕ್ಕೆ ತಿಳಿಸಿದರು.
ಬಸ್ ನಿಲ್ದಾಣದ ಒಳಗೆ ಧೂಳು ಬರದಂತೆ ಮಾಡಲು ಅಂಬೇಡ್ಕರ್ ವೃತ್ತದಿಂದ ನಿಲ್ದಾಣದ ವರೆಗೆ ಸ್ಥಳೀಯ ಆಡಳಿತ ಮಂಡಳಿ ಸಿ ಸಿ ರಸ್ತೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಹಾಗೂ ಬರುವ ಜೂನ್ ತಿಂಗಳಲ್ಲಿ ನಿಲ್ದಾಣದ ಖಾಲಿ ಜಾಗದಲ್ಲಿ ಸಸಿ ಹಾಕುವೆ ಎಂದು ಅವರು ಪತ್ರಿಕೆಗೆ ತಿಳಿಸಿದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.