Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲುಪಿನ್ ಡಯಾಗ್ನಸ್ಟಿಕ್ಸ್‌ನಿಂದ ಪ್ರಾದೇಶಿಕ ಪ್ರಯೋಗಾಲಯ ಸ್ಥಾಪನೆ

ಸುದ್ದಿಮೂಲ ವಾರ್ತೆ

ಬೆಂಗಳೂರು, ಏ.12: ಮುಂಚೂಣಿಯ ಜಾಗತಿಕ ಫಾರ್ಮಾ ಸಂಸ್ಥೆ ಲುಪಿನ್ ಲಿಮಿಟೆಡ್(ಲುಪಿನ್) ದಕ್ಷಿಣ ಭಾರತದಲ್ಲಿ ತನ್ನ ಡಯಾಗ್ನಸ್ಟಿಕ್ಸ್‌ ಜಾಲದ ವಿಸ್ತರಣೆಯ ಭಾಗವಾಗಿ ಇಂದು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಅತ್ಯಾಧುನಿಕ ಪ್ರಾದೇಶಿಕ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಲಾಯಿತು.

ಕೋರಮಂಗಲದಲ್ಲಿ ಲುಪಿನ್ ಡಯಾಗ್ನೊಸ್ಟಿಕ್ಸ್‌ನ ಹೊಸ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ನಗರದಾದ್ಯಂತ ಸದ್ಯ 10 ಕಡೆಗಳಲ್ಲಿ ಪ್ರಯೋಗಾಲಯದ ಮಾದರಿ ಸಂಗ್ರಹ (ಕಲೆಕ್ಷನ್ ಸೆಂಟರ್) ಸ್ಥಾಪಿಸಲು ಮುಂದಾಗಿದೆ.

ಈ ಕುರಿತು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲುಪಿನ್ ಡಯಾಗ್ನಸ್ಟಿಕ್ಸ್‌ ಸಿಇಓ ರವೀಂದ್ರ ಕುಮಾರ್, ಭಾರತದಾದ್ಯಂತ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಿದ್ದೇವೆ. ಬೆಂಗಳೂರಿನ ಈ ಪ್ರಯೋಗಾಲಯ ಮತ್ತು ಕಲೆಕ್ಷನ್ ಸೆಂಟರ್‌ಗಳ ಮೂಲಕ ಭಾರತಾದ್ಯಂತ ಒಟ್ಟು 25 ಪ್ರಯೋಗಾಲಯಗಳು ಮತ್ತು 410 ಲುಪಿಮಿತ್ರ ಕಲೆಕ್ಷನ್ ಸೆಂಟರ್‌ಗಳನ್ನು ಹೊಂದಿದಂತಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನ ಹೊಸ ಪ್ರಯೋಗಾಲಯವು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಅತ್ಯಂತ ಪರಿಣಿತ

ಕ್ಲಿನಿಕಲ್ ತಜ್ಞರನ್ನು ಹೊಂದಿದ್ದು ಲುಪಿನ್ ಡಯಾಗ್ನೊಸ್ಟಿಕ್ಸ್ ಅತ್ಯಂತ ಉನ್ನತ ಗುಣಮಟ್ಟ ಹಾಗೂ ವಿಶ್ವಾಸಾರ್ಹ ಡಯಾಗ್ನಸ್ಟಿಕ್ಸ್‌ ಸೇವೆಗಳನ್ನು ರೋಗಿಗಳು ಮತ್ತು ಬೆಂಗಳೂರು ಹಾಗೂ ನೆರೆಹೊರೆಯ ನಗರಗಳ ಗ್ರಾಹಕರಿಗೆ ಒದಗಿಸುತ್ತದೆ ಎಂದರು.

ಇದರೊಂದಿಗೆ ದಿನನಿತ್ಯದ ಮತ್ತು ವಿಶೇಷ ಪರೀಕ್ಷೆಗಳೊಂದಿಗೆ ಈ ಪ್ರಯೋಗಾಲಯವು ಸಮಗ್ರ ಶ್ರೇಣಿಯ ಡಯಾಗ್ನೊಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತಿದ್ದು ಅದರಲ್ಲಿ ಮಾಲಿಕ್ಯುಲರ್ ಡಯಾಗ್ನೊಸ್ಟಿಕ್ಸ್, ಸೈಟೊಜೆನೆಟಿಕ್ಸ್, ಫ್ಲೋ ಸೈಟೊಮೆಟ್ರಿ, ಸೈಟಾಲಜಿ, ಮೈಕ್ರೊಬಯಾಲಜಿ, ಸೆರಾಲಜಿ, ಹೆಮಟಾಲಜಿ, ಹಿಸ್ಟೊಪೆಥಾಲಜಿ, ಇಮ್ಯುನಾಲಜಿ, ರೊಟೀನ್ ಬಯೋಕೆಮಿಸ್ಟ್ರಿ ಇತ್ಯಾದಿ ಒಳಗೊಂಡಿವೆ. ಲುಪಿನ್ ಡಯಾಗ್ನೊಸ್ಟಿಕ್ಸ್ ಅತ್ಯಾಧುನಿಕ ಆಟೊಮೇಷನ್ ಅಳವಡಿಸಿಕೊಂಡಿದೆ ಮತ್ತು ಅತ್ಯಂತ ನಿಖರ ಪರೀಕ್ಷೆಯ ಫಲಿತಾಂಶಗಳಿಗೆ ವ್ಯವಸ್ಥಿತ ಪ್ರಕ್ರಿಯೆಗಳನ್ನು ಒಳಗೊಂಡಿದೆ ಎಂದು ಹೇಳಿದರು.

“ಗುಣಮಟ್ಟದ ಡಯಾಗ್ನೊಸ್ಟಿಕ್ಸ್ ಭಾರತದ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಮತ್ತು ಅದು ಕೈಗೆಟುಕುವ ದರದಲ್ಲಿರಬೇಕು ಎಂಬುದು ನಮ್ಮ ಧ್ಯೇಯ. ನಿಖರ ರೋಗ ಪರೀಕ್ಷೆಯು ಪರಿಣಾಮಕಾರಿ ರೋಗ ನಿರ್ವಹಣೆಗೆ ಅತ್ಯಂತ ಮುಖ್ಯವಾಗಿದೆ ಮತ್ತು ನಮ್ಮ ರೋಗಿಗಳಿಗೆ ವಿಶ್ವಾಸಾರ್ಹ, ಉನ್ನತ ಗುಣಮಟ್ಟದ ರೋಗಪರೀಕ್ಷೆ ಸೇವೆಗಳನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದು ವಿವರಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ