Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾತ್ಮಗಾಂಧಿ ವೃತ್ತದ ರಸ್ತೇಲಿ ಸಂಚಾರ ಹರೋಹರ

ಸುದ್ದಿಮೂಲ ವಾರ್ತೆ ರಾಯಚೂರು, ಸೆ.29:
ರಾಯಚೂರಿನ ಗೋವಿಂದರಾವ್ ಪೆಟ್ರೋೋಲ್ ಬಂಕ್ ಬಳಿಯ ಮುಖ್ಯ ರಸ್ತೆೆಯಲ್ಲಿ ಎರಡೂ ಬದಿ ಇರುವ ಕಟ್ಟಡ, ಅಂಗಡಿ ಬೃಹತ್ ಮಳಿಗೆಯವರು ವಾಹನ ನಿಲುಗಡೆಗೆ ವ್ಯವಸ್ಥೆೆ ಮಾಡದ ಕಾರಣ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ.
ನಗರದ ಹೃದಯ ಭಾಗ, ಜನ ನಿಬೀಡ ಆಸ್ಪತ್ರೆೆಗಳು, ಕ್ಲಿಿನಿಕ್‌ಗಳು, ಮೆಕಾನಿಕ್ ಶಾಪ್, ಬೃಹತ್ ಶಾಪಿಂಗ್ ಮಳಿಗೆಗಳು, ವಿವಿಧ ಸರ್ಕಾರಿ, ಖಾಸಗಿ ಬ್ಯಾಾಂಕ್‌ಗಳು, ಹೊಟೇಲ್ ಮತ್ತಿಿತರ ವ್ಯಾಾಪಾರಿ ಪ್ರದೇಶವಾಗಿರುವ ಮಹಾತ್ಮ ಗಾಂಧಿ ವೃತ್ತದ ಬಳಿ ಸೋಮವಾರ , ಹಬ್ಬದ ದಿನಗಳಲ್ಲಂತೂ ಮೂಲಕ ಸಂಚರಿಸುವವರಿಗೆ ಧೈರ್ಯ ಬೇಕು, ತಾಳ್ಮೆೆಯೂ ಇರಬೇಕು ಆ ಮಟ್ಟಿಿಗೆ ಟ್ರಾಾಫಿಕ್ ಜಾಮ್ ಆಗಿ ಗಂಟೆ ಗಟ್ಟಲೆ ವಾಹನ ಸವಾರರು ಪರದಾಡುವಂತಾಗುತ್ತಿಿದೆ.
ಎರಡೂ ಬದಿ ಬೃಹತ್ ಶಾಪಿಂಗ್ ಮಾಲ್‌ಗಳು ತಲೆ ಎತ್ತಿಿದ್ದು ಅಲ್ಲಿ ಖರೀದಿಗೆ ಬರುವವರು ತಮ್ಮ ಕಾರು, ದ್ವಿಿಚಕ್ರ ವಾಹನಗಳನ್ನು ರಸ್ತೆೆ ಮೇಲೆಯೇ ನಿಲ್ಲಿಸಿ ಹೋಗುತ್ತಿಿರುವುದರಿಂದ ಆ ಮೂಲಕ ದೊಡ್ಡ ಗಾತ್ರದ ಲಾರಿಗಳು, ಕಂಟೆನರ್‌ಗಳು ಬಂದು ರಸ್ತೆೆ ಮಧ್ಯೆೆ ನಿಲ್ಲುವ ಮೂಲಕ ವಾಹನ ಸವಾರರು ಪರದಾಡಿ ಪೇಚಿಗೆ ಸಿಲುಕುವಂತಾಗುತ್ತಿಿದೆ.
ಇಂತಹ ಸಂಚಾರ ದಟ್ಟಣೆ ಗಮನಿಸುವ ಜನರು ವಾಹನ ನಿಲುಗಡೆಗೆ ವ್ಯವಸ್ಥೆೆಯೇ ಮಾಡುತ್ತಿಿಲ್ಲಘಿ, ಬೃಹತ್ ಕಟ್ಟಡ ನಿರ್ಮಿಸಿದವರಿಗೆ ವಾಹನ ನಿಲ್ಲಿಸಲು ವ್ಯವಸ್ಥೆೆ ಮಾಡಬೇಕು ಎಂಬ ಅರಿವಿಲ್ಲಘಿ. ಕೆಲವೆಡೆ ಹೆಸರಿಗೆ ನೆಲಮಹಡಿಯಲ್ಲಿ ಪಾರ್ಕಿಂಗ್ ತೋರಿಸಿದರೂ ಅಲ್ಲಿ ಕಾರು ಇಳಿಯುವ ಸಾಹಸ ಮಾಡಬೇಕು ಎನ್ನುವಂತಿದೆ. ಮತ್ತೊೊಂದೆಡೆ ವಾಹನ ಮಾಲೀಕರು ಸಹಿತ ನಿಲುಗಡೆಗೆ ಇರುವ ನೆಲಮಹಡಿಯ ಪಾರ್ಕಿಂಗ್‌ಗೆ ವಾಹನ ಒಯ್ಯದೆ ಸಂಚಾರಕ್ಕೆೆ ಅಡ್ಡಿಿ ಪಡಿಸುವ ರೀತಿ ನಿಲ್ಲಿಸಿ ಶಾಪಿಂಗ್‌ಗೆ ಹೋಗುವ ಚಾಳಿ ಬೆಳೆಸಿಕೊಂಡಿದ್ದು ನಿತ್ಯ ಒಂದಲ್ಲ ಎರಡ್ಮೂರು ಬಾರು ದಟ್ಟಣೆ ಉಂಟಾಗುತ್ತಿಿದೆ.
ಅಲ್ಲದೆ, ಅಲ್ಲಿ ಸಂಚಾರ ಪೊಲೀಸರು ಬಂದರೆ ಮಾತ್ರವೆ ದಟ್ಟಣೆ ನಿಯಂತ್ರಿಿಸಲು ಸಾಧ್ಯಘಿ. ಒಮ್ಮೆೆಮ್ಮೊೊ ಸಂಚಾರಿ ಪೊಲೀಸರು ಬರುವುದು ತಡವಾದರಂತೂ ಸಾಲುಗಟ್ಟಿಿ ಸಂಚಾರ ದಟ್ಟಣೆಯಾಗಿ ಜಗಳಗಳಾಗುತ್ತಿಿವೆ. ಹೀಗಾಗಿ, ಸೋಮವಾರ, ಹಬ್ಬದ ಸಂದರ್ಭದಲ್ಲಿ ನಾಲ್ಕೈದು ಜನ ಸಂಚಾರಿ ಪೊಲೀಸರನ್ನು ಅಲ್ಲಿ ನಿಯೋಜಿಸಬೇಕು ಎಂಬ ಒತ್ತಾಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಈ ಬಗ್ಗೆೆ ಸಂಚಾರಿ ಪೊಲೀಸರು ಸಹಿತ ಕಿರಿಕಿರಿ ಅನುಭವಿಸು ವಂತಾಗಿದ್ದು ಎಷ್ಟೆೆ ಬಾರಿ ವಾಹನ ವ್ಯವಸ್ಥಿಿತವಾಗಿ ನಿಲ್ಲಿಸಲು ಜನರಿಗೆ ಹೇಳಿದರೂ ಕೇಳುತ್ತಿಿಲ್ಲಘಿ. ಇದಕ್ಕಾಾಗಿ ದಂಡ ಹಾಕಿದರೂ ಜಗ್ಗುತ್ತಿಿಲ್ಲ ಎನ್ನುವ ಬೇಸರ ವ್ಯಕ್ತಪಡಿಸುತ್ತಿಿದ್ದಾಾರೆ. ಜನರಿಗೂ ಪ್ರಜ್ನೆೆ ಇರಬೇಕು ಸಂಚಾರಿ ನಿಯಮದ ತಿಳುವಳಿಕೆ ಬರಬೇಕು ಅಂದಾಗ ಸಂಚಾರ ಸುಗಮ ಸಾಧ್ಯವಾಗಲಿದೆ ಎಂಬ ಮಾತು ಪೊಲೀಸರದ್ದಾಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ