ಸುದ್ದಿಮೂಲ ವಾರ್ತೆ ರಾಯಚೂರು, ಡಿ.24:
ಕೇಂದ್ರ ಸಂವಹನ ಇಲಾಖೆ ಬಳ್ಳಾಾರಿ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ದೇವದುರ್ಗ ಜ್ಞಾನ ಜ್ಯೋೋತಿ ಪದವಿ ಪೂರ್ವ ಕಾಲೇಜು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ದೇವದುರ್ಗ ತಾಲೂಕಾಡಳಿತ, ತಾಲ್ಲೂಕು ಪಂಚಾಯತ್, ಆರೋಗ್ಯ ಇಲಾಖೆ, ಪುರಸಭೆ ಇವರ ಆಶ್ರಯದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ವಿಕಸಿತ ಭಾರತ-2047 ಕೇಂದ್ರ ಸರ್ಕಾರದ ಮಹತ್ವಾಾಕಾಂಕ್ಷೆಯ ಯೋಜನೆಗಳ ಕುರಿತು ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವು ಡಿಸೆಂಬರ್ 23ರಂದು ನಡೆಯಿತು.
ದೇವದುರ್ಗ ಪಟ್ಟಣದ ಖೇಣೇದ ಂಕ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ದೇವದುರ್ಗದ ಉಪ ತಹಸೀಲ್ದಾಾರ ಭೀಮರಾಮ್ ಮೇಟಿ ಅವರು ಮಾತನಾಡಿ, ಸ್ವಾಾತಂತ್ರ ಹೋರಾಟದಲ್ಲಿ ವಂದೇ ಮಾತರಂ ಗೀತೆಯು ಮಹತ್ವದ ಕೊಡುಗೆ ನೀಡಿ, ರಾಷ್ಟ್ರದ ಏಕತೆ ಸಾಧಿಸಲು ಅವಕಾಶ ನೀಡಿತು ಎಂದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಹಟ್ಟಿಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ, ಭಾರತದ ಸಂವಿಧಾನ ಮತ್ತು ಭಾರತೀಯರ ಒಗ್ಗಟ್ಟು ವಸಾಹತುಶಾಹಿ, ಪಟ್ಟಭದ್ರ ಆಡಳಿಕ್ಕೆೆ ಅವಕಾಶ ನೀಡದೆ, ನಾವೆಲ್ಲರೂ ಒಂದೇ ಎನ್ನುವ ಭಾವನೆ ವಂದೇ ಮಾತರಂ ಮೂಡಿಸುತ್ತಿಿದೆ ಮತ್ತು ಏಕತೆ ಸಾಧಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.
ಈ ವೇಳೆ ಸಂಪನ್ಮೂಲ ವ್ಯಕ್ತಿಿಗಳಾಗಿ ಎಸ್.ಕೆ.ಎಮ್. ಪಿ.ಯು.ಕಾಲೇಜಿನ ಪ್ರಾಾಂಶುಪಾಲ ಸಿದ್ದಯ್ಯ ಸ್ವಾಾಮಿ ಅವರು ಮಾತನಾಡಿ, ವಂದೇ ಮಾತರಂ ಗೀತೆಯ ಅರ್ಥ ಮತ್ತು ದೇಶದ ಸ್ವಾಾತಂತ್ರ್ಯ ಹೋರಾಟದಲ್ಲಿ ವಹಿಸಿದ ಮಹತ್ವದ ಪಾತ್ರದ ಕುರಿತು ವಿವರಿಸಿದರು.
ಇದಕ್ಕೂ ಮುಂಚೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೆ ಹಿಂದಿನ ದಿನ ಅಯೋಜಿಸಲಾಗಿದ್ದ ವಿಶೇಷ ರಂಗೋಲಿ ಸ್ಪರ್ಧೆ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಾಧಿಕಾರಿ ಹಂಪಯ್ಯ, ದೇವದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಾಸಕ ಸುಭಾಷ್ ಚಂದ್ರ ಪಾಟೀಲ್, ಜ್ಞಾನ ಜ್ಯೋೋತಿ ಕಾಲೇಜಿನ ಪ್ರಾಾಂಶುಪಾಲ ಅರ್ಮೀ, ದೇವದುರ್ಗ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ನರಸಿಂಗರಾವ್, ಕಾರ್ಯದರ್ಶಿ ಬಂದೇ ನವಾಜ್, ಶಿಶು ಅಭಿವೃದ್ಧಿಿ ಯೋಜನಾಧಿಕಾರಿಗಳ ಕಚೇರಿಯ ಸಹಾಯಕರಾದ ಗಂಗಮ್ಮ ಇದ್ದರು. ಬಿ.ಲಕ್ಷ್ಮಣ ಅವರು ಸ್ವಾಾಗತಿಸಿದರು. ರಾಜಶೇಖರ್ ನಿರೂಪಿಸಿ, ವಂದಿಸಿದರು.