Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾಾರಿ ಮೇಯರ್ ಆಗಿ ಪಿ. ಗಾದೆಪ್ಪ, ಉಪ ಮೇಯರ್ ಮುಬಿನಾ ಬೀ ಆಯ್ಕೆೆ

ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.15:
ಬಳ್ಳಾಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 23ನೇ ವಾರ್ಡ್‌ನ ಪಿ. ಗಾದೆಪ್ಪ ಮತ್ತು ಉಪಮೇಯರ್ ಆಗಿ 28ನೇ ವಾರ್ಡ್‌ನ ಮುಬಿನಾ ಬೀ ಅವರು ಚುನಾಯಿತರಾಗಿದ್ದಾಾರೆ.
ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆೆಸ್‌ನಲ್ಲಿ ಸಾಮಾನ್ಯ ವರ್ಗಕ್ಕೆೆ ಮೀಸಲಾಗಿ ಮೇಯರ್ ಮತ್ತು ಉಪ ಮೇಯರ್ ಹುದ್ದೆೆಗೆ ಸಮರ್ಥರನ್ನು ಆಯ್ಕೆೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.
ಆದರೆ, ಹೈಕಮಾಂಡ್ ಶಾಸಕ ಆರ್.ವಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಒಮ್ಮತದ ನಿರ್ಧಾರ ಕೈಗೊಂಡು ಪಕ್ಷಕ್ಕಾಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿರುವ ಪಿ. ಗಾದೆಪ್ಪ ಮತ್ತು ಅಲ್ಪಸಂಖ್ಯಾಾತ ವರ್ಗಕ್ಕೆೆ ಸೇರಿರುವ ಮುಬಿನಾ ಬೀ ಅವರನ್ನು ಮೇಯರ್ ಮತ್ತು ಉಪ ಮೇಯರ್ ಹುದ್ದೆೆಗಳಿಗೆ ಅಭ್ಯರ್ಥಿಗಳನ್ನಾಾಗಿ ಆಯ್ಕೆೆ ಮಾಡಿತ್ತು.
ಆರಂಭದಲ್ಲಿ ಬಿಜೆಪಿಯ ಕೋನಂಕಿ ತಿಲಕ್ ಅವರು ಮೇಯರ್ ಹುದ್ದೆೆಗೆ, ಶ್ರೀಮತಿ ಕಲ್ಪನಾ ಅವರು ಉಪ ಮೇಯರ್ ಹುದ್ದೆೆಗೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆೆಸ್‌ನ ಆಸ್‌ೀ ಹಾಗೂ ಪಕ್ಷೇತರರಾಗಿ ಗೆಲುವು ಸಾಧಿಸಿ, ಕಾಂಗ್ರೆೆಸ್‌ನ ಸಹ ಸದಸ್ಯರಾಗಿದ್ದ ಮುಂಡ್ಲೂರು ಪ್ರಭಂಜನ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರು. ಪ್ರಭಂಜನ್ ಅವರು ‘ಮೇಯರ್ ಹುದ್ದೆೆ’ಗಾಗಿ ಕಾಂಗ್ರೆೆಸ್ ಮುಖಂಡರ ಜೊತೆ ತೀವ್ರ ಲಾಬಿ ನಡೆಸಿ, ಮನವೊಲಿಕೆಯ ನಂತರ ನಾಮಪತ್ರವನ್ನು ಹಿಂದಕ್ಕೆೆ ಪಡೆದರು. ಆಸ್‌ೀ ಅವರೂ ನಾಮಪತ್ರ ಹಿಂದಕ್ಕೆೆ ಪಡೆದರು.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆೆ ಪಡೆಯದ ಕಾರಣ ಮತದಾನ ನಡೆದು, ಕಾಂಗ್ರೆೆಸ್‌ನ ಪಿ. ಗಾದೆಪ್ಪ ಮತ್ತು ಮುಬಿನಾ ಬೀ ಅವರು ತಲಾ 28 ಮತಗಳನ್ನು ಪಡೆದಿದ್ದು, ಬಿಜೆಪಿಯ ಅಭ್ಯರ್ಥಿಗಳು ತಲಾ 13 ಮತಗಳನ್ನು ಪಡೆದರು.
ಕಲ್ಬುರ್ಗಿ ಪ್ರಾಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ನೂತನ ಮೇಯರ್ ಮತ್ತು ಉಪ ಮೇಯರ್ ಅವರ ಆಯ್ಕೆೆಯನ್ನು ಘೋಷಣೆ ಮಾಡಿದರು. ಎಡಿಸಿ ಮಹಮ್ಮದ್ ಝುವೇರ್ ಅವರು ಸಹಾಯಕ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್, ಶಾಸಕರಾದ ನಾರಾ ಭರತರೆಡ್ಡಿಿ, ಬಿ. ನಾಗೇಂದ್ರ, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷ ಅಲ್ಲಂ ಪ್ರಕಾಶ್ ಹಾಗೂ ಕಾಂಗ್ರೆೆಸ್ ಮುಖಂಡ ಬಿ. ರಾಂಪ್ರಸಾದ್ ಹಾಗೂ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ನೂತನ ಮೇಯರ್ ಆಗಿ ಆಯ್ಕೆೆಯಾದ ಪಿ. ಗಾದೆಪ್ಪ ಅವರು, ಜನಪರವಾದ ಆಡಳಿತವನ್ನು ನೀಡುತ್ತೇನೆ. ಕಾಂಗ್ರೆೆಸ್ ಪಕ್ಷವು ನನ್ನ ಎರಡು ದಶಕಗಳ ಪಕ್ಷ ನಿಷ್ಠೆೆಯನ್ನು ಗುರುತಿಸಿ ಮೇಯರ್ ಹುದ್ದೆೆಯನ್ನು ನೀಡಿದೆ. ಪಕ್ಷ ಮತ್ತು ಪಕ್ಷದ ಮುಖಂಡರು - ಕಾರ್ಯಕರ್ತರ ವಿಶ್ವಾಾಸದಿಂದಲೇ ಆಡಳಿತ ನಡೆಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ