Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಕಸ್ತೂರಿರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ: ಸಚಿವ ಈಶ್ವರ ಖಂಡ್ರೆ

ಸುದ್ದಿಮೂಲ ವಾರ್ತೆ

ಜು.29:ಏಟ್ರಿಯಾ ವಿಶ್ವವಿದ್ಯಾಲಯ, ಸ್ವಿಸ್ನೆಕ್ಸ್ ಮತ್ತು ಎಫ್‌ಕೆಸಿಸಿಐಗಳ ಸಹಯೋಗದೊಂದಿಗೆ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಖಾತೆ ಸಚಿವ ಈಶ್ವರ್ ಖಂಡ್ರೆ ಅಂತರಪ್ರಬೇಧಗಳ ಸಮಾವೇಶವನ್ನು ಉದ್ಘಾಟಿಸಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ನಮ್ಮ ಸರ್ಕಾರ ಪಶ್ಚಿಮ ಘಟ್ಟಗಳು ಮತ್ತು ಅದರ ಜೀವವೈವಿಧ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲು ಬದ್ಧವಾಗಿದೆ. ಸಂಜಯ್ ಕುಮಾರ್ ನೇತೃತ್ವದ ಎರಡನೇ ಸಮಿತಿ ಡಿಸೆಂಬರ್ ವೇಳೆಗೆ ವರದಿಯನ್ನು ಜಾರಿಗೊಳಿಸುವ ನಿರೀಕ್ಷೆಯಿದ್ದು ಅದರ ಆಧಾರದ ಮೇಲೆ ಸರ್ಕಾರ ಮತ್ತಷ್ಟು ಪ್ರಜ್ಞಾಪೂರ್ವಕವಾಗಿ ವರದಿ ಜಾರಿಗೆ ಕೆಲಸ ಮಾಡಲಿದೆ ಎಂದರು.

ಪಶ್ಚಿಮ ಘಟ್ಟಗಳ ಬಹುತೇಕ ಭಾಗವನ್ನು ಕರ್ನಾಟಕ ರಾಜ್ಯ ಹಂಚಿಕೊಂಡಿದ್ದು, ಅದರ ಭೌಗೋಳಿಕ ಪ್ರದೇಶಗಳಲ್ಲಿ 11 ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿನ ಮತ್ತು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳ ಸಂರಕ್ಷಣೆ, ತಂತ್ರಜ್ಞಾನ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾದ ಅರಿವು ಮೂಡಿಸಲು ಪ್ರಾಥಮಿಕ ಶಾಲೆ ಹಂತದಿಂದ ಪದವಿ ಹಂತದವರೆಗೆ ಪಠ್ಯಕ್ರಮವನ್ನು ತಕ್ಷಣ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು. ಸಂರಕ್ಷಣೆ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸುವ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಏಟ್ರಿಯಾ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಕಸ್ತೂರಿರಂಗನ್ ಸಮಿತಿ ವರದಿ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಅದಕ್ಕೂ ಮುನ್ನ ಗಾಡ್ಗೀಳ್ ಸಮಿತಿ ವರದಿಗೂ ಇದೇ ದುಃಸ್ಥಿತಿ ಎದುರಾಗಿತ್ತು. ಕರ್ನಾಟಕವು ಇತರ 6 ನೆರೆಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ವರದಿ ಜಾರಿಗೆ ಕಾನೂನು ರೂಪಿಸುವುದರ ಜೊತೆಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಗ್ರಾಮ ಪಂಚಾಯಿತಿಗಳಲ್ಲಿ ಅರಣ್ಯ ಸಮಿತಿಗಳು, ಅಂಗನವಾಡಿಗಳು ಮತ್ತು ಶಾಲಾ ಮಕ್ಕಳನ್ನು ಈ ಬಗ್ಗೆ ಜಾಗೃತಿ ಅಭಿಯಾನಕ್ಕೆ ತೊಡಗಿಸಿಕೊಳ್ಳಬಹುದು ಎಂದು ಸಹ ಸಲಹೆ ನೀಡಿದರು.

ಇಂಟರ್‌ ಸ್ಪೇಸಿಸ್ ಮನಿ ಗ್ರೂಪ್‌ನ ಸಂಸ್ಥಾಪಕ ಜೊನಾಥನ್ ಲೆಡ್‌ಗಾರ್ಡ್ ಅವರೊಂದಿಗೆ ಸಚಿವರು ಸಂವಾದ ನಡೆಸಿದರು, ಜೊನಾಥನ್ ಲೆಡ್ ಗಾರ್ಡ್ ಅವರು, ಜಗತ್ತಿನಾದ್ಯಂತ ಪರಿಸರ ಅವನತಿ ಸಮಸ್ಯೆಗಳ ಬಗ್ಗೆ ಮತ್ತು ನಾವು ಅವುಗಳಿಂದ ಹೇಗೆ ಹೊರಬಹುದು ಎಂಬುದರ ಕುರಿತು ಮಾತನಾಡಿದರು.

ಬೆಂಗಳೂರಿನಲ್ಲಿ ಸ್ವಿಸ್ನೆಕ್ಸ್ (ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಜಗತ್ತನ್ನು ಸಂಪರ್ಕಿಸುವ ಸ್ವಿಸ್ ಗ್ಲೋಬಲ್ ನೆಟ್‌ವರ್ಕ್) ಮತ್ತು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಸಹಯೋಗದಲ್ಲಿ ಏಟ್ರಿಯಾ ವಿಶ್ವವಿದ್ಯಾಲಯವು ಸಮಾವೇಶವನ್ನು ಆಯೋಜಿಸಿದೆ.

ಫೋಟೋ ಕ್ಯಾಪ್ಷನ್: ಎಡದಿಂದ ಬಲಕ್ಕೆ:

ಜೊನಸ್ ಬ್ರನ್‌ಶ್ವಿಗ್, ಸಿಇಒ ಮತ್ತು ಭಾರತದಲ್ಲಿ ಸ್ವಿಸ್ನೆಕ್ಸ್‌ನ ಕಾನ್ಸಲ್ ಜನರಲ್, ಸ್ವಿಟ್ಜರ್ಲೆಂಡ್‌ನ ಕಾನ್ಸುಲೇಟ್ ಜನರಲ್(ರಾಯಭಾರಿ)

ಗೋಪಾಲ್ ರೆಡ್ಡಿ, ಅಧ್ಯಕ್ಷರು - ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (FKCCI)

ಈಶ್ವರ ಖಂಡ್ರೆ- ಮಾನ್ಯ ಅರಣ್ಯ, ಪರಿಸರ, ಪರಿಸರ ವಿಜ್ಞಾನ ಖಾತೆ ಸಚಿವರು, ಕರ್ನಾಟಕ ಸರ್ಕಾರ  ಕೆ ನಾಗರಾಜು, ಟ್ರಸ್ಟಿ ಸದಸ್ಯ, ಏಟ್ರಿಯಾ ಶಿಕ್ಷಣ ಟ್ರಸ್ಟ್, ಕಾರ್ಯನಿರ್ವಾಹಕ ನಿರ್ದೇಶಕ - ಏಟ್ರಿಯಾ ಗ್ರೂಪ್ ಜೊನಾಥನ್ ಲೆಡ್‌ಗಾರ್ಡ್, ಸಂಸ್ಥಾಪಕ - ಇಂಟರ್‌ ಸ್ಪೇಸಿಸ್ ಮನಿ ಗ್ರೂಪ್

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ