Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಡಿ. 15ರಂದು ಶ್ರೀಹರಿಕೋಟಾದಿಂದ ಅಮೆರಿಕಾದ ಬೃಹತ್ ತೂಕದ ಉಪಗ್ರಹ ಉಡಾವಣೆ

ವಾಷಿಂಗ್ಟನ್, ಡಿ.13
ಅಮೆರಿಕಾದ ಅಂತ್ಯತ ತೂಕದ (6.5 ಟನ್ ) ಬೃಹತ್ ಉಪಗ್ರಹ ಬ್ಲೂಬರ್ಡ್ ಅನ್ನು ಭಾರತದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಸಿದ್ಧತೆ ಆರಂಭವಾಗಿವೆ.
ಡಿಸೆಂಬರ್ 15ರಂದು ಎಲ್ವಿಿಎಂ-3 ರಾಕೆಟ್ ಬ್ಲೂಬರ್ಡ್-6 ಹೆಸರಿನ ಅಮೆರಿಕನ್ ಉಪಗ್ರಹ ಉಡಾವಣೆಗೊಳ್ಳಲಿದೆ. ಬಹುತೇಕ ಪೂರ್ಣವಾಗಿ ಬೆಳದ ಒಂದು ಆನೆಯ ತೂಕದಷ್ಟು ಉಪಗ್ರಹದ ತೂಕ ಇದೆ ಎನ್ನಲಾಗುತ್ತಿಿದೆ.
ಭಾರತದಿಂದ ಉಡಾಯಿಸಿರುವ ಅಮೆರಿಕಾದ ಉಪಗ್ರಹಗಳಲ್ಲಿ ಭಾರೀ ತೂಕದ ಉಪಗ್ರಹವಾಗಲಿದೆ. ಭಾರತ ಮತ್ತು ಅಮೆರಿಕಾ ದೇಶಗಳು ಪರಸ್ವರ ಸಹಕಾರ ನೀಡುವುದರಲ್ಲಿ ಇದೊಂದು ಹೆಮ್ಮೆೆಯ ಕ್ಷಣವಾಗಲಿದೆ.
ಮೊಬೈಲ್ ನೆಟ್ವರ್ಕ್ ಸಿಗದ ಸ್ಥಳಗಳಿಗೆ ನೆಟ್ವರ್ಕ್ ದೊರಕಿಸುವುದು ಉದ್ದೇಶ:
ಬ್ಲೂಬರ್ಡ್-6 ಉಪಗ್ರಹ ಎಎಸ್ಟಿಿ ಸ್ಪೇಸ್ ಮೊಬೈಲ್ ಎಂಬ ಟೆಕ್ಸಾಾಸ್ ಮೂಲದ ಕಂಪನಿಯ ಅದ್ಬುತ ಆಲೋಚನೆಯ ಸಹಕಾರವಾಗಿದೆ. ಈ ಸಂಸ್ಥೆೆ ಬಾಹ್ಯಾಾಕಾಶದಲ್ಲಿ ಉಪಗ್ರಹಗಳ ಜಾಲವೊಂದನ್ನು ನಿರ್ಮಿಸಿ ಆ ಮೂಲಕ ಭೂಮಿಯ ಎಲ್ಲ ಮೂಲೆಗಳಿಗೆ ಅದರಲ್ಲೂ ಮೊಬೈಲ್ ಟವರ್‌ಗಳನ್ನು ನಿರ್ಮಿಸುವುದು ಅಸಾಧ್ಯವಾದ ಅಥವಾ ಅತ್ಯಂತ ದುಬಾರಿ ಎನಿಸುವ ದುರ್ಗಮ ಪ್ರದೇಶಗಳಿಗೆ ಅತ್ಯಂತ ವೇಗದ ಅಂತರ್ಜಾಲ ಸೇವೆ ಒದಗಿಸುವ ಗುರಿ ಹೊಂದಿದೆ.
ದಟ್ಟ ಕಾಡುಗಳು, ದುರ್ಗಮ ಪರ್ವತಗಳು, ಮರುಭೂಮಿಗಳು ಅಥವಾ ದೂರದ ದ್ವೀಪಗಳ ಕೊನೆಗೂ ನಿರಂತರ ಸಂಪರ್ಕ ಸೇವೆ ಹೊಂದಲು ಇದರಿಂದ ಸಾಧ್ಯವಿದೆ.
ಬ್ಲೂಬರ್ಡ್-6 ಉಪಗ್ರಹದಲ್ಲಿ ವಿಶೇಷವಾಗಿರುವುದು ಎಂದರೆ ಅದರ ಆಂಟೆನಾ. ಇದು ಭೂಮಿಯ ಕೆಳಕಕ್ಷೆಗೆ ತೆರಳಿರುವ ಅತಿದೊಡ್ಡ ವಾಣಿಜ್ಯಿಿಕ ಆಂಟೆನಾ ಆಗಿದೆ. ಇದು ಬಾಹ್ಯಾಾಕಾಶದಲ್ಲಿ ತೆರೆಯಲ್ಪಟ್ಟಾಾಗ 2400 ಚದರ ಅಡಿಗಳಷ್ಟು ಪ್ರದೇಶವನ್ನು ವ್ಯಾಾಪಿಸಲಿದೆ. ಅಂದರೆ ಸಮಾನ್ಯವಾಗಿ ಒಂದು ಬಾಸ್ಕೆೆಟ್ ಬಾಲ್ ಮೈದಾನದಷ್ಟು ದೊಡ್ಡದಾಗಿರಲಿದೆ. ಇದು ಒಂದು ಬೃಹತ್ ಕೊಡೆಯ ರೀತಿಯಲ್ಲಿ ತೆರೆಯಲಿದ್ದು ಬಾಹ್ಯಾಾಕಾಶ ಮತ್ತು ನಿಮ್ಮ ಮೊಬೈಲ್‌ಗಳ ನಡುವೆ ಸಂಕೇತವನ್ನು ಸೆರೆಹಿಡಿದು ರವಾನಿಸಲು ಸಿದ್ಧವಾಗಲಿದೆ.
ಬ್ಲೂಬರ್ಡ್ ಉಪಗ್ರಹ 10,000 ಮೆಗಾ ಹರ್ಟ್‌ಜ್‌ ತನಕ ಬ್ಯಾಾಂಡ್ ವಿಸ್ತರಣೆ ಹೊಂದಿದೆ. ಅಂದರೆ ಇದು ಸಾವಿರಾರು ದೂರವಾಣಿ ಕರೆಗಳು, ವಿಡಿಯೋ ವೀಕ್ಷಣೆ ಮತ್ತು ನಿರಂತರ ಡೌನ್ಲೌೌಡ್ಛ್ಗಳನ್ನು ಬೆಂಬಲಿಸುವ ಅತ್ಯಂತ ವೇಗದ ಅಂತರ್ಜಾಲ ಸೇವೆ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಬ್ಲೂಬರ್ಡ್ ಸೇವೆ ಈಗಾಗಲೇ ಇರುವ ಮೊಬೈಲ್ ಜಾಲದೊಡನೆ ಕಾರ್ಯಚರಣೆ ಸುಲಭವಾಗಿಸುತ್ತದೆ. ವೊಡೊನ್, ಎಟಿಮತ್ತು ಟಿ ಅಥವಾ ಏರ್ಟೆಲ್ ನಂತ ಸಂಸ್ಥೆೆಗಳು ಎಎಸ್ಟಿಿ ಸ್ಪೇಸ್ ಮೊಬೈಲ್ ಜೊತೆ ಸಹಯೋಗ ಹೊಂದಿ ಪರವಾನಗಿ ಹೊಂದಿರುವ ರೇಡಿಯೋ ಸಂಕೇತಗಳನ್ನು ಹಂಚಿಕೊಳ್ಳುತ್ತವೆ. ಇದರ ಪರಿಣಾಮವಾಗಿ ನೀವು ಯಾವುದೇ ಮೊಬೈಲ್ ಸಂಕೇತಗಳಿಲ್ಲದ ಜಾಗದಲ್ಲಿದ್ದರೂ ಬ್ಲೂಬರ್ಡ್ ಉಪಗ್ರಹಗಳು ಅಕಾರದಲ್ಲಿರುವ ಕಣ್ಣಿಿಗೆ ಕಾಣಿಸದ ಟವರ್‌ಗಳಂತೆ ಕಾರ್ಯಾಚರಣೆ ನಡೆಸಿ ನೆಟ್ವರ್ಕ್ ಇಲ್ಲದ ಅಂತರವನ್ನು ತುಂಬುತ್ತವೆ.
ನಿರಂತರ ಸೇವೆ ಸಾಧ್ಯವಿಲ್ಲ: ಸದ್ಯದ ಮಟ್ಟಿಿಗೆ ಈ ಸೇವೆ ಎಲ್ಲಡೆಯೂ ನಿರಂತರವಾಗಿ ಲಭಿಸಲು ಸಾಧ್ಯವಿಲ್ಲ. ಈಗ ಒಂದು ಬಸ್ ತನ್ನ ಮಾರ್ಗದಲ್ಲಿ ಸಾಗುವ ರೀತಿಯಲ್ಲಿ ಉಪಗ್ರಹ ತಮ್ಮ ಮಾರ್ಗದಲ್ಲಿ ಸಾಗುವ ರೀತಿಯಲ್ಲಿ ನಿಮ್ಮ ಪ್ರದೇಶದ ಮೇಲಿನಿಂದ ಹಾದುಹೋಗುವಾಗ ಮಾತ್ರ ನಿಮಗೆ ಸಂಕೇತಗಳು ಸಿಗಲು ಸಾಧ್ಯ. ಆದರೆ ಎಎಸ್ಟಿಿ ಸ್ಪೇಸ್ ಮೊಬೈಲ್ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದೆ. 2026ರ ಆರಂಭದಲ್ಲಿ ಇಂತಹ ಆರು ಬೃಹತ್ ಉಪಗ್ರಹಗಳನ್ನು ಉಡಾಯಿಸಲು ಯೋಜನೆ ಹಾಕಿಕೊಂಡಿದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ