Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ವರ್ಷದ ಪಾರ್ಟಿ, ಮತ ಬೇಟೆಗೆ ಆಕಾಂಕ್ಷಿಗಳು ಮುಂದು

ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ಹೊಸ ವರ್ಷ ಆಚರಣೆಗೆ ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಿದ್ಧತೆಗಳು ಆರಂಭಗೊಂಡಿದ್ದುಘಿ, ಸ್ಥಳೀಯ ಸಂಸ್ಥೆೆಗಳ ಸ್ಪರ್ಧಾಕಾಂಕ್ಷಿಿಗಳು ಪಾರ್ಟಿ ಆಯೋಜಿಸಿ ಮತ ಬೇಟೆಗೆ ಮುಂದಾಗಿರುವುದು ಗೊತ್ತಾಾಗಿದೆ.
ರಾಯಚೂರು ನಗರ ಸೇರಿ ಗ್ರಾಾಮೀಣ ಭಾಗದಲ್ಲೂ ಮುಂಬರುವ ಚುನಾವಣೆಗಳ ಗುರಿಯಾಗಿಸಿಕೊಂಡಿರುವ ಆಕಾಂಕ್ಷಿಿಗಳು ಸಂಘ-ಸಂಸ್ಥೆೆಗಳು, ಗೆಳೆಯರ ಬಳಗದ ಹೆಸರಲ್ಲಿ ಡಿ.31ರ ರಾತ್ರಿಿ ಹೊಸ ವರ್ಷದ ಸ್ವಾಾಗತಕ್ಕೆೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು.
ಅಲ್ಲದೆ, ನಗರ ಪ್ರದೇಶದಲ್ಲಿನ ಪಾಲಿಕೆಯ ಚುನಾವಣೆ ಆಕಾಂಕ್ಷಿಿಗಳು ತಮ್ಮ ಬಡಾವಣೆಯ ಮಹಿಳೆಯರಿಗೆ, ದಂಪತಿಗಳಿಗೆ ಹೋಟೇಲ್, ಆಯಾ ವಾರ್ಡ್‌ಗಳ ಗೊತ್ತಿಿದ್ದವರ ಮನೆಗಳಲ್ಲಿಯೇ ಮಧ್ಯರಾತ್ರಿಿ ಕೇಕ್ ಕತ್ತರಿಸಿ, ಊಟದ ವ್ಯವಸ್ಥೆೆ ಮಾಡಿಸಿ ಪರೋಕ್ಷವಾಗಿ ಮತಬೇಟೆಗೆ ಇಳಿದಿರುವುದು ಹೊಸ ವರ್ಷದ ಆಚರಣೆ ವೇದಿಕೆಯಾಯಿತು.
ಇನ್ನೂ ಯುವಕರು, ಪುರುಷರಿಗೆ ಪ್ರತ್ಯೇಕವಾಗಿ ಪಾರ್ಟಿಗಳ ಆಯೋಜಿಸಿ ಭೋಜನ ಕೂಟ ಏರ್ಪಡಿಸಿದ್ದ ಆಕಾಂಕ್ಷಿಿಗಳು 2025 ಕ್ಕೆೆ ವಿದಾಯ ಮತ್ತು 2026 ಕ್ಕೆೆ ಸ್ವಾಾಗತಿಸಲು ವಿವಿಧ ಸಾಂಸ್ಕೃತಿಕ ಹಾಗೂ ಇನ್ನಿಿತರೆ ಚಟುವಟಿಕೆಗಳ ಮೂಲಕ ಮನ ಗೆಲ್ಲುವ ಕಸರತ್ತು ಮಾಡಿದ್ದು ಕಂಡು ಬಂದಿತು.
ಅಲ್ಲದೆ, ವಿವಿಧ ವೃತ್ತಘಿ, ರಸ್ತೆೆಗಳಲ್ಲಿನ ಬೇಕರಿಗಳಲ್ಲಿ ಬಗೆಬಗೆಯ ಕೇಕ್‌ಗಳ ತಯಾರಿಸಿ ಅವುಗಳ ಮಾರಾಟ, ಖರೀದಿ ಜೋರಾಗಿ ಸಾಗಿತ್ತುಘಿ. ಸಂಜೆಯಾಗುತ್ತಲೆ ಜನ ಬೇಕರಿಗೆ ಬಂದು ಮುಗಿಬಿದ್ದು ಕೇಕ್ ಖರೀದಿಸಿಕೊಂಡು ಹೋಗುವುದು ಸಾಮಾನ್ಯವಾಗಿತ್ತುಘಿ.
ಹೊಸ ವರ್ಷದ ಆಚರಣೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಬಂದೋಬಸ್‌ತ್‌ ವ್ಯವಸ್ಥೆೆ ಮಾಡಿವೆ.
ಬಂದೋಬಸ್‌ತ್‌‌ಗಾಗಿ ಇಬ್ಬರು ಹೆಚ್ಚುವರಿ ಎಸ್‌ಪಿ, ನಾಲ್ವರು ಡಿಎಸ್‌ಪಿ, 15 ಜನ ಸಿಪಿಐ,23ಜನ ಪಿಎಸ್‌ಐ, 84ಜನ ಎಎಸ್‌ಐ, 510 ಪೇದೆಗಳು, 9 ಸಶಸ ಮೀಸಲು ತುಕಡಿ, 2 ಕೆಎಸ್‌ಆರ್‌ಪಿ 1 ಎಎಸ್‌ಪಿ ತಂಡಗಳ ನಿಯೋಜಿಸಲಾಗಿದೆ ಎಂದು ಎಸ್‌ಪಿ ಪುಟ್ಟಮಾದಯ್ಯ ಎಂ ತಿಳಿಸಿದ್ದಾಾರೆ.
ಹೊಸ ವರ್ಷಾಚರಣೆಯ ನೆಪದಲ್ಲಿ ಮಾದಕ ವಸ್ತು ಸೇವಿಸಿ, ಯುವಕರು ಬೈಕ್ ವ್ಹೀಲಿ ಮಾಡುವುದು ಕಿರಿಕಿರಿ ತಂದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ