Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು ಆರು ದಿನಗಳ ರಾಜ್ಯ ಪ್ರವಾಸ

ಸುದ್ದಿ ಮೂಲ ವಾರ್ತೆ

ಬೆಂಗಳೂರು, ಮಾ 21: ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಜಂಟಿಯಾಗಿ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಮಾರ್ಚ್‌ 26ರಿಂದ ಮಾರ್ಚ್‌ 31ರವರೆಗಿನ ಆರು ದಿನಗಳ ರಾಜ್ಯ ಪ್ರವಾಸದಲ್ಲಿ ಒಟ್ಟು ಆರು ಜಿಲ್ಲೆಗಳಿಗೆ ಭೇಟಿ ನೀಡಿ, ಜನಸಭೆ ಹಾಗೂ ರೋಡ್‌ ಷೋ ನಡೆಸಲಿದ್ದಾರೆ.

ಮಾರ್ಚ್‌ 26ರ ಬೆಳಗ್ಗೆ 11 ಗಂಟೆಗೆ ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಜನಸಭೆ ಹಾಗೂ ಸಂಜೆ 4 ಗಂಟೆಗೆ ಬೀದರ್‌ ದಕ್ಷಿಣದಲ್ಲಿ ಜನಸಭೆ ನಡೆಸಲಿದ್ದಾರೆ. ಮಾರ್ಚ್‌ 27 ರ ಬೆಳಗ್ಗೆ 11 ಗಂಟೆಗೆ ವಿಜಯಪುರದ ಇಂಡಿಯಲ್ಲಿ ಜನಸಭೆ ಹಾಗೂ ಸಂಜೆ 4 ಗಂಟೆಗೆ ಬಾಗಲಕೋಟೆಯ ತೇರದಾಳದಲ್ಲಿ ಜನಸಭೆ ನಡೆಸಲಿದ್ದಾರೆ. ಮಾರ್ಚ್‌ 28ರ ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯಲ್ಲಿ ರೋಡ್‌ ಷೋ ಹಾಗೂ ಸಂಜೆ 4 ಗಂಟಗೆ ಬದಾಮಿಯಲ್ಲಿ ಜನಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್‌ 29ರ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಸಭೆ ಹಾಗೂ ಸಂಜೆ 4 ಗಂಟೆಗೆ ಧಾರವಾಡದ ಕಲಘಟಗಿಯಲ್ಲಿ ಜನಸಭೆ ನಡೆಸಲಿದ್ದಾರೆ. ಮಾರ್ಚ್‌ 30 ರ ಬೆಳಗ್ಗೆ 10 ಗಂಟೆಗೆ ಧಾರವಾಡದಲ್ಲಿ ರೋಡ್‌ ಷೋ ಹಾಗೂ ಜನಸಭೆಯಲ್ಲಿ ಭಾಗವಹಿಸಿ, ಅದೇ ದಿನ ಸಂಜೆ 4 ಗಂಟೆಗೆ ಹಾವೇರಿಯ ಬ್ಯಾಡಗಿಯಲ್ಲಿ ಜನಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್‌ 31ರ ಬೆಳಗ್ಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜನಸಭೆ ನಡೆಸುವುದರೊಂದಿಗೆ ಈ ರಾಜ್ಯಪ್ರವಾಸ ಅಂತ್ಯಗೊಳ್ಳಲಿದೆ ಎಂದು ಪಕ್ಷ ತಿಳಿಸಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ