ಮಿಯಾಜಾಕಿ, ಮೆಕಾಡೋಮಿಯಾ ಸಸ್ಯಗಳು ಸಸ್ಯಸಂತೆಯಲ್ಲಿ ಆಕರ್ಷಣೆ
ಸುದ್ದಿಮೂಲ ವಾರ್ತೆ
ಕೊಪ್ಪಳ ಆ 16:ಸಾಮಾನ್ಯವಾಗಿ ಸಂತೆಗಳೆಂದರೆ ತರಕಾರಿ, ದಿನಸಿ ಅಂಗಡಿಗಳಲ್ಲಿ ಖರೀದಿಸುವುದು ಎಂಬ ಭಾವನೆ ಇದೆ, ಆದರೆ ಕೊಪ್ಪಳದಲ್ಲಿ ಒಂದು ವಿಶಿಷ್ಠ ಸಂತೆ ನಡೆಯುತ್ತಿದೆ. ಈ ಸಂತೆಯಲ್ಲಿ ಸಸ್ಯಗಳನ್ನು ಮಾರಾಟ, ಪ್ರದರ್ಶನ ಮಾಡುತ್ತಿದ್ದಾರೆ. ಇದು ರೈತರಿಗೆ ಮನೆಗಳಲ್ಲಿ ತೋಟ ಮಾಡುವವರಿಗೆ ಅನುಕೂಲವಾಗಿದೆ. ಇದರಲ್ಲಿ ದುಬಾರಿ ಸಸಿಯಾಗಿರುವ ಮಿಯಾಜಾಕಿ ಹಾಗು ಮೆಕಾಡೋಮಿಯಾ ಎಂಬ ಸಸ್ಯಗಳನ್ನು ಪರಿಚಯಿಸಿದ್ದಾರೆ.
ಕೊಪ್ಪಳ ತೋಟಗಾರಿಕೆ ಇಲಾಖೆ. ತೋಟಗಾರಿಕೆ ಅಭಿವೃದ್ದಿ ಎಜೆನ್ಸಿಯಿಂದ ಆರು ದಿನಗಳದ ಸಸ್ಯ ಸಂತೆ ಎಂಬ ವಿಶಿಷ್ಠ ಸಸ್ಯಗಳ ಪ್ರದರ್ಶನ, ಮಾರಾಟ ಮಾಡಲಾಗುತ್ತಿದೆ. ಆರು ದಿನಗಳಲ್ಲಿ ದೇಶ, ವಿದೇಶ. ಸ್ಥಳೀಯವಾಗಿರುವ ಸಸ್ಯಗಳನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ರೈತರಿಗೆ ತೋಟಗಾರಿಕೆ ಬೆಳೆಯನ್ನು ಬೆಳೆಯಲು ಇಲಾಖೆಯಿಂದ ನೀಡುವ ಸೌಲಭ್ಯಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಕೊಪ್ಪಳದಲ್ಲಿ ಇದು ಏಳನೆಯ ಬಾರಿ ಸಸ್ಯ ಸಂತೆ ಆಯೋಜಿಸಲಾಗಿದೆ.
ಸಸ್ಯಸಂತೆ ಯಲ್ಲಿ ಈ ಬಾರಿ ಮುಖ್ಯ ಆಕರ್ಷಣೆ ಮಿಯಾಜಾಕಿ ಹಾಗು ಮೆಕಾಡೋಮಿಯಾ ಎಂಬ ಸಸ್ಯಗಳು. ಎರಡೂ ಸಸ್ಯಗಳು ವಿದೇಶಿ ತಳಿಗಳಾಗಿವೆ. ಮಿಯಾಜಾಕಿ ಮಾವಿನ ಹಣ್ಣು ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ. ಇದೇ ವೇಳೆ ಗೋಡಂಬಿ ಮಾದರಿಯ ಮೆಕಾಡೋಮಿಯಾ ಎಂಬ ಹಣ್ಣು ಸಹ ದುಬಾರಿ ಹಣ್ಣಾಗಿದೆ. ಈ ಎರಡು ಹಣ್ಣುಗಳ ಸಸಿಗಳನ್ನು ಕೊಪ್ಪಳದ ಸಸ್ಯ ಸಂತೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮಿಯಾಜಾಕಿ ಮಾವಿನ ಸಸಿಯು ಒಂದಕ್ಕೆ 5 ಸಾವಿರ ರೂಪಾಯಿ ಹಾಗು ಮೆಕಾಡೋಮಿಯಾ ಸಸಿಯು 3 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇಲಾಖೆಯಿಂದ ನೀಡುವ ಸಸಿಗಳನ್ನು ಆಸಕ್ತರು ಖರೀದಿಸಬೇಕು. ಕೇವಲ 10-10 ಸಸಿಗಳನ್ನು ತರಲಾಗಿದೆ.
ಇವುಗಳೊಂದಿಗೆ ಸಸ್ಯ ಸಂತೆಯಲ್ಲಿ ನೂರಾರು ಮಾದರಿಯ ಗುಲಾಬಿ. ಮಲ್ಲಿಗೆ. ಅಲಂಕಾರಿಕ ಸಸ್ಯಗಳು ಹಾಗು ಹೂವುಗಳು. ತರಕಾರಿಗಳು, ಗಾರ್ಡನ್ ಸಸ್ಯಗಳು ಹೀಗೆ ಸಾವಿರಾರು ಬಗೆಯ ಸಸ್ಯಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಕೇವಲ ಪ್ರದರ್ಶನ ಮಾತ್ರವಲ್ಲ ಈ ಸಸಿಗಳನ್ನು ಯಾವ ರೀತಿ ಬೆಳಸಬೇಕು. ಅವುಗಳ ನಿರ್ವಹಣೆ ಹೇಗೆ. ರೈತರಿಗೆ ಹೇಗೆ ಲಾಭವಾಗುತ್ತಿದೆ. ವರ್ಟಿಕಲ್ ಗಾರ್ಡನ್. ಕೈತೋಟ. ರೂಫ್ ಗಾರ್ಡನ್ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗುತ್ತದೆ.
ಸ್ವತಂತ್ರೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಸ್ಯ ಸಂತೆಯು ಜಿಲ್ಲೆಯ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ. ಅಲ್ಲದೆ ಇತ್ತೀಚಿಗೆ ಮನೆಗಳಲ್ಲಿ ತೋಟಗಳನ್ನು ಅಲಂಕಾರಿಕ ಸಸ್ಯಗಳನ್ನು ಹಾಕಲಾಗುತ್ತಿದೆ. ಅವುಗಳ ಮಾಹಿತಿ ನೀಡಲಾಗುತ್ತಿದೆ. ಈ ಪ್ರದರ್ಶನವನ್ನು ರೈತರು ನೋಡಿ. ತಮ್ಮ ಭೂಮಿಯಲ್ಲಿ ಹಣ್ಣು. ಹೂವುಗಳನ್ನು ಬೆಳೆದು ಆದಾಯ ಮೂಲ ಕಂಡು ಕೊಳ್ಳಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.
ಸಸ್ಯ ಸಂತೆಯನ್ನು ನೋಡಲು ನಿತ್ಯ ಸಾವಿರಾರು ಜನರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಇದರ ಲಾಭ ಪಡೆಯಲಿದ್ದಾರೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.