Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಬೇಡಿಕೆ: ಮುತ್ತುರಾಜ್

ಸುದ್ದಿಮೂಲ ವಾರ್ತೆ ಹೊಸಪೇಟೆ, ನ.28:
ಇತ್ತೀಚಿನ ವರ್ಷಗಳಲ್ಲಿ ಸವಿತಾ ಸಮಾಜದ ಜನರ ಕ್ಷೌರಿಕ ಕುಲ ವೃತ್ತಿಿಗೆ ದೊಡ್ಡ ಉದ್ಯಮಿಗಳು ಲಗ್ಗೆೆಯಿಡುತ್ತಿಿರುವುದರಿಂದ ಸಲೂನ್ ಆರಂಭಿಸಲು ಹೆಚ್ಚು ಬಂಡವಾಳ ಬೇಕಾಗುತ್ತದೆ. ಸಮಾಜದ ಜನರಿಗೆ ಹೆಚ್ಚಿಿನ ಅನುದಾನ ಒದಗಿಸಲು ಮುಂದಿನ ಆಯವ್ಯಯದಲ್ಲಿ ಸವಿತಾ ಸಮಾಜ ಅಭಿವೃದ್ಧಿಿ ನಿಗಮಕ್ಕೆೆ ಕನಿಷ್ಠ 100 ಕೋಟಿ ರೂ. ಒದಗಿಸುವಂತೆ ಮುಖ್ಯಮಂತ್ರಿಿಗೆ ಮನವಿ ಮಾಡುವುದಾಗಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್ ಹೇಳಿದರು.
ಸವಿತಾ ಸಮಾಜದ ಜನರ ಸ್ಥಿಿತಿ-ಗತಿ ಅವಲೋಕಿಸಲು ರಾಜ್ಯ ಪ್ರವಾಸ ಕೈಗೊಂಡಿರುವ ನಿಗಮದ ಅಧ್ಯಕ್ಷ ಮುತ್ತುರಾಜ್ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸವಿತಾ ಸಮಾಜದಿಂದ ಸನ್ಮಾಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಸಾಂಪ್ರದಾಯಿಕವಾಗಿದ್ದ ಕ್ಷೌರಿಕ ವೃತ್ತಿಿ ಇತ್ತೀಚೆಗೆ ಆಧುನಿಕತೆಗೆ ತೆರೆದುಕೊಳ್ಳುತ್ತಿಿದೆ. ಕೆಲ ಬಹುರಾಷ್ಟ್ರೀಯ ಕಂಪನಿಗಳೂ ಸೆಲೂನ್, ಸ್ಪಾಾ ತೆರೆಯುತ್ತಿಿರುವುದರಿಂದ ಕುಲ ವೃತ್ತಿಿಯನ್ನೇ ನಂಬಿರುವ ಜನರ ಬದುಕು ಬೀದಿಗೆ ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸವಿತಾ ಸಮಾಜ ಜನರಿಗೆ ಕುಲ ವೃತ್ತಿಿಯೇ ಜೀವಾಳ. ಈ ಹಿನ್ನೆೆಲೆಯಲ್ಲಿ ನಿಗಮದಿಂದ ಚಾಲ್ತಿಿಯಲ್ಲಿರುವ ಯೋಜನೆಗಳ ಪೈಕಿ ಗಂಗಾ ಕಲ್ಯಾಾಣ ಕೈಬಿಟ್ಟು, ಸ್ವಯಂ ಉದ್ಯೋೋಗಕ್ಕೆೆ ನೀಡಲಾಗುವ ಸಾಲದ ಪ್ರಮಾಣ ಹೆಚ್ಚಿಿಸಲು ಚಿಂತನೆ ನಡೆಸಲಾಗುತ್ತಿಿದೆ. ಸಮಾಜದಲ್ಲಿ ಕೃಷಿ ಭೂಮಿ ಹೊಂದಿರುವವರ ಹೆಚ್ಚಿಿನ ಸಂಖ್ಯೆೆಯಲ್ಲಿಲ್ಲ. ಈ ಕುರಿತು ಮುಖ್ಯಮಂತ್ರಿಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ನಿಗಮದಿಂದ ನೀಡಲಾಗುವ ಸ್ವಯಂ ಉದ್ಯೋೋಗ ನೇರ ಸಾಲ, ಅರಿವು ಶೈಕ್ಷಣಿಕ ಸಾಲ, ವಿದೇಶದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಆರ್ಥಿಕ ನೆರವು, ತಾಂತ್ರಿಿಕ ಶಿಕ್ಷಣ, ಸ್ವಾಾವಲಂಭಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ಸಹಾಯಧನ ಸಹಿತ ಸಾಲ ಸೌಲಭ್ಯ ಒದಗಿಸಲಾಗುತ್ತಿಿದೆ. ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು. ಮೇಲಾಗಿ ಸವಿತಾ ಸಮಾಜ ಜನರು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಮಕ್ಕಳ ಉತ್ತಮ ಶಿಕ್ಷಣ ಒದಗಿಸಬೇಕು. ಜೊತೆಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಹೊಸಪೇಟೆ ಸವಿತಾ ಸಮಾಜದ ಅಧ್ಯಕ್ಷ ಡಿ.ತಿರುಮಲೇಶ, ಮುಖಂಡರಾದ ನಿವೃತ್ತ ಎಎಸ್‌ಐ ಶ್ರೀನಿವಾಸ್, ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಮನೋಹರ್, ಎನ್. ವೇಣುಗೋಪಾಲ, ಎನ್.ದೀಪು, ವಿ.ಮಹೇಶ ಕುಮಾರ್, ಭೀಮಣ್ಣ ಮತ್ತಿಿತರರು ಮಾತನಾಡಿ, ಸಮಾಜದ ಜನರು ಎದುರಿಸುತ್ತಿಿರುವ ಆರ್ಥಿಕ ಸಾಮಾಜಿಕ ಸಮಸ್ಯೆೆಗಳ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಕೆ.ಗಿಡ್ಡಯ್ಯ, ಕೆ.ರಾಘವೇಂದ್ರ, ಅಂಬರೀಶ್, ಶ್ರೀಧರ್, ಎಚ್. ಕೆ.ಸೋಮಶೇಖರ್ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ