Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಟೇಲರು ಸ್ಟೇಟ್ಸ್ ಮನ್ ಆಗಿದ್ದರು: ಬೊಮ್ಮಾಯಿ

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ.1: ಜೆ.ಎಚ್. ಪಟೇಲರು ಸ್ಟೇಟ್ಸ್ ಮನ್ ಆಗಿದ್ದರು. ಅವರು ಯಾವಾಗಲೂ ಜನ ಕಲ್ಯಾಣದ ವಿಚಾರ ಮಾಡುತ್ತಿದ್ದರು. ಅವರ ಆಲೋಚನೆಗಳು ಕಾಲಾತೀತವಾಗಿದ್ದು, ಪಟೇಲರ ಆಲೋಚನೆಗಳನ್ನು ಅನುಷ್ಠಾನ ಮಾಡುವ ಮೂಲಕ ರಾಜಕಾರಣದಲ್ಲಿ ಪರಿವರ್ತನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅಭಿಪ್ರಾಯ ಪಟ್ಟರು.

ಜೆ.ಎಚ್. ಪಟೇಲ್ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ 93 ನೇ ಜನ್ಮ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೆ ಎಚ್ ಪಟೆಲ್ ಹೀಗಳಿಕೆಗೆ ಹಿಗ್ಗದವರು ತೆಗಳಿಕೆಗೆ ಬಗ್ಗದವರು ಸ್ವಂತ ಚಿಂತನೆ ಮಾಡುವ ಶಕ್ತಿ ಅವರಿಗೆ ಇತ್ತು. ಅವರು ಚಿಂತಕರ ವರ್ಗಕ್ಕೆ ಸೇರಿದ್ದರು. ಅವರಿಗೆ ಎಷ್ಟು ಸ್ಥಿತ ಪ್ರಜ್ಞೆ ಇತ್ತು. ಅವರು ಒಬ್ಬ ನಾಯಕನಾಗಿ ಕಾಡುತ್ತಾರೆ‌. ಮುಂದಾಲೋಚನೆಯಿಂದ ಇರುವವನು ಮಾತ್ರ ನಾಯಕ ಆಗುತ್ತಾನೆ. ನಾನು ಅದರಷ್ಟವಂತ‌ ರಾಜಕಾರಣಿ ನನ್ನ ಬಹಳ ಪ್ರೀತಿ ಮಾಡುತ್ತಿದ್ದರು. ನನ್ನ ಬಸವಣ್ಣ ಅಂತ ಕರೆಯುತ್ತಿದ್ದರು ಎಂದು ಪಟೇಲರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು.

ಅವರೊಂದಿಗೆ ಎಲ್ಲರೂ ಸಂತೋಷದಿಂದ ಕೆಲಸ ಮಾಡುತ್ತಿದ್ದರು. ಅವರು ರಾಜ್ಯದ ಹಿತದೃಷ್ಟಿಯಿಂದ ಯಾವುದನ್ನು ಮಾಡಬೇಕು ಅದನ್ನಷ್ಟೇ ತೆಗೆದುಕೊಳ್ಳುತ್ತಿದ್ದರು. ಯಾರಿಂದ ಏನು ಬರುತ್ತದೆಯೋ ಅದನ್ನು ಮಾತ್ರ ತಗೆದುಕೊಳ್ಳುತ್ತಿದ್ದರು. ಅವರು ಸಾಮಾಜಿಕ ವಿಜ್ಞಾನಿಯಾಗಿದ್ದರು. ಅವರೂ ಸಂತೋಷವಾಗಿರುತ್ತಿದ್ದರು ಎದುರಿಗಿನವರನ್ನೂ ಸಂತೋಷವಾಗಿರುವಂತೆ ನೋಡುತ್ತಿದ್ದರು ಎಂದು ಹೇಳಿದರು.

ರಾಜಕಾರಣದಲ್ಲಿ ಅತ್ಯಂತ ಧೀಮಂತ ನಾಯಕ ದೇವರಾಜ ಅರಸು, ಅವರ ವಿರುದ್ಧ ಮಾತನಾಡವುದು ಕಷ್ಟ ಇತ್ತು. ದೇವರಾಜ ಅರಸರು ಪಟೇಲರ ಎದುರು ನಿಮ್ಮ ಸಿಬಿಐನವರು ನಮ್ಮ ತೋಟ, ಮನೆ ಎಲ್ಲ ಕಡೆ ಹುಡುಕಿದರು. ಆದರೂ ಅವರಿಗೆ ಏನೂ ಸಿಗಲಿಲ್ಲ ಅಂದರು. ಆಗ ಜೆ ಎಚ್. ಪಟೇಲರು ಅವರು ದಡ್ಡರಿದ್ದಾರೆ. ನೀ ಎಲ್ಲಿ ಇಟ್ಟಿದ್ದೀಯಾ ಹೇಳಿಬಿಡು ಎಂದು ಚಟಾಕಿ ಹಾರಿಸಿದರು ಎಂದು ನೆನಪಿಸಿಕೊಂಡರು.

ಜ ಎಚ್. ಪಟೇಲರು ಸ್ಟೇಟ್ಸ್ ಮನ್ ಆಗಿದ್ದರು. ಅವರು ಯಾವಾಗಲೂ ಜನ ಕಲ್ಯಾಣದ ವಿಚಾರ ಮಾಡುತ್ತಿದ್ದರು. ಜೆ.ಎಚ್ ಪಟೇಲರ ಆಲೋಚನೆಗಳನ್ನು ಅನುಷ್ಠಾನ ಮಾಡುವ ಕೆಲಸ ಮಾಡಬೇಕು. ಅನೇಕ ಜನರು ಜಿಲ್ಲೆಗಳ ವಿಭಜನೆ ಮಾಡಲು ವಿರೋಧ ಮಾಡಿದರು. ಆದರೆ, ಆಡಳಿತದ ಅನುಕೂಲಕ್ಕೆ ಹೊಸ ಜಿಲ್ಲೆಗಳ ಅಗತ್ಯವಿದೆ ಎಂದು ಏಳು ಜಿಲ್ಲೆಗಳನ್ನು ಮಾಡಿದರು. ಅವರು ಯಾವುದನ್ನೂ ಹೆಚ್ಚು ಹಚ್ಚಿಕೊಳ್ಳುತ್ತಿರಲಿಲ್ಲ. ಅವರು ಸಿಎಂ ಆಗಿದ್ದಾಗ ಮೂವರು ಸಚಿವರು ತಮ್ಮ ಕೆಲಸ ಮಾಡುವಂತೆ ಒತ್ತಡ ಹಾಕಲು ಕೆಲಸ ಆಗದಿದ್ದರೆ ರಾಜಿನಾಮೆ ನೀಡುವುದಾಗಿ ಹೇಳಿದರು. ಆಗ ಪಟೇಲರು ರಾಜೀನಾಮೆ ತಂದಿದ್ದೀರೊ, ನಾನೇ ಲೆಟರ್ ಹೆಡ್ ಕೊಟ್ಟು ರಾಜಿನಾಮೆ ಪಡೆಯಬೇಕಾ ಎಂದು ಪ್ರಶ್ನಿಸಿದರು ಅದರಿಂದ ಸಚಿವರು ದಿಗಿಲುಗೊಂಡರು ಎಂದು ಹೇಳಿದರು.

ಒಂದು ಸಮೀಕ್ಷೆಯಾಗಿದೆ. ಇಡೀ ಮನುಕುಲದಲ್ಲಿ ವಿಜ್ಞಾನಿಗಳ ಮೆದಲು ಹೆಚ್ಚು ಬಳಕೆಯಾಗಿದೆ. ಆದರೆ, ಈಗ ನಾವು ಸೃಷ್ಠಿ ಮಾಡಿರುವ ಎಐ ನಮ್ಮೊಂದಿಗೆ ಸ್ಪರ್ಧೆ ಮಾಡುವ ಕಾಲ ಬಂದಿದೆ. ಮನುಷ್ಯನ ಚಿಂತನೆ ಯಾವಾಗ ನಿಲ್ಲುತ್ತದೆಯೋ ಆಗ ಮನುಕುಲದ ನಾಶವಾಗುತ್ತದೆ. ರಾಜಕಾರಣ ಬದಲಾಗಬೇಕಾದರೆ ಜನ ಬದಲಾಗಬೇಕು.ಜನರ ಆಸೆ ಆಕಾಂಕ್ಷೆಗಳು ಬದಲಾಗಬೇಕು ಎಂದರು.

ತತ್ವಜ್ಞಾನಿ ಸಾಕ್ರೆಟಿಸ್ ಗೆ ಎರಡರಲ್ಲಿ ಒಂದು ಆಯ್ಕೆ ನೀಡಲಾಗಿತ್ತು. ನೀನು ಸಾಯಬೇಕಾ ಅಥವಾ ನಿನ್ನ ವಿಚಾರಗಳು ಸಾಯಬೇಕಾ ಅಂತ ಕೇಳಿದರು. ಸಾಕ್ರಟೀಸ್ ತಾನು ಸತ್ತು ತನ್ನ ವಿಚಾರಗಳನ್ನು ಜೀವಂತ ಉಳಿಯುವಂತೆ ಮಾಡಿದರು. ಅದೇ ರೀತಿ ಜೆ.ಎಚ್. ಪಟೇಲರ ವಿಚಾರಗಳು ಜೀವಂತವಾಗಿವೆ. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ.

ವಿವೇಕಾನಂದರು ಒಂದು ಮಾತು ಹೇಳಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಅಂತ ಹೇಳಿದ್ದರು. ಅಂತಹ ಸಾಧಕರು ಜೆ.ಎಚ್. ಪಟೇಲರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ಜೆ.ಎಚ್. ಪಟೇಲರ ಪುತ್ರರಾದ ಟಿ.ಜೆಪಟೇಲ್, ಮಹಿಮ ಪಟೇಲ್ ಮತ್ತಿತರರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ