Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ರವಿಕುಮಾರ್ ಆಕ್ರೋಶ

 

ಬೆಂಗಳೂರು,ಜು.3; ಇತ್ತಿಚೆಗಷ್ಟೇ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಘೋಷಣೆಯಾಗಿರುವ ಬೆನ್ನಲ್ಲೇ ಸುದೀಪ್ ವಿರುದ್ಧ ನಿರ್ಮಾಪಕ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುದೀಪ್ ಅವರು ಕೈಗೆ ಸಿಕ್ತಾ ಇಲ್ಲ. ಮುತ್ತತ್ತಿ ಸತ್ಯರಾಜ್ ಸಿನಿಮಾ ಮಾಡಲು ಕಾಲ್ ಶೀಟ್ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಂ ಎನ್ ಕುಮಾರ್, ಸುದೀಪ್ ಜೊತೆಗೆ ಹಲವು ಸಿನಿಮಾ ಮಾಡಿದ್ದೀನಿ. ಸ್ವಾತಿ‌ಮುತ್ತು, ವಿಷ್ಣುವರ್ಧನ್ ಸೇರಿದಂತೆ ವಿತರಣೆ ಮಾಡಿಕೊಂಡು ಬಂದಿದ್ದೀವಿ. ಆದರೆ ಇತ್ತಿಚೆಗೆ ಅವರ ನನ್ನ ನಡುವೆ ಬಾಂಧವ್ಯ ಅದೇನಾಗಿದೆಯೋ ಏನೋ. ಸಿನಿಮಾ ಮಾಡಲು ಕೈಗೆ ಸಿಗುತ್ತಿಲ್ಲ ಎಂದರು.

ಕಳೆದ ಹಲವು ವರ್ಷಗಳಿಂದ ನಿಮ್ಮದೆ ಸಿನಿಮಾ ಮಾಡ್ತೀವಿ ಅಂತ ಹೇಳಿದ್ದರು. ವಿಕ್ರಾಂತ್ ರೋಣ ಆದ್ಮೇಲೆ ನಿಮ್ಮದೇ ಸಿನಿಮಾ ಮಾಡೋಣಾ ಅಂತ ಹೇಳಿದರು. ಆದರೆ ಪ್ರತಿಕ್ರಿಯೆ ನೀಡುತ್ತಿಲ್ಲ. ವಾಣಿಜ್ಯ ಮಂಡಳಿಗೆ ಸಾಕಷ್ಟು ಸಲ ಪತ್ರ ಬರೆದಿದ್ದೀವಿ. ಎಲ್ಲಾ ನಾಯಕರ ಜೊತೆಗೆ ಸಿನಿಮಾ ಮಾಡಿದ್ದೀವಿ. ವ್ಯಾಪಾರದಲ್ಲಿ ಏಳು ಬೀಳು ಇರುತ್ತೆ‌. ಒಂದು ಕಮಿಟ್ಮೆಂಟ್ ಇರಬೇಕು ಅಲ್ಲವೆ ಎಂದು ಪ್ರಶ್ನಿಸಿದರು.

ಸಿನಿಮಾ ಮಾಡುವುದಾಗಿ ಹಣ ಕೂಡ ಪಡೆದಿದ್ದಾರೆ. ಪೂರ್ತಿ ಹಣ ಕೊಟ್ಟಿದ್ದೀವಿ. ನನ್ನ ಕಡೆಯಿಂದ ಇನ್ನೊಬ್ಬರಿಗೂ ಅಡ್ವಾನ್ಸ್ ಕೊಡಿಸಿದ್ದಾರೆ. ನಂದ ಕಿಶೋರ್ ಅವರನ್ನು ಕರೆಸಿ ಹಣ ಕೊಡಿಸಿದ್ದಾರೆ. ಹೈದ್ರಬಾದ್ ನ ರೈಟರ್ ನ ಕರೆಸಿ ಅಂದರು. ಕರೆಸಿದರೆ ಭೇಟಿ ಮಾಡಿಲ್ಲ. ಮನೆ ಹತ್ರ ಹೋದಾಗ ಸಿಗೋದೆ ಇಲ್ಲ. ಫೋನ್ ನಂಬರ್ ಕೊಡೋದಿಲ್ಲ. ಸ್ವಿಚ್ಡ್ ಆಫ್ ಇರುವ ನಂಬರ್ ಕೊಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.

ರಂಗ ಎಸ್.ಎಸ್.ಎಲ್.ಸಿ ಮಾಡುವಾಗ ಒಬ್ಬರಿಗೆ ಹಣ ಕೊಡಬೇಕಿತ್ತು. ಅವರು ಬಂದು ಮನೆ ಬಾಗಿಲಲ್ಲಿ ನಿಂತಿದ್ದರು. ಆಗ ಹಣ ಕೊಟ್ಟಿದ್ದು ಯಾರು ಅಂತ ಜ್ಯಾಕ್ ಮಂಜುನಾ ಕೇಳಿ. ಆ ಹೀರೋ ಬೇಕು ನಮಗೆ ಅಂತ ನಂಬಿಕೆಯಿಂದ ಹಣ ಕೊಟ್ಟಿರ್ತೀವಿ. 8 ವರ್ಷದ ಹಿಂದೆ‌ ನಡೆದಿದ್ದು. ಮಧ್ಯದಲ್ಲಿ ಕೊರೋನಾ ಬಂತು ನಾವೂ ಸುಮ್ನೆ ಆಗಿದ್ವಿ. ವಿಕ್ರಾಂತ್ ರೋಣ ಶುರು ಆದ್ಮೇಲೆ ಮಾಡಣಾ ಅಂದ್ರು. ಆದ್ರೆ ರೆಸ್ಪಾನ್ಸ್ ಇಲ್ಲ. ಈಗ ನಮ್ಮ ಕೈಗೆ ಸಿಗಲ್ಲ.‌ ಮದ್ರಾಸ್ ನಲ್ಲಿ ಒಂದು ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ. ಅವರ ಮಿಸ್ಸೆಸ್ ಗೂ ವಾಯ್ಸ್ ಮೆಸೇಜ್ ಕಳ್ಸಿದ್ದೀನಿ. ಆದ್ರೆ ಅವರು ಕೂಡ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದರು.

ಅವರ ಅಡುಗೆ ಮನೆ ರಿಪೇರಿ ಮಾಡಿದ್ದಾರೆ. ಹತ್ತು ಲಕ್ಷ ಯಾರಿಂದ ತಗೊಂಡ್ರು‌ಕೇಳಿ. ಪ್ರಮಾಣ ಮಾಡಿ ಹೇಳಲಿ. ಮನುಷ್ಯ ದೇವರಿಗೆ ಹೆದರುತ್ತಾನೆ.‌ ದೇವರ ಮುಂದೆ ಪ್ರಮಾಣ‌ ಮಾಡಿ ಹೇಳಲಿ. ಶಾಂತಿನಿವಾಸ ರಿಲೀಸ್ ಮಾಡಿಕೊಟ್ಟೆ ಆದ್ರೆ ಕಮಿಷನ್ ತೆಗೆದುಕೊಂಡಿದ್ದೀನಾ..? ಸುದೀಪ್ ಅವರು ಆರ್ ಆರ್ ನಗರದಲ್ಲಿ ಮನೆ ತೆಗೆದುಕೊಳ್ಳುವಾಗ ಹಣ ಕೊಟ್ಟಿದ್ದೀನಿ. ಆದರೆ ಈಗ ನಾನು ಮನೆ ಮಾರಿ ಹಣ ಕೊಟ್ಟಿದ್ದೀನಿ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ