ಚಂದ್ರಯಾನ ಯಶಸ್ವಿಗೆ ಪ್ರಾರ್ಥನೆ
ಸುದ್ದಿಮೂಲವಾರ್ತೆ
ಕೊಪ್ಪಳ,ಆ.23:ಜಗತ್ತಿನಲ್ಲಿ ಕಾತುರದಿಂದ ಕಾಯಿಯುತ್ತಿರುವ ಚಂದ್ರಯಾನ ಯಶಸ್ವಿಯಾಗಲಿ ಎಂದು ಕೊಪ್ಪಳ ಜಿಲ್ಲೆಯಾದ್ಯಂತ ಪುಜೆ. ಪುನಸ್ಕಾರ ಹಾಗು ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ
ಇದೇ ವೇಳೆ ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಗ್ರಾಮಸ್ತರು ಸಲ್ಲಿಸಿದರು, ಇದೇ ಗ್ರಾಮದವರಾದ ರಾಜ್ಯ ವಿಕಲಚೇತನ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ ಹಾಗೂ ಗ್ರಾಮಸ್ಥರಿಂದ ವಿಶೇಷ ಪೂಜೆ ಸಲ್ಲಿಸಿ ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿ ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.
ಇದೇ ವೇಳೆ ಚಂದ್ರಯಾನ -3 ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಂದಲೂ ಪ್ರಾರ್ಥನೆ ಮಾಡಿದರು. ಕೊಪ್ಪಳ ನಗರದ ಶಿವಮೂರ್ತಸ್ವಾಮಿ ಮಹಾಂತಯ್ಯನಮಠ ಶಾಲಾ ಮಕ್ಕಳು ದೊಡ್ಡನಗೌಡ ಓಜನಳ್ಳಿಯವರ ಮನೆಯ ಮುಂದೆ ಪ್ರಾರ್ಥನೆ ಮಾಡಿದರು. ಈ ವೇಳೆ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಮಕ್ಕಳು ಕೈ ಯಲ್ಲಿ ಧ್ವಜ ಹಿಡಿದು ಶುಭ ಹಾರೈಸಿದರು. ಭಾರತ ಹಿರಿಮೆ ಪ್ರಪಂಚಕ್ಕೆ ಹರಡಲಿ ಎಂದು ವಿದ್ಯಾರ್ಥಿಗಳು ಆಶಿಸಿದರು.
ಚಂದ್ರನನ್ನು ಭಾರತದಿಂದ ಬಿಟ್ಟಿರುವ ಉಪಗೃಹ ಸ್ಪರ್ಶ ಮಾಡಲಿರೊ ಹಿನ್ನೆಲೆ ಕೊಪ್ಪಳ ಜಿಲ್ಲೆ ಗಂಗಾವತಿಯ ಸೇಂಟ್ ಪಾಲ್ಸ್ ಶಾಲೆಯ ಮಕ್ಕಳಿಂದ ವಿಶೇಷ ರೀತಿಯ ಶುಭ ಹಾರೈಸಿದರು. ಈ ವೇಳೆ ಚಂದ್ರಯಾನ-3 ನ ಪ್ರತಿ ಹಂತದ ಚಿತ್ರವನ್ನು ವಿದ್ಯಾರ್ಥಿಗಳು ಬಿಡಿಸಿ ಶುಭ ಕೋರಿದರು. ಚಂದ್ರಯಾನ-3 ಚಿತ್ರ ಬಿಡಿಸಿ ಆಲ್ ದಿ ಬೆಸ್ಟ್ ಎಂದು ನೂರಾರು ವಿದ್ಯಾರ್ಥಿಗಳು ಹೇಳಿದರು. ಯಶಸ್ವಿಯಾಗಿ ಚಂದ್ರನನ್ನು ಭೂ ಸ್ಪರ್ಶ ಮಾಡ್ಲಿ ಎಂದು ಹಾರೈಸಿದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.