Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಥಳಕ್ಕೆೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹ ಕೋಗಿಲು ಅಕ್ರಮ ನಿರಾಶ್ರಿತರ ದಾಖಲೆಗಳು ಎನ್ಐಎ ತನಿಖೆಯಾಗಲಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.31
ನಗರದ ಯಲಹಂಕ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ಮನೆ ಕಟ್ಟಿಿದ ಸಂಬಂಧ ನಿರಾಶ್ರಿತರಿಗೆ ನೀಡಲಾಗಿರುವ ದಾಖಲೆಗಳ ಕುರಿತು ರಾಷ್ಟ್ರೀಯ ತನಿಖಾ ದಳ(ಎನ್‌ಎಐ)ದಿಂದ ತನಿಖೆ ನಡೆಸಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ವಿವಾದಿತ ಕೋಗಿಲು ಪ್ರದೇಶಕ್ಕೆ ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಮತ್ತಿಿತರ ನಿಯೋಗ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ನಿವಾಸಿಗಳು ಕೇವಲ 6 ತಿಂಗಳ ಹಿಂದೆ ಬಂದಿದ್ದಾರೆಂಬ ಮಾಹಿತಿ ಇದೆ. ಇವರಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಇತರ ದಾಖಲೆಗಳನ್ನು ನೀಡಿದವರು ಯಾರು? ಸತ್ಯಾಾಸತ್ಯತೆ ಹೊರಬರಲು ಎನ್ಐಎ ತನಿಖೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮುಖ್ಯಮಂತ್ರಿ ಸೂಚನೆ ಮೇರೆಗೆ ಅಧಿಕಾರಿಗಳು ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಂತಿಮ ವರದಿ ಬರುವವರೆಗೂ ಯಾವುದೇ ಕಾರಣಕ್ಕೂ ಮನೆ ಹಂಚಿಕೆಯಾಗಲಿ ಇಲ್ಲವೇ ನಿವೇಶನ ಕೊಡುವುದನ್ನು ಮಾಡಬಾರದು. ಸರ್ಕಾರ ಎಚ್ಚರಿಕೆಯ ಹೆಜ್ಜೆೆ ಇಡಬೇಕೆಂದು ಸಲಹೆ ಮಾಡಿದರು.
ಅಧಿಕಾರಿಗಳು ಈ ವಿಚಾರದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಇಂದು ಅಧಿಕಾರದಲ್ಲಿದ್ದ ಪಕ್ಷ ನಾಳೆ ಇರುವುದಿಲ್ಲ. ಪ್ರತಿಪಕ್ಷದಲ್ಲಿದ್ದವರು ಅಧಿಕಾರಕ್ಕೆ ಬರುತ್ತಾಾರೆ. ಆದರೆ ಅಧಿಕಾರಿಗಳು ಬದಲಾಗುವುದಿಲ್ಲ ಎಂಬುದನ್ನು ಮರೆಯಬಾರದು. ಆತುರಾತುರವಾಗಿ ಇವರಿಗೆ ಮನೆ ಇಲ್ಲವೇ ಪುನರ್ವಸತಿ ಕಲ್ಪಿಿಸಲು ಮುಂದಾದರೆ ಮುಂದಾಗುವ ಸಮಸ್ಯೆೆಗಳಿಗೆ ನೀವೇ ಜವಾಬ್ದಾಾರರು ಎಂದು ಎಚ್ಚರಿಸಿದರು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಟೋಪಿ ಹಾಕಿ ಬಾಂಗ್ಲಾಾದವರಿಗೆ ಈ ಸರ್ಕಾರ ಮನ್ನಣೆ ಹಾಕಿದೆ. ಆಂಧ್ರದಿಂದ ಬಂದವರು ಇಲ್ಲಿದ್ದಾರೆ. ಕೆಲವರು ಕೇರಳ ಅಂತಿದ್ದಾರೆ. ಕೆಲ ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾರೆ. ನಾವು ಬರುತ್ತೇವೆ ಎಂದು ಗೊತ್ತಾಾಗುತ್ತಿಿದ್ದಂತೆ ಬೆಂಗಳೂರಿನ ಅಕ್ಕಪಕ್ಕದ ಟ್ಯಾಾನಿ ರೋಡ್ ,ಟಿಪ್ಪೂೂ ನಗರ ಜನರನ್ನು ಇಲ್ಲಿ ತಂದು ಬಿಟ್ಟಿಿದ್ದಾರೆ.
ವಸೀಂ, ಸರ್ರಾಜ್ ಖಾನ್ ಸೇರಿ ಹಲವರು ಇವರನ್ನ ತಂದು ಇಲ್ಲಿ ಬಿಟ್ಟಿಿದ್ದಾರೆ. ಈ 150 ರ ಸಂತೆಯಲ್ಲಿ 400 ಜನರನ್ನ ತಂದು ಬಿಟ್ಟಿಿದ್ದಾರೆ. ಇವರು ಎಲ್ಲಿನವರು ಎಂಬುದು ದಾಖಲೆ ತೋರಿಸುತ್ತಿಿಲ್ಲ. ನಮಗೆ ಈ ಬಗ್ಗೆೆ ಮಾಹಿತಿ ಇದೆ. ಗೂಗಲ್ ಮ್ಯಾಾಪ್‌ನಲ್ಲಿ ವರ್ಷದ ಹಿಂದಿದ್ದ ಜಾಗ ಈಗ ಮನೆಗಳಾಗಿ ಬದಲಾಗಿವೆ. ಇದು ಹೇಗೆ ಸಾಧ್ಯ. ಇಂತಹ ಜಾಗಕ್ಕೆೆ ಕರೆಂಟ್ ಹೇಗೆ ಕೊಟ್ಟಿದ್ದಾರೆ? ಇವರು ಯಾರು ನೆಂಟರು? ಸಿದ್ದರಾಮಯ್ಯ ನೆಂಟರಾ? ಎಂದು ಪ್ರಶ್ನಿಿಸಿದರು.
ಕೋಗಿಲು ಲೇಔಟ್ ಅನ್ನು ಮಿನಿ ಬಾಂಗ್ಲಾಾದೇಶ ಮಾಡಲು ಹೊರಟಿದ್ದಾರೆ. ಬೆಂಗಳೂರಿನ ಒಂದೊಂದು ಕಡೆ ಉಡ್ತಾಾ ಬಾಂಗ್ಲಾಾ ಅಗುತ್ತಿಿದೆ. ಇವರಿಗೆ ಕೆಲಸ ಎಲ್ಲಿಂದ ಸಿಗುತ್ತದೆ. ಕೆಲಸ ಕೊಡೋರು ಯಾರು? ಇದಕ್ಕೆೆ ಹೊಣೆ ಯಾರು? ಎಂದು ಮರು ಪ್ರಶ್ನೆೆ ಮಾಡಿದರು.
ದಾಖಲೆ ಪರಿಶೀಲಿಸುವವರೆಗೂ ಮನೆ ಕೊಡಬೇಡಿ:
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಾಮಿ ಮಾತನಾಡಿ, ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳ ನೆಲ ಸಮ ಮಾಡಿ ಸರ್ಕಾರ ತಪ್ಪುು ಮಾಡುತ್ತಾಾ? ಸರಿ ಮಾಡುತ್ತಾ? ಮೊದಲು ಹೌದು ಎಂದ ಸರ್ಕಾರ ಈಗ ಪಾಕಿಸ್ತಾಾನ, ಕೇರಳ ಹಾಗೂ ವೇಣು ಗೋಪಾಲ್ ಟ್ವೀಟ್ ಬಳಿಕ ಸರ್ಕಾರ ವಿರುದ್ಧವಾಗಿ ನಡೆದುಕೊಂಡಿದೆ ಎಂದರು.
ಬಾಂಗ್ಲಾದ ರೋಹಿಂಗ್ಯಾ ಹಾಗೂ ಬೇರೆ ರಾಷ್ಟ್ರದವರು ಇಲ್ಲಿದ್ದರು. ನಾವು ಬರುವ ಹೊತ್ತಿಿಗೆ ಅವರನ್ನು ಸ್ಥಳಾಂತರ ಮಾಡಿದ್ದಾರೆ. ರಾಜ್ಯದ ಸಚಿವರು ಇದರ ಹಿಂದಿದ್ದಾರೆ. ಅವರ ಸಿಹಿ ಸುದ್ದಿಯ ಹೇಳಿಕೆ ಅರ್ಥ ಇದೇ ಇರಬಹುದು. ಹೀಗಾಗಿ ಇದರ ಬಗ್ಗೆ ಎನ್ಐಎ ತನಿಖೆ ಆಗಬೇಕು. ಪರಿಶೀಲನೆ ಆಗುವರೆಗೂ ಇಲ್ಲಿನವರಿಗೆ ಮನೆ ಕೊಡಬಾರದು ಎಂದರು.
ಮೊದಲು ರಾಜ್ಯದಲ್ಲಿ ಮನೆ ಅರ್ಜಿ ಹಾಕಿಕೊಂಡಿರುವ ದಲಿತರು ಹಾಗೂ ಬಡವರಿಗೆ ಮೊದಲು ಅವಕಾಶ ಕೊಡಿ. ಇಲ್ಲದಿದ್ದರೆ ನಾವೇ ಅಲ್ಲಿಗೆ ಅವರನ್ನ ನುಗ್ಗಿಿಸಬೇಕಾಗುತ್ತದೆ. ಮೊದಲು ನಮಗೆ ಅವಕಾಶ ಕೊಡಿ ಎಂದು ಛಲವಾದಿ ಆಗ್ರಹಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ