Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಟಿ.ನರಸಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ

ಸುದ್ದಿಮೂಲ ವಾರ್ತೆ

ಮೈಸೂರು,ಏ.25: ನಾನು ಇಲ್ಲಿಗೆ ಬಂದಾಗ ಈ ಪ್ರದೇಶ ಎಷ್ಟು ಸುಂದರವಾಗಿದೆ ಎಂದು ಅನಿಸಿತು. ಇದು ಸಂಗಮ ಸ್ಥಳ ಕಾವೇರಿ ಹಾಗೂ ಕಬಿನಿ ಸಂಗಮವಾಗಿದೆ. ಇದು ದೇವಾಲಯಗಳ ಸ್ಥಳವಾಗಿದೆ. ಇದೊಂದು ಪವಿತ್ರ ಭೂಮಿಯಾಗಿದ್ದು, ಇಲ್ಲಿಗೆ ಬಂದಿರುವುದಕ್ಕೆ ಸಂತೋಷವಿದೆ. ನಾನಿಂದು ಚುನಾವಣೆಯ ಸಮಯದಲ್ಲಿ ಇಲ್ಲಿಗೆ ಬಂದಿದ್ದು, ಚುನಾವಣೆ ಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಬೇರೆ ಬೇರೆ ಮಾತನಾಡುತ್ತಾರೆ.

ಪ್ರತಿಯೊಬ್ಬರು ನಾವು ಒಳ್ಳೆಯವರು, ಬೇರೆಯವರು ಕೆಟ್ಟವರು, ಅವರು ತಪ್ಪು ಮಾಡಿದ್ದು, ನಾವು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ನೀವು ಎಲ್ಲರ ಮಾತುಗಳನ್ನು ಆಳಿಸಿ, ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ತೀರ್ಮಾನಿಸಿ ಯಾರಿಗೆ ಮತ ಹಾಕಬೇಕು ಎಂದು ಹೇಗೆ ತೀರ್ಮಾನಿಸುತ್ತೀರಿ? ಇದಕ್ಕೆ ನಾವು ಕೆಲವು ಮೂಲಭೂತ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯ.

ನಮ್ಮ ದೇಶ ಹಾಗೂ ರಾಜ್ಯ ಹೇಗೆ ನಿರ್ಮಾಣವಾಗಿದೆ ಎಂದು ಆಲೋಚಿಸಿ. ಪ್ರತಿ ರಾಜ್ಯ ಅದರದೇ ಆದ ಸಂಸ್ಕೃತಿ, ಆಲೋಚನೆಗಳು, ಚಿಂತನೆ ಮೂಲಕ ನಿರ್ಮಾಣವಾಗುತ್ತದೆ. ಜಮೀನಿನಲ್ಲಿ ಕೆಲಸ ಮಾಡುವ ರೈತರು, ಮನೆಯಲ್ಲಿ ಕೆಲಸ ಮಾಡುವವರು ಈ ರಾಜ್ಯವನ್ನು ನೀರ್ಮಾಣ ಮಾಡಲಾಗಿದೆ. ನಾವು ನಮ್ಮ ರಾಜ್ಯ ಹಾಗೂ ದೇಶದ ಮೇಲೆ ಅಭಿಮಾನ ಯಾಕೆ ಬರುತ್ತದೆ. ಕಾರಣ, ಈ ರಾಜ್ಯ ಹಾಗೂ ದೇಶವನ್ನು ನಾವು ನಿರ್ಮಾಣ ಮಾಡಿರುತ್ತೇವೆ. ನೀವು ಯಾವಾಗ ನಿಮ್ಮ ಭೂಮಿಯಲ್ಲಿ ಶ್ರಮವಹಿಸಿ ದುಡಿದಾಗ, ಫಲ ಚೆನ್ನಾಗಿ ಬಂದರೆ, ನಿಮಗೆ ಹೆಮ್ಮೆಯ ಭಾವನೆ ಮೂಡುತ್ತದೆ. ನಿಮ್ಮ ಪರಿಶ್ರಮ, ಬೆವರು ನಿಮ್ಮ ಭೂಮಿ ಸೇರಿರುತ್ತದೆ. ಇದೇ ಪ್ರಕಾರ ಅಂದರೆ ಏನು? ತನ್ನ ರಾಜ್ಯ ಹಾಗೂ ದೇಶವನ್ನು ಕಟ್ಟುವ ಸಹಕಾರ ನೀಡುವ ಭರವಸೆಯ, ಜನರಿಗಾಗಿ ಸಮರ್ಪಿತರಾಗಿರುತ್ತಾರೆ, ಜನರ ಧ್ವನಿ ಆಲಿಸುತ್ತಾರೆ, ನಿಮ್ಮ ಸಮಸ್ಯೆ ಆಲಿಸುತ್ತಾರೋ ಅದು ನಿಜವಾದ ಸರ್ಕಾರವಾಗುತ್ತದೆ. ದೇಶದ ಬಲ ಹೆಚ್ಚಿಸಿ ವಿಕಾಸ ಮಾಡುವುದು, ವಿವಿಧ ಸಂಸ್ಕೃತಿಗಳ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಸೇವೆ ಕೂಡ ಸರ್ಕಾರಧ ಧರ್ಮವಾಗಿದೆ. ಪ್ರಾಮಾಣಿಕತೆ ಕೂಡ ಸರ್ಕಾರದ ತತ್ವವಾಗಿರಬೇಕು. ಆದರೆ ಇಂದು ಕರ್ನಾಟಕದಲ್ಲಿ ಯಾವ ಸ್ಥಿತಿ ಇದೆ.

ನಾಲ್ಕು ವರ್ಷಗಳ ಹಿಂದೆ ರಚನೆಯಾದ ಈ ಸರ್ಕಾರ ಜನರ ಬೆಂಬಲದಿಂದ ರೂಪಿತವಾದ ಸರ್ಕಾರವಲ್ಲ. ಕಳೆದ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಆಯ್ಕೆ ಮಾಡಿದ್ದಿರಿ. ಆದರೆ ಬಿಜೆಪಿಯು ಬೇರೆ ಪಕ್ಷಗಳ ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡಿ ಈ ಸರ್ಕಾರವನ್ನು ರಚಿಸಿದೆ. ಆರಂಭದಿಂದಲೇ ನಿಮ್ಮ ಭರವಸೆ ಮುರಿದಿದ್ದಾರೆ. ಆರಂಭದಿಂದಲೇ ಇವರು ದ್ರೋಹ, ದುರಾಸೆಯ ಆಧಾರದ ಮೇಲೆ ಸರ್ಕಾರ ರಚನೆಯಾಗಿದ್ದು, ಇವುಗಳಿಂದಲೇ ಸರ್ಕಾರ ಬೀಳಲಿದೆ. ಇದರ ಪರಿಣಆಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳು ಕಡಿಮೆಯಾಗುತ್ತಾ ಬಂದಿವೆ.



ಕರ್ನಾಟಕದ ಧ್ವಜ ನಮ್ಮ ಹೆಮ್ಮೆಯ ಪ್ರತೀಕವಾಗಿದ್ದು, ಸರ್ಕಾರ ಇದನ್ನು ಅಧಿಕೃತಗೊಳಿಸಲಿಲ್ಲ. ಪದೇ ಪದೆ ನಾಯಕರ ಬದಲಾವಣೆ, ಮಂತ್ರಿ ಮಂಡಲ ವಿಸ್ತರಣೆ ಮಾಡಲಿಲ್ಲ. ಸರ್ಕಾರ ಯಂತ್ರಗಳು ದುರ್ಬಲವಾಯಿತು. ಬಹಳ ಬೇಸರದ ಸಂಗತಿ ಎಂದರೆ 40% ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದೆ. ನಾಚಿಕೆ ಬಿಟ್ಟು ಲಿರ್ಲಜ್ಜತೆಯಿಂದ ರಾಜ್ಯ ಲೂಟಿ ಮಾಡಿದೆ. ಗುತ್ತಿಗೆದಾರರು ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡರು. ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಸಂಘಗಳು ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನ, ಪರಿಹಾರ ಸಿಗಲೇ ಇಲ್ಲ.

ಪೊಲೀಸ್, ಇಂಜಿನಿಯರ್ ಸೇರಿದಂತೆ ನೇಮಕಾತಿ ಅಕ್ರಮಗಳು ನಡೆದರೂ ಯಾವುದೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿಲ್ಲ. ಕಾರಣ ಇವರೆಲ್ಲರೂ ಬಿಜೆಪಿ ಜತೆ ಕೈ ಜೋಡಿಸಿದ್ದರು. ಬಿಜೆಪಿ ಶಾಸಕರ ಪುತ್ರನ ಬಳಿ 8 ಕೋಟಿ ಲಂಚದ ಹಣ ಸಿಕ್ಕಿ ಬಿದ್ದ ವಿಚಾರ ನಿಮಗೆಲ್ಲ ಗೊತ್ತಿದೆ. ಆತನ ವಿಚಾರಣೆ ನಡೆಸುವ ಬದಲು, ಶಾಸಕರು ತಲೆ ಮರೆಸಿಕೊಂಡರು. ಈ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನೂ ಬಿಡಲಿಲ್ಲ, ಮಕ್ಕಳು ತಿನ್ನುವ ಮೊಟ್ಟೆಯನ್ನು ಬಿಡಲಿಲ್ಲ, ಎಲ್ಲದರಲ್ಲೂ ಲೂಟಿ ಮಾಡಿದರು. ಈ ಸರ್ಕಾರ 40% ಕಮಿಷನ್ ಮೂಲಕ 1.50 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ಈ ಹಣದಲ್ಲಿ ಜನರಿಗೆ ಎಷ್ಟು ಅನುಕೂಲ ಮಾಡಿಕೊಬಹುದಾಗಿತ್ತು ಎಂಬ ಅಂದಾಜು ಇದೆಯಾ? 2025 ಕಿ.ಮೀ ಹೆದ್ದಾರಿ, 30 ಸಾವಿರ ಸ್ಮಾರ್ಟ್ ತರಗತಿಗಳ ನಿರ್ಮಾಣ ಮಾಡಬಹುದಾಗಿತ್ತು. 750 ಕಿ.ಮೀ ಮೆಟ್ರೋ ಲೈನ್ ನಿರ್ಮಾಣ ಮಾಡಬಹುದಿತ್ತು. ಇದರಿಂದ 30 ಲಕ್ಷ ಮನೆಗಳನ್ನು ಬಡವರಿಗಾಗಿ ಕಟ್ಟಬಹುದಾಗಿತ್ತು. ನಿಮ್ಮಲ್ಲಿ ಎಷ್ಟು ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ.

ರಾಜ್ಯ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಖಾಲಿ ಇದ್ದರೂ ನೀವು ನಿರುದ್ಯೋಗಿಗಳಿದ್ದು, ಇದರ ಅರ್ಥವೇನು? ನಿಮ್ಮ ಉದ್ಯೋಗಗಳನ್ನು ನೀಡುತ್ತಿಲ್ಲ. ಸರ್ಕಾರ ಎಷ್ಟು ಬರವಸೆಗಳನ್ನು ನೀಡಿದ್ದರೋ ಅಷ್ಟನ್ನು ಮುರಿದಿದ್ದಾರೆ. ಬಿಜೆಪಿ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಪ್ರಣಾಳಿಕೆ ಕೊಟ್ಟಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂದು ಕೇಳುತ್ತಿದೆ. ನಾವು ಎಷ್ಟೇ ಪ್ರಶ್ನೆ ಕೇಳಿದರೂ ಬಿಜೆಪಿ ಸರ್ಕಾರ ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಬಿಜೆಪಿಯವರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದರೂ ಅದರಲ್ಲೂ ಮೋಸ ಮಾಡಿದೆ. ಕೇಂದ್ರದಲ್ಲಿ ಇವರದೇ ಸರ್ಕಾರವಿದೆ. ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು, ಆದರೆ ಅದನ್ನೂ ಈ ಸರ್ಕಾರ ಮಾಡುತ್ತಿಲ್ಲ. ನಿಮ್ಮ ಮುಂದೆ ಬಂದು ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕೆಲಸ ಮಾಡಿಯೇ ಇಲ್ಲ.

ನಂದಿನಿ ವಿಚಾರವಾಗಿ ಮಾತನಾಡುವುದಾದರೆ, ನಂದಿನಿ ಕರ್ನಾಟಕದ ಹೆಮ್ಮೆಯಾಗಿದ್ದು, ಈ ಸಹಕಾರಿ ಸಂಸ್ಥೆಯನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮೊದಲು 99 ಲಕ್ಷ ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿತ್ತು. ಆದರೆ ಇಂದು 70 ಲಕ್ಷ ಲವೀಟರ್ ಮಾತ್ರ ಹಾಲು ಉತ್ಪಾದನೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ಹಾಲಿನ ಉತ್ಪಾದನೆ ಕಡಿಮೆ ಮಾಡಿದ್ದಾರೆ. ಗುಜರಾತಿನ ಸಹಕಾರಿ ಸಂಸ್ಥೆ ಅಮೂಲ ಅನ್ನು ರಾಜ್ಯಕ್ಕೆ ಪರಿಚಯಿಸುವ ಷಡ್ಯಂತ್ರ ರೂಪಿಸಿದ್ದಾರೆ. ನಿಮಗೆ ನೆನಪಿದ್ದರೆ, ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗಿ ಶಾಲಾ ಮಕ್ಕಳಿಗೆ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯನ್ನು ಪರಿಚಯಿಸಲಾಯಿತು. ಕ್ಷೀರಧಾರೆ ಕಾರ್ಯಕ್ರಮದ ಮೂಲಕ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿತ್ತು. ನಿಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವನ್ನು ಬಿಜೆಪಿ ಯಾವ ರೀತಿ ಲೂಟಿ ಮಾಡಿದ್ದಾರೆ ಎಂದು ನಿಮಗೆ ಗೊತ್ತಿರಲಿ.

ಕೆಲವು ಸರ್ಕಾರ ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತವೆ. ನಿಮ್ಮ ಸಮುದಾಯ, ಸಂಸ್ಕೃತಿಯನ್ನು ಗೌರವಿಸುತ್ತವೆ. ಆದರೆ ಈ ಸರ್ಕಾರ ಬಸವಣ್ಣ, ನಾರಾಯಣಗುರುಗಳಂತಹ ಮಹನೀಯರಿಗೆ ಅಪಮಾನ ಮಾಡಿದೆ. ಕನ್ನಡಿಗರು ತಮ್ಮ ಪರಿಶ್ರಮದಿಂದ ದುಡಿದು ಬೆಳೆದಿದ್ದು, ಬಿಜೆಪಿ ನಾಯಕರು ಚುನಾವಣೆ ವೇದಿಕೆ ಮೇಲೆ ನಿಂತು ನೀವು ಮೋದಿ ಅವರಿಗೆ ಮತ ಹಾಕದಿದ್ದರೆ, ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂಬ ಧಮಕಿ ಹಾಕುತ್ತಾರೆ. ಬಸವಣ್ಣ, ನಾರಾಯಣ ಗುರು, ಕುವೆಂಪು ಅವರು ಆಶೀರ್ವಾದ ನೀಡಿದ್ದಾರೆ, ಅಂತಹ ಜನರಿಗೆ ಈಗಿನ ಯಾವುದೇ ರಾಜಕೀಯ ನಾಯಕರ ಆಶೀರ್ವಾದ ಬೇಕಿಲ್ಲ. ಮೋದಿ ಅವರ ಆಶೀರ್ವಾದ ಬೇಕು ಎಂದು ಹೇಳಿರುವುದು ಈ ರಾಜ್ಯಕ್ಕೆ ಮಾಡಿರುವ ದೊಡ್ಡ ಅಪಮಾನ. ನಿಮ್ಮ ಆಲೋಚನೆ, ಪರಿಶ್ರಮದಿಂದ ಈ ರಾಜ್ಯ ನಿರ್ಮಾಣವಾಗಿದೆ. ನೀವು ಅದೆಷ್ಟು ಬಾರಿ ಅಸಾಧ್ಯವಾದುದನ್ನು ಸಾಧ್ಯ ಮಾಡಿದ್ದೇವೆ.



ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅದನ್ನು ತುಂಬುತ್ತಿಲ್ಲ, ಈ ಭಾಗದ ಯುವಕರು ನಿರುದ್ಯೋಗಿಗಳಾಗಿರುವುದನ್ನು ಕೇಳಿದರೆ ಮನಸ್ಸಿಗೆ ನೋವುಂಟಾಗುತ್ತದೆ. ಈ ಹುದ್ದೆಗಳು ದರ ನೀಗದಿಯಾಗಿದೆ ಎಂದು ಗೊತ್ತಾದರೆ ನಮ್ಮ ಮನಸ್ಸು ಛಿದ್ರವಾಗುತ್ತದೆ. ಸಹಾಯಕ ಪ್ರಾದ್ಯಾಪಕ, ಕಿರಿಯ ಇಂಜಿನಿಯರ್ ಹುದ್ದೆಗಳಿಗೆ 30-30 ಲಕ್ಷ ನಿಗದಿ ಮಾಡಲಾಗಿದೆ.

ಮೋದಿ ಅವರ ಆತ್ಮೀಯ ಸ್ನೇಹಿತರಾದ ಅಧಾನಿ, ಅಂಬಾನಿ ಅವರು ಸಾವಿರಾರು ಕೋಟಿ ಹಣವನ್ನು ಸಂಪಾದಿಸುತ್ತಿದ್ದು, ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗೆ ಸೂಕ್ತವಾಗಿ ಹಣ ಸೀಗುತ್ತಿಲ್ಲ. ದೊಡ್ಡ ಉದ್ಯೋಗಪತಿಗಳಿಗೆ ಬ್ಯಾಂಕುಗಳಿಂದ ಸುಲಭ ಸಾಲ ಸಿಗುತ್ತವೆ. ಅವರಿಂದ ಜಿಎಸ್ ಟಿ ಕೂಡ ಸಂಗ್ರಹಿಸುವುದಿಲ್ಲ. ಆದರೆ ಜನಸಾಮಾನ್ಯರಿಂದ ಜಿಎಸ್ ಟಿ ಸುಲಿಗೆ ಮಾಡುತ್ತಾರೆ. ಅಡುಗೆ ಅನಿಲಕ್ಕೆ 1100 ರೂ ನೀಡಬೇಕಾದ ಪರಿಸ್ಥಿತಿ ಬಂದಿದೆ. ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದೆ. ನಿಮ್ಮಿಂದ ಸುಲಿಗೆ ಮಾಡಿದ ಹಣವನ್ನು ತಮ್ಮ ಉದ್ಯಮಿ ಸ್ನೇಹಿತರಿಗೆ ನೀಡಲಾಗುತ್ತಿದೆ. ನಿಮ್ಮ ಸಹಾಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀವು ಬಡತನದಲ್ಲಿ ಸಿಲುಕಿದ್ದು, ನಿಮ್ಮನ್ನು ಬಡತನದಿಂದ ಮೇಲೆತ್ತಲು ಅವರಿಗೆ ಇಷ್ಟವಿಲ್ಲ. ನಿಮ್ಮನ್ನು ಬಡತನದಿಂದ ಮೇಲೆತ್ತಿದರೆ, ನೀವು ಅವರ ವಿರುದ್ಧ ನಿಂತು ಪ್ರಶ್ನಿಸುತ್ತೀರಿ ಎಂದು ಅವರು ನಿಮ್ಮನ್ನು ಮೇಲೆತ್ತಲು ಬಯಸುವುದಿಲ್ಲ. ಹೀಗಾಗಿ ನಿಮ್ಮನ್ನು ತುಳಿದು ಹಾಕುತ್ತಾರೆ.

ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ, ವಿದ್ಯಾ ಸಿರಿ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಜಾರಿಗೆ ತಂದಿತ್ತು. ಈ ಎಲ್ಲ ಯೋಜನೆಗಳು ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಲಾಗಿತ್ತು. ನೆರೆ, ಬರ ಬಂದು ಬೆಳೆಗಳು ನಾಶವಾದರೂ ಬಿಜೆಪಿ ಸರ್ಕಾರ ನಿಮ್ಮ ನೆರವಿಗೆ ಬರುವುದಿಲ್ಲ. ಇಲ್ಲಿನ ಆಣೆಕಟ್ಟು, ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ನಮ್ಮ ಸರ್ಕಾರ ಬಂದ ನಂತರ ರೈತರ ಸಾಲ ಮನ್ನಾ ಮಾಡಲಾಗಿತ್ತು. ಛತ್ತೀಸಘಡದಲ್ಲಿ ಅಥಿ ಹೆಚ್ಚು ಬೆಂಬಲ ಬೆಲೆ ನೀಡಲಾಗಿದೆ. ಹಿಮಾಚಲದಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದು, ಅದನ್ನು ಜಾರಿಗೊಳಿಸುತ್ತಿದ್ದೇವೆ. ಕರ್ನಾಟಕದಲ್ಲಿ ನಾವು ಕೇವಲ ಮಾತು ನೀಡುತ್ತಿಲ್ಲ. ಗ್ಯಾರಂಟಿ ನೀಡುತ್ತಿದ್ದೇವೆ. ನಾವು ಇಲ್ಲಿ ಶೇ.100 ರಷ್ಟು ಅಭಿವೃದ್ಧಿ ತರುವ ಗ್ಯಾರಂಟಿ ನೀಡುತ್ತಿದ್ದೇವೆ. 2.50 ಲಕ್ಷ ಹುದ್ದೆಗಳ ಭರ್ತಿ ಮಾಡುತ್ತೇವೆ. 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಬಡವರಿಗೆ 10 ಕೆ.ಜಿ ಅಖ್ಕಿ ಉಚಿತವಾಗಿ ನೀಡುತ್ತೇವೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ನಂದಿನಿ ಸಂಸ್ಥೆಯನ್ನು ಸಧೃಡಗೊಳಿಸುತ್ತೇವೆ. ಬೇರೆ ಸಹಕಾರಿ ಸಂಸ್ಥೆಗಳ ದಾಳಿಯಿಂದ ರಕ್ಷಣೆ ಮಾಡುತ್ತೇವೆ.

ಬಿಜೆಪಿ ನಾಯಕರು ಇಲ್ಲಿಗೆ ಬಂದು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ, ಪ್ರಧಾನಿಗಳು ಬಂದು ವಿರೋಧ ಪಕ್ಷಗಳು ನನ್ನ ಸಮಾಧಿ ತೋಡಲು ಬಯಸುತ್ತಿವೆ ಎಂದು ಹೇಳಿದ್ದಾರೆ. ಇದು ಎಂತಹ ಮಾತುಗಳು. ಈದೇಶದಲ್ಲಿ ಯಾರೊಬ್ಬರೂ ಈ ರೀತಿ ಆಲೋಚನೆ ಮಾಡುವುದಿಲ್ಲ. ನಮ್ಮ ಪ್ರಧಾನಿಗಳ ಆರೋಗ್ಯ ಉತ್ತಮವಾಗಿರಲಿ ಎಂದು ನಾವು ಆಶೀಸುತ್ತೇವೆ. ಆದರೆ ಇದು ಚುನಾವಣೆಯ ವಿಚಾರವೇ? ಇಂತಹ ವಿಚಿತ್ರ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಬದಲು, ನಿರುದ್ಯೋಗ, ಬೆಲೆ ಏರಿಕೆಯಂತಹ ಪ್ರಮುಖ ವಿಚಾರಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಈಚುನಾವಣೆಯಲ್ಲಿ ನಿಮ್ಮ ಸಾಧನೆಗಳ ವಿಚಾರಗಳ ಮೇಲೆ ನೀವು ಹೆಚ್ಚು ಮಾತನಾಡಬೇಕು. ಇದು ನಿಮ್ಮ ಜವಾಬ್ದಾರಿ. ಈ ಚುನಾವಮೆ ಮೋದಿಯವರ ಬಗ್ಗೆ ಅಲ್ಲ, ಇದು ಯಾವುದೇ ರಾಜಕೀಯ ನಾಯಕರ ಬಗ್ಗೆ ಅಲ್ಲ. ಈ ಚುನಾವಣೆ ಕರ್ನಾಟಕ ರಾಜ್ಯದ ವಿಚಾರವಾಗಿದೆ. ಕನ್ನಡಿಗರ ಅಸ್ಮಿತೆ, ಭವಿಷ್ಯದ ಬಗ್ಗೆ ಈ ಚುನಾವಣೆ ನಡೆಯುತ್ತಿದೆ. ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಬೇಕಿದ್ದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ.

ಈ ಚುನಾವಮೆ ನಿಮ್ಮ ಚುನಾವಣೆ, ನಿಮ್ಮ ಮಕ್ಕಳ ಭವಿಷ್ಯ, ನಿಮ್ಮ ಪ್ರದೇಶ ಹಾಗೂ ಸಂಸ್ಕೃತಿಯ ರಕ್ಷಣೆಯ ಚುನಾವಣೆ ಎಂದು ನೀವು ಅರ್ಥಮಾಡಿಕೊಳ್ಳದಿದ್ದರೆ ದೊಡ್ಡ ಪ್ರಮಾದವೇ ಆಗುತ್ತದೆ. ನಾನು ನಿಮ್ಮ ಪರಿಸ್ಥಿತಿ ಬಗ್ಗೆ ಹೇಳಿದ್ದನ್ನು ನಂಬದಿದ್ದರೆ, ನಿಮ್ಮ ಅನುಭವದ ಆಧಾರದ ಮೇಲೆ ನೀವು ಆಲೋಚನೆ ಮಾಡಿ. ಈ ಸರ್ಕಾರ ಬಂದ ನಂತರ ನಿಮ್ಮ ಜೀವನದಲ್ಲಿ ಬದಲಾವಣೆಯಾಗಿದೆಯೇ ಇಲ್ಲವೇ ಎಂದು ಆಲೋಚಿಸಿ. ನಿಮ್ಮ ಜೀವನದಲ್ಲಿ ಸುಧಾರಣೆ ಬಂದಿದೆಯಾ? ಬೆಲೆ ಏರಿಕೆಯಾಗಿದೆಯೋ ಇಲ್ಲವೋ? ಬದುಕಿನಲ್ಲಿ ಕಷ್ಟಗಳು ಹೆಚ್ಚಾಗಿವೆಯೋ ಇಲ್ಲವೋ? ನಿಮ್ಮ ಈ ಅನುಭವಗಳ ಆಧಾರದ ಮೇಲೆ ಆಲೋಚಿಸಿ ಮತ ಚಲಾಯಿಸಿ. ಲೂಟಿ ಮಾಡುವ ಸರ್ಕಾರ ಕಿತ್ತೊಗೆಯಿರಿ. ನಿಮ್ಮ ಹಿತ ಕಾಯುವ ಸರ್ಕಾರ ಆಧಿಕಾರಕ್ಕೆ ತನ್ನಿ. ಕರ್ನಾಟಕದ ಸಂಸ್ಕೃತಿ ಅರ್ಥಮಾಡಿಕೊಂಡು ನಿಮ್ಮ ಹೆಮ್ಮೆ ಹೆಚ್ಚಿಸುವ ಸರ್ಕಾರ ತನ್ನಿ.

ನೀವೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ವಿಶ್ವಾಸವಿದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ