Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಪಿಯುಸಿ ಲಿತಾಂಶ ಸುಧಾರಣೆಗೆ ಪೂರ್ವ ಸಿದ್ಧತೆ ಅಗತ್ಯ’

 ಸುದ್ದಿಮೂಲ ವಾರ್ತೆ ಮಸ್ಕಿ, ಡಿ.29:
ಪಿಯುಸಿ ಲಿತಾಂಶ ಸುಧಾರಣೆ ನಿಟ್ಟಿಿನಲ್ಲಿ ವಿದ್ಯಾಾರ್ಥಿಗಳು ಶಿಸ್ತುಬದ್ಧ ಅಧ್ಯಯನಕ್ಕೆೆ ಒತ್ತು ನೀಡಬೇಕು ಎಂದು ಮಸ್ಕಿಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಪಿಯು ಲಿತಾಂಶ ಬಲವರ್ಧನೆ ಹಾಗೂ ವೃತ್ತಿಿ ಮಾರ್ಗದರ್ಶನ ಕುರಿತು ಏರ್ಪಡಿಸಿದ್ದ ಕಾರ್ಯಾಗಾರಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಯುಗದಲ್ಲಿ ವಿದ್ಯಾಾರ್ಥಿಗಳ ಮುಂದೆ ಅನೇಕ ವೃತ್ತಿಿಗಳ ಆಯ್ಕೆೆಗಳಿದ್ದು, ಉಜ್ವಲ ಭವಿಷ್ಯಕ್ಕೆೆ ಪಿಯುಸಿ ಲಿತಾಂಶ ಮಾನದಂಡವಾಗಿರಲಿದೆ. ಹೀಗಾಗಿ ವಿದ್ಯಾಾರ್ಥಿಗಳು ಸಮಯ ವ್ಯರ್ಥ ಮಾಡದೇ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಮುಂದೆ ಆಯ್ಕೆೆ ಮಾಡಬೇಕಾದ ಕೋರ್ಸ್‌ಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಲು ಸಂಪನ್ಮೂಲ ವ್ಯಕ್ತಿಿಗಳಿಂದ ಕಾರ್ಯಾಗಾರ ಏರ್ಪಡಿಸಲಾಗುವುದು. ಮಸ್ಕಿಿ ಕೇಂದ್ರ ಸರ್ಕಾರದ ಮಹತ್ವಾಾಕಾಂಕ್ಷೆ ತಾಲೂಕು ಕಾರ್ಯಕ್ರಮವಾಗಿರುವುದರಿಂದ ಎಸ್ಸೆೆಸ್ಸೆೆಲ್ಸಿಿ, ಪಿಯುಸಿ ಲಿತಾಂಶದ ಬಗ್ಗೆೆ ಹೆಚ್ಚಿಿನ ನಿಗಾ ವಹಿಸಲಾಗಿದೆ. ವಿದ್ಯಾಾರ್ಥಿಗಳು, ಉಪನ್ಯಾಾಸಕರು ಒಗ್ಗೂಡಿ ಪರೀಕ್ಷೆ ಎದುರಿಸುವ ಕುರಿತು ನೀಲನಕ್ಷೆ ರೂಪಿಸಿದಾಗ ಉತ್ತಮ ಲಿತಾಂಶ ಪಡೆಯಬಹುದಾಗಿದೆ. ವಿದ್ಯಾಾರ್ಥಿಗಳು ಸಾಮಾಜಿಕ ಮಾಧ್ಯಮ, ದೂರದರ್ಶನ ವೀಕ್ಷಣೆಯಿಂದ ದೂರ ಇದ್ದು, ಗರಿಷ್ಠ ಸಮಯ ಓದಿಗೆ ಮೀಸಲು ಇಡಬೇಕು. ಗುಂಪು ಅಧ್ಯಯನಕ್ಕೆೆ ಒತ್ತು ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಿ ಮಂಜುಳಾ ಮಾತನಾಡಿ, ಪರೀಕ್ಷೆ ಎದುರಿಸಲು ಬೇಕಾದ ಮಾನಸಿಕ ದೃಢತೆ ಕಾಯ್ದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿವರಿಸಿ, ಅಗತ್ಯ ಇದ್ದಲ್ಲಿ ಮಾನಸಿಕ ತಜ್ಞರ ಮಾರ್ಗದರ್ಶನ ಪಡೆಯಲು ತಿಳಿಸಿದರು.
ಈ ವೇಳೆ ವಿದ್ಯಾಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಕಾಲೇಜು ಪ್ರಾಾಚಾರ್ಯ ಆರ್.ಕೆ. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಾಸಕರಾದ ಮಹಾಂತೇಶ್ ಮಸ್ಕಿಿ, ರಂಗಪ್ಪ, ಕಾರ್ಯಕ್ರಮ ಸಂಯೋಜಕರಾದ ಮಹತ್ವಾಾಕಾಂಕ್ಷೆ ತಾಲೂಕು ೆಲೋ ಕಲ್ಲೇಶ ಶಿದ್ರಾಾಹುತರ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ