Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಗ್‌ಬಾಸ್‌ನಿಂದ ಹೊರಬಂದ ಶಾಸಕ ಪ್ರದೀಪ್ ಈಶ್ವರ್

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ.10: ಬಿಗ್‍ಬಾಸ್‍ ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿರಲಿಲ್ಲ. ಆದರೆ ನಾನೇ ಸ್ಪರ್ಧಿ ಎಂದು ಉದ್ದೇಶಪೂರ್ವಕವಾಗಿಯೇ ಫ್ರಾಂಕ್ ಮಾಡಲಾಗಿತ್ತು ಎಂದು ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಚಾನೆಲ್‍ನಲ್ಲಿ ನನ್ನ ಸ್ನೇಹಿತರು ಅನೇಕ ಮಂದಿ ಇದ್ದು, ಅವರು ಆಹ್ವಾನಿಸಿದ್ದಕ್ಕಾಗಿ ಎರಡು ಮೂರು ಗಂಟೆ ಭಾಗವಹಿಸಿದ್ದೆ ಎಂದರು.

ಶಾಸಕರು ಬಿಗ್‍ಬಾಸ್‍ಗೆ ಹೋಗಿದ್ದರಿಂದಾಗಿ ನಗೆಪಾಟಲಿನ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಡಾ. ಸುಧಾಕರ್ ಮಾಡಿದ ಟೀಕೆಗೆ ತಿರುಗೇಟು ನೀಡಿದ ಅವರು, ಈ ಹಿಂದೆ ಚಿಕ್ಕಬಳ್ಳಾಪುರ ಉತ್ಸವ ಮಾಡಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಕರೆಸಿದ್ದ ಸುಧಾಕರ್‌ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈಗ ನಾನು ಬಿಗ್‍ಬಾಸ್‍ಗೆ ಹೋಗಿದ್ದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಕನಿಷ್ಠ ಸರಿಯಾಗಿ ವಿಮರ್ಶೆ ಮಾಡಲು ಅವರಿಗೆ ಬರುತ್ತಿಲ್ಲ ಎಂದರು.

ಟೀಕೆ ಮಾಡುವುದು ವಿರೋಧ ಪಕ್ಷದವರ ಹಕ್ಕು. ಒಂದು ವೇಳೆ ನಾನೇ ಸುಧಾಕರ್ ಅವರ ಸ್ಥಾನದಲ್ಲಿದ್ದರೆ ಆಟವೇ ಬೇರೆಯಾಗಿರುತ್ತಿತ್ತು. ನನ್ನ ಪ್ರಕಾರ ಸುಧಾಕರ್ ಬೆಳಿಗ್ಗೆಯಿಂದ ಸಂಜೆವರೆಗೂ ಚಾನಲ್‍ನಲ್ಲೇ ಕುಳಿತುಕೊಂಡಿರಬೇಕಿತ್ತು. ಬಿಗ್‍ಬಾಸ್‍ಗೆ ಹೋಗಿರುವುದು ನಗೆಪಾಟಲು ಎಂದಿದ್ದಾರೆ. ಅದೊಂದು ದೊಡ್ಡ ವೇದಿಕೆ. ಕೋಟ್ಯಂತರ ಜನ ನೋಡುತ್ತಾರೆ. ನಾನು ಯುವಜನರಿಗೆ ಒಂದಷ್ಟು ಸಕಾರಾತ್ಮಕ ಸಂದೇಶಗಳನ್ನು ನೀಡಬೇಕಿತ್ತು. ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಬಿಗ್‍ಬಾಸ್ ಕೂಡ ದೊಡ್ಡ ವೇದಿಕೆಯಾದ್ದರಿಂದ ಅದರಲ್ಲಿ ಭಾಗವಹಿಸಿದ್ದೆ ಎಂದರು.

ಬೆಳಿಗ್ಗೆಯಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಸಂಜೆ ಬೆಂಗಳೂರಿಗೆ ಬಂದು 8.30 ರ ವೇಳೆಗೆ ಶೋಗೆ ಹೋದೆ. 11.30 ರ ವೇಳೆಗೆ ವಾಪಸ್ ಬಂದೆ. ಚಾನಲ್‍ನವರು ಮಾರುಕಟ್ಟೆ ದೃಷ್ಟಿಯಿಂದ ನನ್ನನ್ನು ಸ್ಪರ್ಧಿ ಎಂದು ಫ್ರಾಂಕ್ ಮಾಡುವುದಾಗಿ ಹೇಳಿದರು. ಅನುಕೂಲವಾಗುವುದಾದರೆ ಆಗಲಿ ಎಂದು ನಾನು ಸುಮ್ಮನಿದ್ದೆ ಎಂದು ಹೇಳಿದರು.

ಸ್ಪರ್ಧಿಗಳನ್ನು ಪ್ರೇರೇಪಿಸುವ ಸಂದೇಶ ನೀಡುವುದು ನನ್ನ ಉದ್ದೇಶವಾಗಿತ್ತು. ನಾನು ಬಿಗ್‍ಬಾಸ್‍ಗೆ ಹೋಗಿದ್ದು ಏಕೆ ಎಂದು ಮಾಜಿ ಶಾಸಕರಿಗೆ ಅರ್ಥವಾಗಿಲ್ಲ. ಹೋಗಲಿ ಅವರು ಸರಿಯಾಗಿ ಟೀಕೆ ಮಾಡಿಲ್ಲ. ಇನ್ನು ಕೆಲವು ಸಂಘಟನೆಗಳು ನನ್ನ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಇದು ಅವರ ಅಸ್ತಿತ್ವದ ಪ್ರಶ್ನೆ. ನನ್ನ ಆಕ್ಷೇಪವೇನಿಲ್ಲ. ಟೀಕೆಗಳನ್ನು ಎದುರಿಸಲು ಸಿದ್ಧವಾಗಿಯೇ ರಾಜಕಾರಣಕ್ಕೆ ಬಂದಿದ್ದೇನೆ. ಇಂತವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

 

 

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ