ನೂತನ ರೆಸ್ಟೋರೆಂಟ್ ಉದ್ಘಾಟಿಸಿದ ಶಾಸಕ ಬಿ.ಎನ್ ರವಿಕುಮಾರ್
ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಜೂ.2 : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಎಚ್ ಕ್ರಾಸ್‌ನಲ್ಲಿ ನೂತನವಾಗಿ ಆರಂಭವಾಗಿರುವ ದಿ ಸೌತ್ ರುಚಿ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಶಾಸಕ ಬಿ.ಎನ್ ರವಿಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೆಸ್ಟೋರಂಟ್ ಮಾಲೀಕ ಶಿವಕುಮಾರ್, ನಮ್ಮ ಗ್ರಾಮೀಣ ಭಾಗದಲ್ಲಿ ಒಳ್ಳೆಯ ಊಟ ಸಿಗಬೇಕು ಎಂಬುದು ಇಲ್ಲಿನ ಜನರ ಅಪೇಕ್ಷೆ. ಅದರಂತೆ ರುಚಿ- ಶುಚಿ ಆಹಾರವನ್ನು ನೀಡಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ ಎಂದರು.
ದಿ ಸೌತ್ ರುಚಿ ಫ್ಯಾಮಿಲಿ ರೆಸ್ಟೋರೆಂಟ್‌ಗೆ ಶಾಸಕ ಬಿ.ಎನ್ ರವಿಕುಮಾರ್ ಅವರು ಬಂದು ಆಶೀರ್ವಾದ ಮಾಡಿರುವುದು ಬಹಳ ಖುಷಿಯಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾದೂರು ರಘು, ಬಿ.ಎನ್ ರವಿಕುಮಾರ್ ಅವರ ತಮ್ಮ ಬಿ.ಎನ್ ಸಚಿನ್, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಎ ಉಮೇಶ್, ಚೌಡಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಸಿ.ಕೆ ಗಜೇಂದ್ರ ಬಾಬು, ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆಂಜಿನಪ್ಪ, ಎಚ್ ಕ್ರಾಸ್ ಜಗನ್ನಾಥ್,ಜೆಡಿಎಸ್ ಯುವ ಮುಖಂಡ ಹೇಮಾರ್ಲಹಳ್ಳಿ ಎಚ್,ಎಂ ಕೇಶವಮೂರ್ತಿ,ಗುತ್ತಿಗೆದಾರ ಶಾಂತಕುಮಾರ್,ಎಚ್.ಪಿ ಆಂಜಿ ನಪ್ಪ,ವಿನೋದ್ ಕುಮಾರ್, ಇನ್ನು ಮುಂತಾದವರು ಹಾಜರಿದ್ದರು
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.