Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ. ಮಲ್ಲೇಶ್ ಅಪ್ಪಟ ಸಮಾಜವಾದಿ, ಜಾತ್ಯಾತೀತರು

ಸುದ್ದಿಮೂಲ ವಾರ್ತೆ

ಮೈಸೂರು, ನ.18: ಚಿಂತಕ ಪ. ಮಲ್ಲೇಶ್ ಅವರು ಅಪ್ಪಟ ಸಮಾಜವಾದಿ ಮತ್ತು ಜಾತ್ಯಾತೀತರಾಗಿದ್ದರು ಎಂದು ಮುಖ್ಯಮಂತ್ರಿ ಬಣ್ಣಿಸಿದರು.

ಶನಿವಾರ ಪ.ಮಲ್ಲೇಶ್ ಅವರ ʻ ಬುದ್ಧ ನಾಗಾರ್ಜುನರ ಶೂನ್ಯಯಾನʼ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಎಂ, ಜೀವನದುದ್ದಕ್ಕೂ ಹೋರಾಟಗಳನ್ನು ಮಾಡಿಕೊಂಡು ಬಂದ ಮಲ್ಲೇಶ್, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಂವಿಧಾನ, ಎಲ್ಲರಿಗೂ ನ್ಯಾಯ ಸಿಗಬೇಕೆಂದು ಶ್ರಮಿಸಿದವರು. ಎಂದಿಗೂ ಜಾತಿ ಮಾಡಲಿಲ್ಲ. ಜಾತ್ಯಾತೀತವಾಗಿ ಎಲ್ಲರನ್ನು ನೋಡುತ್ತಿದ್ದರು. ಅವರ ಬಳಿ ಹೋಗುತ್ತಿದ್ದವರೆಲ್ಲಾ ಕೆಳಜಾತಿಯವರೇ ಎಂದರು.

ಮಲ್ಲೇಶ್ ಅವರು ಬಹಳಷ್ಟು ಪುಸ್ತಕಗಳನ್ನು ಬರೆಯಬಹುದಿತ್ತು. ಹೋರಾಟಕ್ಕೆ ಹೆಚ್ಚು ಸಮಯ ನೀಡಿದ್ದರಿಂದ ಹೆಚ್ಚು ಪುಸ್ತಕಗಳನ್ನು ಬರೆಯಲು ಸಾಧ್ಯವಾಗಲಿಲ್ಲ. ಸಾಹಿತ್ಯಾಸಕ್ತಿ, ಬರೆಯುವ ಆಸಕ್ತಿ ಇದ್ದರೂ, ಪುಸ್ತಕ ಬರೆಯುವಾಗ ಸಮಾಜವಾದ, ಸಂಸ್ಕೃತಿ, ಭಾಷೆ ಇವುಗಳ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದರು ಎಂದು ತಿಳಿಸಿದರು.

ನನಗೆ ರಾಜಕೀಯದ ಗೀಳು ಬರಬೇಕಾದರೆ ಪ್ರೊ. ಎಂ.ಡಿ ನಂಜುಂಡಸ್ವಾಮಿ ಹಾಗೂ ಮಲ್ಲೇಶ್ ಕಾರಣ. ಅವರು ನನ್ನಂಥ ಯುವಕರಿಗೆ ಮಾರ್ಗದರ್ಶಕರಾಗಿದ್ದರು ಹಾಗೂ ನಮ್ಮ ಏಳಿಗೆಯನ್ನು ಬಯಸುತ್ತಿದ್ದರು. ಬದ್ಧತೆಯ ಪ್ರಾಮಾಣಿಕ ರಾಜಕಾರಣ ಮಾಡಬೇಕು ಎಂದು ತಿಳಿಸುತ್ತಿದ್ದರು. ರಾಜಕೀಯವಾಗಿ ನಮ್ಮ ನಡುವೆ ಆತ್ಮೀಯ ಸ್ನೇಹವಿತ್ತು. ತಪ್ಪು ಮಾಡಿದ್ದನ್ನು ಹೇಳುವ ಎದೆಗಾರಿಕೆ ಅವರಿಗೆ ಇತ್ತು ಎಂದರು.

ಒಮ್ಮೆ ಮಲ್ಲೇಶ್ ಅವರು ಊಟಕ್ಕೆ ಕರೆದಿದ್ದ ಸಂದರ್ಭದಲ್ಲಿ ಜೋರು ಜಗಳ ನಡೆದರೂ ಭಂಡತನದಿಂದ ಊಟ ಮುಗಿಸಿಯೇ ಹೊರಬಂದೆ. ಮರುದಿನವೇ ತಮ್ಮನ್ನು ಕರೆದು ಮಾತನಡಿಸುತ್ತಿದ್ದ ನಿರ್ಮಲ ಹೃದಯದ ಮಲ್ಲೇಶ್ ಅವರು ಮನಸ್ಸಿನಲ್ಲಿ ಯಾವುದೇ ದ್ವೇಷ ಅಸೂಯೆಯನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಭಾರತದ ಸಮಾಜದಲ್ಲಿ ಯಾರೂ ಅನ್ಯಾಯಕ್ಕೆ ಒಳಗಾಗಬಾರದು. ಯಾರೇ ಅನ್ಯಾಯಕ್ಕೊಳಗಾದರೂ ಅದರ ವಿರುದ್ಧ ಹೋರಾಟ ಮಾಡುವವರ ಪೈಕಿ ಮಲ್ಲೇಶ್ ಮುಂಚೂಣಿಯಲ್ಲಿರುತ್ತಿದ್ದರು ಎಂದರು.

1971 ರಲ್ಲಿ ಮಲ್ಲೇಶ್ ಅವರ ಪರಿಚಯವಾಗಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು ಮಲ್ಲೇಶ್ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲಕುಹಾಕಿದರು. ಪ್ರತಿ ಸೋಮವಾರ ಮಹಾರಾಜ ಕಾಲೇಜಿನ ಕ್ಯಾಂಟೀನಿನಲ್ಲಿ ನಡೆಯುತ್ತಿದ್ದ ಸ್ಟಡಿ ಸರ್ಕಲ್ ಗೆ ತೇಜಸ್ವಿ, ಅನಂತಮೂರ್ತಿ, ಟಿ.ಎನ್. ನಾಗರಾಜ್, ಮಲ್ಲೇಶ್ ಸೇರಿದಂತೆ ಇತರ ಪ್ರಮುಖ ಸಾಹಿತಿಗಳು ಭೇಟಿ ನೀಡುತ್ತಿದ್ದರು ಎಂದು ನೆನೆಸಿಕೊಂಡರು.

ದೇಶ ಒಟ್ಟಾಗಿ ಉಳಿಯಬೇಕಾದರೆ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ನೆಲೆಯೂರಬೇಕಾದರೆ, ದ್ವೇಷದ ರಾಜಕಾರಣ ಹೋಗಬೇಕಾದರೆ ಸಿದ್ದರಾಮಯ್ಯನವಂತವರೇ ಪುನ: ಮುಖ್ಯಮಂತ್ರಿಗಳಾಗಬೇಕೆಂದು ರಾಹುಲ್ ಗಾಂಧಿ ಸೇರಿದಂತೆ ಮಲ್ಲೇಶ್ ಕೂಡ ಬಯಸಿದ್ದರು. ಖಡಕ್ ಆಗಿ ಮಾತನಾಡುತ್ತಿದ್ದ ಮಲ್ಲೇಶ್, ಸಮಾಜದಲ್ಲಿ ಬದಲಾವಣೆಗೆ ಸಂಪೂರ್ಣ ಕ್ರಾಂತಿಯಾಗಬೇಕೆಂದು ಜೆಪಿ ಹೇಳಿದಂತೆ ಸಂಪೂರ್ಣ ಕ್ರಾಂತಿ ಬಗ್ಗೆ ತುಡಿತವಿತ್ತು. ಎಷ್ಟೇ ತೊಂದರೆಯಿದ್ದರೂ ಹೋರಾಟ ನಿಲ್ಲಿಸುತ್ತಿರಲಿಲ್ಲ. ರಾಜಕೀಯವಾಗಿ ಮೇಲೆ ಬರುವವರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಹೇಳಿದಂತೆ ನಡೆದುಕೊಳ್ಳುವ ಪ್ರಾಮಾಣಿಕ ವ್ಯಕ್ತಿ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ತಿಮ್ಮಯ್ಯ ಪತ್ರಕರ್ತ ಜಿ.ಪಿ.ಬಸವರಾಜು, ಸವಿತಾ ಮಲ್ಲೇಶ್, ಉಗ್ರನರಸಿಂಹಗೌಡ, ಅಭಿರುಚಿ ಗಣೇಶ್ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ