Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆನೇಕಲ್: ಅಂಬೇಡ್ಕರ್ ಜಯಂತಿ ಅಂಗವಾಗಿ ಮಿಸ್ಟರ್ ಜೈ ಭೀಮ್ ದೇಹದಾರ್ಡ್ಯ ಸ್ಪರ್ಧೆ

ಸುದ್ದಿಮೂಲ ವಾರ್ತೆ
ಆನೇಕಲ್, ಏ.17:  ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಜೈ ಭೀಮ ಐಕ್ಯತೆ ವೇದಿಕೆ ವತಿಯಿಂದ 132ನೇ ಅಂಬೇಡ್ಕರ್ ಜಯಂತಿ  ಅಂಗವಾಗಿ ಇಂದು ರಾಮಕುಟೀರದಲ್ಲಿ ದೇಹದಾರ್ಡ್ಯ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ರಾಯಲ್ ಫಿಟ್ನೆಸ್ ಮಿಸ್ಟರ್ ಜೈ ಭೀಮ್ ಶೀರ್ಷಿಕೆ ಅಡಿಯಲ್ಲಿ ಬಾಡಿ ಬಿಲ್ಡರ್‌ಗಳು ತಮ್ಮ ದೇಹ ಪ್ರದರ್ಶನ ಮಾಡಿದರು. ತೀರ್ಪುಗಾರರಾಗಿ ಪ್ರಕಾಶ್ ಹಾಗೂ ಆನೇಕಲ್ ವಸಂತ್ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ, ಬಾಬಾ ಸಾಹೇಬರ ಜನ್ಮ ದಿನೋತ್ಸವವನ್ನು ಇಡೀ ವಿಶ್ವವೇ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದೆ.  ಆದರೆ ನಮ್ಮ ಭಾರತದಲ್ಲಿ ಜಾತಿ ವ್ಯವಸ್ಥೆಯಿಂದ ಅಂತ ಮಹಾನ್ ವ್ಯಕ್ತಿಗೆ ಗೌರವ ಸಿಗುತ್ತಿಲ್ಲ. ಬಾಬಾ ಸಾಹೇಬರ ಕನಸು ಸರ್ವರಿಗೂ ಸಮಪಾಲು ಸಮಾನತೆ ಹಕ್ಕು ಕೊಟ್ಟವರು ಎಂದು ಹೇಳಿದರು.

ಬಾಬಾ ಸಾಹೇಬರ ಕನಸು ಶೇ.52 ರಷ್ಟು ಮೀಸಲಾತಿ ಕೊಡಬೇಕಾಗಿತ್ತು. ಆದರೆ ಹಿಂದುಳಿದ ವರ್ಗಕ್ಕೆ ಶೇ.27 ನೀಡಿ ಅನ್ಯಾಯ ಮಾಡುತ್ತಿದ್ದಾರೆ. ಈ ದೇಶ ಹಸಿವು ಮುಕ್ತ ರಾಷ್ಟ್ರ ಆಗಬೇಕು, ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಆಗ ಮಾತ್ರ ಅಂಬೆಡ್ಕರ್ ದಿನಾಚರಣೆ ಅರ್ಥಪೂರ್ಣ ಎಂದರು.

ಇನ್ನು ದಲಿತ ಪರ ಸಂಘಟನೆ ಒಕ್ಕೂಟದ ಹೋರಾಟಗಾರ್ತಿ ತ್ರಿಪುರ ಸುಂದರಿ ಮಾತನಾಡಿ, ಇತ್ತೀಚಿನ ಯುವಕರು ಮದ್ಯವ್ಯಸನ ದಾಸರಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲ ಯುವಕರು ದುಶ್ಚಟಗಳಿಂದ ದೂರಾಗಲು ಬಾಡಿ ಬಿಲ್ಡರ್ ಹಾಗೂ ಮತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ಗೆ ಹೋಗಿ ಆರೋಗ್ಯ ವೃದ್ಧಿಸಿಕೊಳ್ಳುತ್ತಿರುವುದು ದೇಶವನ್ನು ಮುನ್ನಡೆಸುವುದಕ್ಕೆ ಸಹಕಾರಿ ಆಗಲಿದೆ ಎಂದರು.

ಇನ್ನೂ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಮೊದಲನೇಯ ಬಹುಮಾನವನ್ನು ನಾಗಾರ್ಜುನ್ ಅವರಿಗೆ,  ಬೊಮ್ಮಸಂದ್ರ ಮುಜಾಮಿನ್ ಈಗಲ್ ಫಿಟ್ನೆಸ್ ಬೆಸ್ಟ್ ಪೋಸ್ ಅವಾರ್ಡ್ 47 ವರ್ಷದ  ಅತ್ತಿಬೆಲೆ ಸುರೇಶ್ ಅವರಿಗೆ ನೀಡಲಾಯಿತು.  ಇದೇ ಸಂದರ್ಭದಲ್ಲಿ 'ಅಂಬೇಡ್ಕರ್ ವರ್ತಮಾನ ಮುನ್ನೋಟ'ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.

Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ