Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಎಂಟಿಸಿಗೆ 4500 ವಿದ್ಯುತ್ ಚಾಲಿತ ಬಸ್ ಖರೀದಿ : ಸಚಿವ ರಾಮಲಿಂಗಾ ರೆಡ್ಡಿ

ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.10:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆ (ಬಿಎಂಟಿಸಿ)ಗೆ ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ 4500 ವಿದ್ಯುತ್ ಚಾಲಿತ ಬಸ್‌ಗಳನ್ನು ಜಿಸಿಸಿ (ದರ ಒಪ್ಪಂದ) ಮಾದರಿಯಲ್ಲಿ ಒದಗಿಸಲು ಮಂಜೂರಾತಿ ನೀಡಲಾಗಿದ್ದು, ಟೆಂಡರ್ ಜಾರಿಯಲ್ಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಿ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಹೆಚ್.ಎಸ್.ಗೋಪಿನಾಥ್ ಅವರ ಚುಕ್ಕೆೆ ಗುರುತಿನ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಾಪ್ತಿಿಯಿಂದ 25 ಕಿ.ಮೀ. ವರೆಗೆ ಕಾರ್ಯಾಚರಣೆ ವ್ಯಾಾಪ್ತಿಿ ಹೊಂದಿದ್ದು, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ಸುರಕ್ಷಿತ ಸಾರಿಗೆ ಸೇವೆ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿಿದೆ ಎಂದು ಹೇಳಿದರು.
ಪ್ರತಿದಿನ ಹವಾನಿಯಂತ್ರಿಿತ ಸಾರಿಗೆಗಳನ್ನು ಒಳಗೊಂಡಂತೆ 1,817 ಮಾರ್ಗಗಳಲ್ಲಿ 6,274 ಅನುಸೂಚಿಗಳನ್ನು 65,934 ಸುತ್ತುವಳಿಗಳೊಂದಿಗೆ 13 ಲಕ್ಷ ಕಿ.ಮೀ.ಗಳಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ/ಅವಶ್ಯಕತೆಗನುಗುಣವಾಗಿ ಕಾರ್ಯಾಚರಣೆ ಮಾಡುತ್ತಿಿದ್ದು, ಸರಾಸರಿ 44 ಲಕ್ಷ ಪ್ರಯಾಣಿಕರು ಸಂಸ್ಥೆೆಯ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿಿದ್ದು, ಸಂಸ್ಥೆೆಯಲ್ಲಿ ನವೆಂಬರ್ - 2025ರ ಅಂತ್ಯಕ್ಕೆೆ 7051 ಬಸ್ಸುಗಳು ಕಾರ್ಯಾಚರಣೆಯಲ್ಲಿವೆ ಎಂದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆಯಲ್ಲಿ ಸಾರಿಗೇತರ ಆದಾಯ ಕ್ರೋೋಡಿಕರಿಸಲು ಬಸ್ಸುಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಟೆಂಡರ್ ಕರೆದು ಆಸಕ್ತ ವ್ಯಕ್ತಿಿ/ಏಜೆನ್ಸಿಿ/ಕಂಪನಿಗಳಿಗೆ ನಿಗದಿತ ಅವಧಿಗೆ ಹಾಗೂ ಇತರೆ ನಿಬಂಧನೆಗಳಿಗೆ ಒಳಪಟ್ಟು ಪರವಾನಗಿ ನೀಡುವ ಜಾಹೀರಾತು ಪದ್ಧತಿ ಜಾರಿಯಲ್ಲಿರುತ್ತದೆ.
ಪರವಾನಗಿ ಶುಲ್ಕದ ಜೊತೆಗೆ ಜಾಹೀರಾತು ಪ್ರದರ್ಶಿಸಲಾಗುವ ಪ್ರತಿ ಬಸ್ಸುಗಳಿಗೆ ಅನ್ವಯವಾಗುವ ಇತರೆ ಶುಲ್ಕಗಳನ್ನು ಸಹ ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಿದರು.
ಸಾರಿಗೆ ನಿಗಮಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಒಟ್ಟು 650 ಬಸ್ಸುಗಳನ್ನು ಖರೀದಿಸುವಂತೆ ಆರ್ಥಿಕ ಇಲಾಖೆಯು ಸೂಚಿಸಿದ್ದು, ಅದರಂತೆ ಕ.ರಾ.ರ.ಸಾ.ನಿಗಮಕ್ಕೆೆ ಅವಶ್ಯವಿರುವ 500 ಡೀಸೆಲ್ ಮಾದರಿಯ ಬಸ್ಸುಗಳನ್ನು ಹಾಗೂ 144 ನಗರ ಸಾರಿಗೆ ಮಾದರಿ ವಾಹನಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾಾವನೆಯು ಪರಿಶೀಲನೆಯಲ್ಲಿದೆ.
ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 5 ವೋಲ್ವೊೊ ಮಲ್ಟಿಿ ಆಕ್ಸಲ್ ಸೀಟರ್ ಹಾಗೂ 5 ಮಲ್ಟಿಿ ಆಕ್ಸಲ್ ಸ್ಲೀಪರ್ ವಾಹನಗಳನ್ನು ಖರೀದಿಸಲಾಗಿದೆ ಹಾಗೂ 60 ನಾನ್ ಎಸಿ ಸ್ಲೀಪರ್ (ಪಲ್ಲಕ್ಕಿಿ) ವಾಹನಗಳಿಗೆ ಖರೀದಿ ಆದೇಶ ಬಿಡುಗಡೆ ಮಾಡಲಾಗಿದ್ದು, ಮಾರ್ಚ್ - 2026 ರೊಳಗೆ ಸೇರ್ಪಡೆಗೊಳಿಸಲಾಗುವುದು ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ